ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೊಗಸಾದ ಎಸೆತದ ಮೂಲಕ ಬಾಬರ್ ವಿಕೆಟ್ ಪಡೆದ ಬ್ರಾಡ್: ವೀಡಿಯೊ

England vs Pakistan: Stuart Broad gets Babar Azam with a beauty

ಸೌತಾಂಪ್ಟನ್, ಆಗಸ್ಟ್ 15: ಅದ್ಭುತ ಎಸೆತದ ಮೂಲಕ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್, ಪಾಕಿಸ್ತಾನ ಅಪಾಯಕಾರಿ ಬ್ಯಾಟ್ಸ್‌ಮನ್ ಬಾಬರ್ ಅಝಾಮ್ ವಿಕೆಟ್ ಪಡೆದಿದ್ದಾರೆ. ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ಪಾಕಿಸ್ತಾನ ದ್ವಿತೀಯ ಟೆಸ್ಟ್‌ನಲ್ಲಿ ಬೆಸ್ಟ್ ಎಸೆತಕ್ಕಾಗಿ ಬ್ರಾಡ್ ಗಮನ ಸೆಳೆದಿದ್ದಾರೆ.

ಎಡಚರ ದಿನ: ಕ್ರಿಕೆಟ್ ಇತಿಹಾಸದ ಟಾಪ್ 10 ಎಡಗೈ ಬ್ಯಾಟ್ಸ್‌ಮನ್‌ಗಳಿವರುಎಡಚರ ದಿನ: ಕ್ರಿಕೆಟ್ ಇತಿಹಾಸದ ಟಾಪ್ 10 ಎಡಗೈ ಬ್ಯಾಟ್ಸ್‌ಮನ್‌ಗಳಿವರು

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಪರ ಬಾಬರ್ ಅಝಾಮ್ ಉತ್ತಮ ಸ್ಟ್ಯಾಂಡ್ ಕೊಟ್ಟಿದ್ದರು. 4ನೇ ಕ್ರಮಾಂಕದಲ್ಲಿ ಬಂದಿದ್ದ ಅಝಾಮ್ 47 ರನ್ ಬಾರಿಸಿ ಅರ್ಧ ಶತಕದ ಅಂಚಿನಲ್ಲಿದ್ದರು. ಆದರೆ 63.4ನೇ ಓವರ್‌ನಲ್ಲಿ ಬ್ರಾಡ್ ಎಸೆತಕ್ಕೆ ಬಾಬರ್ ನಿರ್ಗಮಿಸಬೇಕಾಗಿ ಬಂತು.

ಇಂಗ್ಲೆಂಡ್ vs ಪಾಕಿಸ್ತಾನ, ದ್ವಿತೀಯ ಟೆಸ್ಟ್, Live ಸ್ಕೋರ್‌ಕಾರ್ಡ್

1
46763

64ನೇ ಓವರ್‌ನ ಬ್ರಾಡ್ ಎಸೆದ ಚೆಂಡು ಬಾಬರ್ ಅಝಾಮ್ ಅವರ ಬ್ಯಾಟ್‌ನ ಎಡ್ಜ್‌ಗೆ ತಾಗಿ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕೈ ಸೇರಿತು. ಶುಕ್ರವಾರ 2ನೇ ದಿನದಾಟ ಮುಕ್ತಾಯದ ವೇಳೆಗೆ ಬ್ರಾಡ್ ಖಾತೆಯಲ್ಲಿ 3 ವಿಕೆಟ್‌ಗಳಿದ್ದವು. ಇನ್ನು ಇಂಗ್ಲೆಂಡ್ ಮತ್ತೊಬ್ಬ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಕೂಡ 3 ವಿಕೆಟ್ ಪಡೆದಿದ್ದರು.

2ನೇ ದಿನದಾಟದ ಮುಕ್ತಾಯದ ವೇಳೆಗೆ ಪಾಕಿಸ್ತಾನ, 86 ಓವರ್ ಮುಕ್ತಾಯಕ್ಕೆ 9 ವಿಕೆಟ್ ಕಳೆದು 223 ರನ್ ಗಳಿಸಿತ್ತು. ಮೊದಲ ಟೆಸ್ಟ್‌ನಲ್ಲಿ ಗೆದ್ದಿರುವ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿರುವುದರಿಂದ ಸರಣಿ ಉಳಿಸುವ ನಿಟ್ಟಿಯಲ್ಲಿ ಪಾಕ್‌ಗೆ ಈ ಪಂದ್ಯದ ಗೆಲುವು ಮುಖ್ಯವಾಗಿದೆ.

Story first published: Saturday, August 15, 2020, 12:15 [IST]
Other articles published on Aug 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X