ಮ್ಯಾನ್ಚೆಸ್ಟರ್, ಜುಲೈ 15: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆತಿಥ್ಯ ವಹಿಸಿದ್ದ ಇಂಗ್ಲೆಂಡ್ಗೆ ತವರಿನಲ್ಲೇ ಮುಖಭಂಗವಾಗಿತ್ತು. ಇತ್ತಂಡಗಳ ನಡುವಿನ ಮೊದಲ ಟೆಸ್ಟ್ನಲ್ಲಿ ಜೇಸನ್ ಹೋಲ್ಡರ್ ಬಳಗ 4 ವಿಕೆಟ್ ಗೆಲುವನ್ನಾಚರಿಸಿ, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿತ್ತು.
ಫೀಫಾ ಪ್ಲೇಯರ್ ರೇಟಿಂಗ್ನಲ್ಲಿರುವ ಭಾರತದ ಟಾಪ್ 5 ಕ್ರಿಕೆಟಿಗರು ಇವರು
ಟೆಸ್ಟ್ ಸರಣಿಯನ್ನು ಉಳಿಸಿಕೊಳ್ಳಬೇಕಾದರೆ ದ್ವಿತೀಯ ಟೆಸ್ಟ್ನಲ್ಲಿ ಇಂಗ್ಲೆಂಡ್ ಗೆಲ್ಲಲೇಬೇಕಾಗಿದೆ. ಆರಂಭಿಕ ಟೆಸ್ಟ್ ವೇಳೆ ಮಗುವಿನ ನಿರೀಕ್ಷೆಯಲ್ಲಿದ್ದ ಇಂಗ್ಲೆಂಡ್ ಎಂದಿನ ನಾಯಕ ಜೋ ರೂಟ್ ಮೈದಾನಕ್ಕಿಳಿದಿರಲಿಲ್ಲ. ರೂಟ್ ಅನುಪಸ್ಥಿತಿಯಲ್ಲಿ ಆಲ್ ರೌಂಡರ್ ಬೆನ್ ಸ್ಟೋಕ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಇದೀಗ ರೂಟ್ ಮತ್ತೆ ತಂಡಕ್ಕೆ ಮರಳಿದ್ದಾರೆ. ನಾಯಕನ ಆಗಮನ ಆಂಗ್ಲರಿಗೆ ಬಲ ತುಂಬಿದೆ.
ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್ ಪಂದ್ಯ, Live ಸ್ಕೋರ್ಕಾರ್ಡ್
ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಜುಲೈ 16ರಂದು ಮ್ಯಾನ್ಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಹಿಂದಿನ ಪಂದ್ಯದಂತೆ ದ್ವಿತೀಯ ಟೆಸ್ಟ್ ಕೂಡ ಭಾರತೀಯ ಕಾಲಮಾನ 3:30 PMಗೆ ಚಾಲನೆಗೊಳ್ಳಲಿದೆ. ಸೋನಿ ನೆಟ್ವರ್ಕ್ಸ್ ಚಾನೆಲ್ಗಳಲ್ಲಿ ಪಂದ್ಯ ನೇರಪ್ರಸಾರಗೊಳ್ಳಲಿದೆ. ಸೋನಿ Livನಲ್ಲಿ ನೆಟ್ಟಿಗರು ಪಂದ್ಯ ವೀಕ್ಷಿಸಬಹುದು. ಇನ್ನು ಮೈಖೇಲ್ ಕನ್ನಡ ಕೂಡ ಲೈವ್ ಸ್ಕೋರ್ಕಾರ್ಡ್ ಪ್ರಕಟಿಸಲಿದೆ, ಪಂದ್ಯದ ಅಪ್ಡೇಟ್ಸ್ ನೀಡಲಿದೆ.
ಪುತ್ರನ ಸಾಧನೆಗೆ ಹೆಮ್ಮೆಪಟ್ಟ ಅನಿಲ್ ಕುಂಬ್ಳೆ: ತಂದೆಯ ಹವ್ಯಾಸದಲ್ಲಿ ಮಾಯಾಸ್ ಕುಂಬ್ಳೆ ಗಂಭೀರ ಹೆಜ್ಜೆ
ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ನ ಬ್ಯಾಟಿಂಗ್ ಬಣ ಅಷ್ಟೇನೂ ಪ್ರದರ್ಶನ ನೀಡಿರಲಿಲ್ಲ. ಅತ್ತ ಬೌಲರ್ಗಳೂ ಕೂಡ ಕೆರಿಬಿಯನ್ನರನ್ನು ಕಟ್ಟಿಹಾಕುವಲ್ಲಿ ಎಡವಿದರು. ವೇಗಿ ಸ್ಟುವರ್ಟ್ ಬ್ರಾಡ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದು ಒಂದರ್ಥದಲ್ಲಿ ಇಂಗ್ಲೆಂಡ್ ಸೋಲಿಗೆ ನೆಪವಾಗಿ ಕಾಣಿಸಿದರೆ, ವೆಸ್ಟ್ ಇಂಡೀಸ್ ತಂಡ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಚತುರ ಪ್ರದರ್ಶನ ನೀಡಿ ಗೆಲುವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಸರಣಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದ್ವಿತೀಯ ಟೆಸ್ಟ್ ಆಂಗ್ಲರಿಗೆ ಪ್ರಮುಖವಾದರೆ, ಸರಣಿ ಗೆಲ್ಲಲು ವೆಸ್ಟ್ ಇಂಡೀಸ್ ಕೂಡ ಕಣ್ಣಿಟ್ಟಿದೆ. ಹೀಗಾಗಿ ದ್ವಿತೀಯ ಪಂದ್ಯ ಕುತೂಹಲ ಮೂಡಿಸಿದೆ.