ಇಂಗ್ಲೆಂಡ್‌ ಮಹಿಳಾ ಕ್ರಿಕೆಟರ್ ಅನ್ಯಾ ಶ್ರುಬ್ಸೋಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ

2017ರ ವಿಶ್ವಕಪ್ ವಿಜೇತ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್ ತಂಡದ ಬೌಲರ್ ಅನ್ಯಾ ಶ್ರುಬ್ಸೋಲ್ 30ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 14 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇಂಗ್ಲೆಂಡ್‌ಗಾಗಿ 173 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಬಲಗೈ ವೇಗಿ 227 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20 ಮಾದರಿಯಲ್ಲಿ 102 ವಿಕೆಟಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಮಹಿಳಾ ವೇಗಿ ಎನಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ತಂಡದ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳ ಪಡೆದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅನ್ಯಾ ನಿವೃತ್ತಿ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಕಳೆದ 14 ವರ್ಷಗಳಿಂದ ನನ್ನ ದೇಶವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಸಮಯದಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿರುವುದು ಗೌರವಯುತವಾಗಿದೆ. ಆಟವು ನನ್ನೊಂದಿಗೆ ಇರುವುದಕ್ಕಿಂತ ವೇಗವಾಗಿ ಮುನ್ನಡೆಯುತ್ತಿದ್ದು, ಪ್ರಸ್ತುತದಲ್ಲಿ ನಾನು ಹಿಂದೆ ಸರಿಯುವ ಸಮಯ ಬಂದಿದೆ. ಈಗ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು, ಮುಂಬರುವ ದಿನಗಳಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ವೃತ್ತಿ ಜೀವನ ಮುಂದುವರಿಸಲಿದ್ದೇನೆ ಎಂದು ಹೇಳಿದ್ದಾರೆ.

ಕನಸಿನಲ್ಲಿಯು ಭಾವಿಸಿರಲಿಲ್ಲ ಇಷ್ಟು ದಿನಗಳವರೆಗೆ ಇಂಗ್ಲೆಂಡ್ ಪರವಾಗಿ ಆಟವಾಡುತ್ತೇನೆ ಎಂದು. ಈ ವಿಚಾರದಲ್ಲಿ ನಾನೇ ಅದೃಷ್ಟಶಾಲಿ. ದಾರಿಯುದ್ದಕ್ಕೂ ಹಲವು ಏರಿಳಿತಗಳಿದ್ದವು ಆದರೂ ಈ ಮಧ್ಯೆ ಕುಗ್ಗದೆ ಮುನ್ನಡೆದಿದ್ದಕ್ಕೆ 2017ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಎತ್ತಿ ಹಿಡಿಯಲು ಸಾಧ್ಯವಾಯಿತು. ವೃತ್ತಿ ಜೀವನದಲ್ಲಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಕುಟುಂಬದ ಬೆಂಬಲವಿಲ್ಲದೆ ಈ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಇಸಿಬಿ ಮಹಿಳಾ ಕ್ರಿಕೆಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕ್ಲೇರ್ ಕಾನರ್ ಅವರು ಪ್ರತಿಕ್ರಿಯೆ ನೀಡಿದ್ದು, ಅನ್ಯಾ ಅವರು ಇಂಗ್ಲಿಷ್ ಕ್ರಿಕೆಟ್‌ಗೆ ಮತ್ತು ಮಹಿಳಾ ಕ್ರಿಕೆಟ್‌ಗೆ ಅತ್ಯಂತ ದೊಡ್ಡ ಮಟ್ಟದ ಸೇವೆ ಸಲ್ಲಿಸಿದ್ದಾರೆ. 14 ವರ್ಷಗಳಿಂದ ಅವರು ತಂಡಕ್ಕಾಗಿ ಎಲ್ಲವನ್ನೂ ನೀಡಿದ್ದಾರೆ, ಆದ್ದರಿಂದ ಅವರು ನಿಸ್ವಾರ್ಥವಾಗಿ ನಿವೃತ್ತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್‌ ಪಂದ್ಯವಳಿಯಲ್ಲಿ ಆಸ್ಟೇಲಿಯಾ ತಂಡವನ್ನು 71 ರನ್ ಗಳಿಂದ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅನ್ಯಾ ಅವರ ಕೊನೆಯ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಅಸಾಧಾರಣ ಪ್ರದರ್ಶನದಿಂದ ಇಂಗ್ಲೆಂಡ್ ಮಹಿಳೆಯರು ವಿಶ್ವಕಪ್ ಎತ್ತಿ ಹಿಡಿದ ಮಹತ್ತರ ಗಳಿಗೆಯಲ್ಲಿ ತಂಡದ ಭಾಗವಾಗಿದ್ದರು ಎಂದರು.

Shreyas Iyer ತಂಡ ಮಂಕಾಗಿದ್ದೇಕೆ | Oneindia Kannada

"ಬೌಲರ್ ಹೊರತಾಗಿ ತಂಡಕ್ಕೆ ಪರಿಪೂರ್ಣ ಸಹ ಆಟಗಾರರಾಗಿದ್ದರು, ಸಮರ್ಪಿತ ಮತ್ತು ಚಿಂತನಶೀಲರಾದ ಅನ್ಯಾ ಈಗಾಗಲೇ 14 ವರ್ಷಗಳನ್ನು ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ಗೆ ಮೀಸಲಿಟ್ಟಿದ್ದಾರೆ. ನಂತರದಲ್ಲಿಯೂ ಆಟದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತಾರೆ" ಎಂಬ ನಂಬಿಕೆಯನ್ನು ಕಾನರ್ ವ್ಯಕ್ತಪಡಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, April 15, 2022, 13:28 [IST]
Other articles published on Apr 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X