ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ವೆಸ್ಟ್ ಇಂಡೀಸ್: ನಿರ್ಣಾಯಕ ಟೆಸ್ಟ್‌ ವೇಳೆಯ ಹವಾಮಾನ ವರದಿ

England vs West Indies 3rd Test weather report

ಮ್ಯಾನ್ಚೆಸ್ಟರ್, ಜುಲೈ 23: ಬೆನ್ ಸ್ಟೋಕ್ಸ್ ಅವರ ವೀರೋಚಿತ ಆಟದ ನೆರವಿನಿಂದ, ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್‌ ನಲ್ಲಿ ಇಂಗ್ಲೆಂಡ್ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳು 1-1 ಸಮಬಲ ಸಾಧಿಸಿವೆ. ಮೂರನೇ ಮತ್ತು ಸರಣಿ ನಿರ್ಣಾಯಕ ಪಂದ್ಯ ಜುಲೈ 24ರ ಶುಕ್ರವಾರ ಆರಂಭವಾಗಲಿದೆ.

ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!

ಇಂಗ್ಲೆಂಡ್ vs ವೆಸ್ಟ್‌ ಇಂಡೀಸ್ ಟೆಸ್ಟ್ ಸರಣಿ ಆರಂಭದಿಂದಲೂ ವರುಣನ ಕಾಟವಿತ್ತು. ಮೊದಲ ಎರಡೂ ಪಂದ್ಯಗಳು ಮಳೆಯಿಂದಾಗಿ ತಡವಾಗಿ ಆರಂಭವಾಗಿತ್ತು. ಮೂರನೇ ಟೆಸ್ಟ್‌ ವೇಳೆಯೂ ಮಳೆಯ ತೊಂದರೆ ಕಾಡಲಿದೆಯೇ? ಹೌದೆನ್ನುತ್ತದೆ ಮ್ಯಾನ್ಚೆಸ್ಟರ್ ಹವಾಮಾನ ವರದಿ.

ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

ಮೂರನೇ ಮತ್ತು ಟೆಸ್ಟ್ ಪಂದ್ಯ ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲನೇ ದಿನ ಮಳೆಯ ಸಾಧ್ಯತೆ ತುಂಬಾ ಕಡಿಮೆ ಅಂದರೆ 6 ಶೇಕಡಾ ಇರಲಿದೆ. ಆದರೆ ಶನಿವಾರ ಮತ್ತು ಭಾನುವಾರ ಮ್ಯಾನ್ಚೆಸ್ಟರ್‌ನಲ್ಲಿ ವರುಣನ ಅಬ್ಬರ ಜೋರಿರಲಿದೆ. ಈ ಎರಡು ದಿನ ಮಳೆಯ ಸಾಧ್ಯತೆ ಶೇ. 69ರಿಂದ 66ರಷ್ಟಿದೆ.

ಪತ್ನಿ ರಿತಿಕಾಗೆ ಕಿರಿಕಿರಿ ನೀಡುವ ರೋಹಿತ್‌ ಶರ್ಮಾರ 2 ಕೆಟ್ಟ ಅಭ್ಯಾಸಗಳಿವು!ಪತ್ನಿ ರಿತಿಕಾಗೆ ಕಿರಿಕಿರಿ ನೀಡುವ ರೋಹಿತ್‌ ಶರ್ಮಾರ 2 ಕೆಟ್ಟ ಅಭ್ಯಾಸಗಳಿವು!

3ನೇ ಟೆಸ್ಟ್‌ನ 4ನೇ ದಿನದಾಟದ ವೇಳೆ ಅಂದರೆ ಸೋಮವಾರ, ಕೊಂಚ ಬಿಸಿಲನ್ನು ನಿರೀಕ್ಷಿಸಬಹುದು. ಕೊನೇಯ ದಿನದಾಟವಾದ ಮಂಗಳವಾರ ಮತ್ತೆ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ. ಸೋಮವಾರ ಮಳೆಯ ಸಾಧ್ಯತೆ 25 ಶೇ. ಇದ್ದರೆ, ಮಂಗಳವಾರ 71 ಶೇ. ಇರಲಿದೆ.

Story first published: Thursday, July 23, 2020, 17:05 [IST]
Other articles published on Jul 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X