ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ವನಿತೆಯರು vs ಇಂಗ್ಲೆಂಡ್ ವನಿತೆಯರು, ಟೆಸ್ಟ್‌, ಪ್ರಮುಖ ಮಾಹಿತಿ

England women vs India women one-off Test: When and Where to Watch Matches on TV, Online and Live Streaming in India

ಬ್ರಿಸ್ಟಲ್: ಇಂದಿನಿಂದ ಭಾರತ ಮಹಿಳೆಯರು ಮತ್ತು ಇಂಗ್ಲೆಂಡ್ ಮಹಿಳೆಯರ ನಡುವಿನ ಏಕಮಾತ್ರ ಟೆಸ್ಟ್‌ ಪಂದ್ಯ ಆರಂಭಗೊಳ್ಳಲಿದೆ. ಬ್ರಿಸ್ಟಲ್‌ನ ಕೌಂಟಿ ಸ್ಟೇಡಿಯಂನಲ್ಲಿ ಇತ್ತಂಡಗಳ ಪಂದ್ಯ ಜೂನ್ 16-19ರ ವರೆಗೆ ನಡೆಯಲಿದೆ. ಭಾರತೀಯ ಕಾಲಮಾನ 3:30 PMಗೆ ಪಂದ್ಯ ಶುರುವಾಗಲಿದೆ.

ಸ್ಪಾಟ್‌ ಫಿಕ್ಸಿಂಗ್ ಆರೋಪಿ ಅಂಕಿತ್ ಚೌವಾಣ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ರೆಡಿ!ಸ್ಪಾಟ್‌ ಫಿಕ್ಸಿಂಗ್ ಆರೋಪಿ ಅಂಕಿತ್ ಚೌವಾಣ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ರೆಡಿ!

ನೇರ ಪ್ರಸಾರ ಹೇಗೆ ನೋಡೋದು?
ಭಾರತ vs ಇಂಗ್ಲೆಂಡ್ ವನಿತೆಯರ ಏಕಮಾತ್ರ ಟೆಸ್ಟ್‌ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ಭಾರತದಲ್ಲಿ ಸೋನಿ ಟೆನ್ 1 ಚಾನೆಲ್‌ನಲ್ಲಿ ಲೈವ್ ವೀಕ್ಷಿಸಬಹುದು. ಉಳಿದಂತೆ ಸೋನಿ ವೈವ್ ಆ್ಯಪ್‌ನಲ್ಲೂ ನೆಟ್ಟಿಗರು ಪಂದ್ಯ ವೀಕ್ಷಿಸಬಹುದಾಗಿದೆ. ಇನ್ನು ಕ್ರಿಕ್‌ಬಝ್‌ನಂತ ಕ್ರಿಕೆಟ್‌ ಸುದ್ದಿಗಳ ಆ್ಯಪ್‌ಗಳಲ್ಲೂ ಪಂದ್ಯದ ಲೈವ್ ಸ್ಕೋರ್‌ಕಾರ್ಡ್ ಲಭ್ಯವಿದೆ.

ಭಾರತೀಯ ವನಿತೆಯರು ಟೆಸ್ಟ್‌ ಕ್ರಿಕೆಟ್ ಆಡಿ ಬರೋಬ್ಬರಿ 7 ವರ್ಷಗಳು ಕಳೆದಿವೆ. ಕಳೆದ ಸಾರಿ ಭಾರತೀಯ ವನಿತೆಯರು ಟೆಸ್ಟ್‌ ಪಂದ್ಯ ಆಡಿದ್ದು 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ. ಆವತ್ತು ಭಾರತ ಇನ್ನಿಂಗ್ಸ್‌ ಸಹಿತ 34 ರನ್ ಜಯ ಗಳಿಸಿತ್ತು. ಅದಾಗಿ ಭಾರತೀಯ ಮಹಿಳೆಯರು ಆಡುತ್ತಿರುವ ಮೊದಲ ಟೆಸ್ಟ್‌ ಪಂದ್ಯವಿದು.

WTC Final: ಯಾವ ಎದುರಾಳಿಯೂ ಆತನ ಮುಖ ನೋಡಲು ಬಯಸುವುದಿಲ್ಲ: ಸಚಿನ್ ತೆಂಡೂಲ್ಕರ್WTC Final: ಯಾವ ಎದುರಾಳಿಯೂ ಆತನ ಮುಖ ನೋಡಲು ಬಯಸುವುದಿಲ್ಲ: ಸಚಿನ್ ತೆಂಡೂಲ್ಕರ್

ಇಂಗ್ಲೆಂಡ್ ಮಹಿಳೆಯರು ಕೊನೇಯ ಸಾರಿ ಟೆಸ್ಟ್‌ ಕ್ರಿಕೆಟ್ ಆಡಿದ್ದು 2019ರಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ. ಅದಾಗಿ ಇಂಗ್ಲೆಂಡ್ ಕೂಡ ಬಹಳ ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್ ಆಡುತ್ತಿದೆ. ಮಿಥಾಲಿ ರಾಜ್ ಭಾರತೀಯ ತಂಡದ ನಾಯಕಿಯಾಗಿದ್ದರೆ, ಹೀದರ್ ನೈಟ್ ಆಂಗ್ಲ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

Story first published: Wednesday, June 16, 2021, 15:06 [IST]
Other articles published on Jun 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X