ವಿಭಿನ್ನ ಗೇಮ್‌ಗಾಗಿ ಗಮನ ಸೆಳೆದ ಇಂಗ್ಲೆಂಡ್ ವನಿತೆಯರು: ವಿಡಿಯೋ

ಡರ್ಬಿ: ಐದು ಪಂದ್ಯಗಳ ಟಿ20 ಸರಣಿಗಾಗಿ ವೆಸ್ಟ್ ಇಂಡೀಸ್ ವನಿತೆಯರು ಇಂಗ್ಲೆಂಡ್‌ಗೆ ಪ್ರವಾಸ ಬಂದಿದ್ದರು. ಈ ವೇಳೆ 5ನೇ ಮತ್ತು ಕೊನೇಯ ಟಿ20 ಪಂದ್ಯದ ಸಂದರ್ಭ ಇಂಗ್ಲೆಂಡ್‌ ವನಿತೆಯರು ವಿಭಿನ್ನ ರೀತಿಯ ಫುಟ್ಬಾಲ್ ಆಟಕ್ಕಾಗಿ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ಮಹಿಳೆಯರ ಈ ಆಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಐಸಿಸಿ ನಿಯಮ ಉಲ್ಲಂಘನೆ: ಶಿಕ್ಷೆಗೆ ಒಳಗಾಗುತ್ತಾರಾ ಉತ್ತಪ್ಪ? ವೈರಲ್ ವಿಡಿಯೋ

ಇತ್ತಂಡಗಳ 5ನೇ ಟಿ20ಗೆ ಮಳೆ ಅಡ್ಡಿಪಡಿಸಿತು. ಮಳೆ ನಿಲ್ಲದೆ ಬೋರೆನಿಸಿದಾಗ ಸಮಯ ಕಳೆಯೋಕೆ ಇಂಗ್ಲೆಂಡ್ ವನಿತೆಯರು ವಿಭಿನ್ನ ಆಟಕ್ಕೆ ಮುಂದಾದರು. 8 ಆಟಗಾರ್ತಿಯರು ಎದುರುಬದುರು ನಿಂತು ಫುಟ್ಬಾಲನ್ನು ಹೆಡ್ ಕಿಕ್ ಮೂಲಕವೇ ಸಾಗಿಸಿ ಪ್ಲಾಸ್ಟಿಕ್ ಟಬ್ ಒಳಗೆ ಬೀಳಿಸಿದ್ದಾರೆ.

ನವೆಂಬರ್ 4-9ಕ್ಕೆ ಯುಎಇಯಲ್ಲಿ ವಿಮೆನ್ಸ್ ಚಾಲೆಂಜರ್ ಸೀರೀಸ್

ಆಂಗ್ಲ ವನಿತೆಯರು ಚೆಂಡನ್ನು ನೆಲಕ್ಕೆ ಬೀಳಲು ಬಿಡದೆ ಹೆಡ್ ಕಿಕ್ ಮೂಲಕವೇ ಚೆಂಡನ್ನು ಟಬ್‌ಗೆ ತಲುಪಿಸಿದ ಈ ವಿಡಿಯೋವನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಮಳೆಯ ಹೊತ್ತಲ್ಲಿ ತಮ್ಮನ್ನು ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಇಂಗ್ಲೆಂಡ್ ಮಹಿಳೆಯರು ಎಂದು ಒಂದು ಸಾಲನ್ನೂ ಸೇರಿಸಿಕೊಂಡಿದೆ.

ಅಂದ್ಹಾಗೆ, ಮಳೆಯ ಕಾರಣ ಪಂದ್ಯವನ್ನು 5 ಓವರ್‌ಗೆ ಮೊಟಕುಗೊಳಿಸಲಾಗಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ವೆಸ್ಟ್ ಇಂಡೀಸ್ 5 ಓವರ್‌ಗೆ 3 ವಿಕೆಟ್ ಕಳೆದು 41 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್, 4.3 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 42 ರನ್‌ನೊಂದಿಗೆ 3 ವಿಕೆಟ್ ಗೆಲುವು ದಾಖಲಿಸಿತು. ಸರಣಿ ಕೂಡ 5-0ಯಿಂದ ಆಂಗ್ಲರ ವಶವಾಗಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, October 1, 2020, 2:37 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X