ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಾಮಾಜಿಕ ಜಾಲತಾಣ ಬಹಿಷ್ಕರಿಸಲು ಇಂಗ್ಲೆಂಡ್ ಸಿದ್ಧ: ಸ್ಟುವರ್ಟ್ ಬ್ರಾಡ್

England willing to boycott social media, says Stuart Broad

ಲಂಡನ್: ಜಾಲತಾಣಗಳಲ್ಲಿ ನಿಂದನೆಗೆ ಪ್ರತಿಭಟನಾರ್ಥವಾಗಿ ಜಾಲತಾಣವನ್ನು ಬಹಿಷ್ಕರಿಸಲು ಇಂಗ್ಲೆಂಡ್ ಕ್ರಿಕೆಟ್ ತಂಡ ಸಿದ್ಧವಿದೆ ಎಂದು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಹೇಳಿದ್ದಾರೆ. ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಮತ್ತು ಮೊಯೀನ್ ಅಲಿಗೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬ್ರಾಡ್ ಪ್ರತಿಕ್ರಿಯಿಸಿದ್ದಾರೆ.

'ಸಾಮಾಜಿಕ ಜಾಲತಾಣದಲ್ಲಿ ಸಕಾರಾತ್ಮಕವಾದಂತಹ ಸಾಕಷ್ಟು ಸಂಗತಿಗಳಿವೆ. ಆದರೆ ನಾವು ಅವೆಲ್ಲವನ್ನೂ ಬಿಡುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ನಾವು ಸಕಾರಾತ್ಮಕ ಸಂಗತಿಗಳನ್ನು ಕಳೆದುಕೊಳ್ಳುವುದಾದರೆ, ನಾವು ಆ ನಿಲುವಿನ ವಿರುದ್ಧ ನಿಲ್ಲಬೇಕಾಗುತ್ತದೆ,' ಎಂದು ಸ್ಟುವರ್ಟ್ ಬ್ರಾಡ್ ಹೇಳಿದ್ದಾರೆ.

'ಡ್ರೆಸ್ಸಿಂಗ್ ರೂಮ್‌ನಲ್ಲಿ ನಾಯಕ ಕ್ರಮ ತೆಗೆದುಕೊಂಡರೆ ನಾವು ಬದಲಾವಣೆಗೆ ತಯಾರಾಗಬೇಕಿರುತ್ತೆ. ನಮ್ಮ ತಂಡದಲ್ಲಿ ಒಳ್ಳೆಯ ಅಟಗಾರರಿದ್ದಾರೆ. ಹೀಗಾಗಿ ನಾವು ತಂಡದ ನಂಬಿಕೆ ಕಡೆಗೆ ನಿಲ್ಲಬೇಕಾಗುತ್ತದೆ,' ಎಂದು ಬ್ರಾಡ್ ಹೇಳಿದ್ದಾರೆ. ಅಂದ್ಹಾಗೆ ಮೊಯೀನ್ ಅಲಿ ಈಗ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅಡುತ್ತಿದ್ದಾರೆ. ರಾಜಸ್ಥಾನ್ ತಂಡದಲ್ಲಿರುವ ಜೋಫ್ರಾ ಆರ್ಚರ್ ಗಾಯಗೊಂಡು ತಂಡದಿಂದ ಹೊರಗಿದ್ದಾರೆ.

ಫುಟ್ಬಾಲ್‌ನಲ್ಲೂ ಇಂಥದ್ದೇ ಪ್ರಕರಣಕ್ಕಾಗಿ ಸ್ಕಾಟಿಶ್ ಚಾಂಪಿಯನ್ಸ್ ರೇಂಜರ್ಸ್ ಮತ್ತು ಸ್ವಾನ್‌ಸೀ ಸಿಟಿ ಕೂಡ ಸಾಮಾಜಿಕ ಜಾಲತಾಣವನ್ನು ಬಹಿಷ್ಕರಿಸುವ ನಿರ್ಧಾರ ತಾಳಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಟಗಾರರ ನಿಂದನೆ ನಡೆಯುತ್ತಿರುವುದು ಈ ಬೆಳವಣಿಗೆಗೆ ಕಾರಣ.

Story first published: Monday, April 12, 2021, 23:21 [IST]
Other articles published on Apr 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X