ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ ವುಮೆನ್ಸ್ ಟೆಸ್ಟ್: ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ಮೇಲುಗೈ

England Women vs India Women Test Day 1 Highlights, Bristol

ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ತಂಡ ಇಂಗ್ಲೆಂಡ್ ವನಿತೆಯರ ವಿರುದ್ಧ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಬ್ರಿಸ್ಟೋಲ್‌ನ ಕೌಂಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಿದೆ. ಇಂಗ್ಲೆಂಡ್ ನಾಯಕಿ ಹೀದರ್ ನೈಟ್ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ.

ಆತಿಥೇಯ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇದಕ್ಕೆ ಪೂರಕವಾಗಿ ಇಂಗ್ಲೆಂಡ್ ತಂಡ ಉತ್ತಮ ಆರಂಭವನ್ನು ಕೂಡ ಪಡೆಯಿತು. ಮೊದಲ ವಿಕೆಟ್‌ಗೆ 69 ರನ್‌ಗಳನ್ನು ಲಾರೆನ್ ವಿನ್‌ಫೀಲ್ಡ್ ಹಿಲ್ ಹಾಗೂ ಟಾಮಿ ಬ್ಯೂಮೊಂಟ್ ಜೋಡಿ ಪೇರಿಸಿತು. ಲಾರೆನ್ 35 ರನ್‌ಗಳಿಸಿ ಪೂಜಾ ವಸ್ತ್ರಾಕರ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಈ ಜೋಡಿ ಬೇರ್ಪಟ್ಟಿತು.

ನಂತರ ಟಾಮಿ ಬ್ಯೂಮೊಂಟ್‌ಗೆ ನಾಯಕಿ ಹೀದರ್ ನೈಟ್ ಜೊತೆಯಾದರು. ಈ ಜೋಡಿ ಕೂಡ ಭಾರತದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿ 71 ರನ್‌ಗಳ ಜೊತೆಯಾಟವನ್ನು ನೀಡಿತು. ನಂತರ ಅರ್ಧ ಶತಕವನ್ನು ಗಳಿಸಿ ಮುನ್ನುಗ್ಗುತ್ತಿದ್ದ ಬ್ಯೂಮೊಂಟ್ 66 ರನ್‌ಗಳಿಸಿದ್ದಾಗ ಸ್ನೇಹಾ ರಾಣಾಗೆ ಬಲಿಯಾದರು.

ನಂತರ ನಾಯಕಿಯನ್ನು ಜೊತೆಗೂಡಿದ ನತಾಲಿ ಸೀವರ್ ಇಂಗ್ಲೆಂಡ್‌ಗೆ ಮತ್ತೊಂದು ಅದ್ಭುತ ಜೊತೆಯಾಟವನ್ನು ನೀಡಿದರು. ಈ ಜೋಡಿ 90 ರನ್‌ಗಳನ್ನು ಗಳಿಸಿ ಬೇರ್ಪಟ್ಟಿತು. ನತಾಲಿ ಸೀವರ್ 42 ರನ್‌ಗಳಿಸಿ ಔಟಾದರು. ನಂತರ ಬಂದ ವಿಕೆಟ್ ಕೀಪರ್ ಏಮಿ ಎಲೆನ್ ಜೋನ್ಸ್‌ ಕೇವಲ ಒಂದು ರನ್‌ಗಳಿಸಿ ಸ್ನೇಹಾ ರಾಣಾಗೆ ಬಲಿಯಾದರು. ನಂತರ ನಾಯಕಿ ಹೀದರ್ ನೈಟ್ ಶತಕದಂಚಿನಲ್ಲಿ ಎಡವಿದ್ದಾರೆ. 95 ರನ್‌ಗಳಿಸಿದ್ದ ನೈಟ್ ದೀಪ್ತಿ ಶರ್ಮಾಗೆ ಔಟಾಗುವ ಮೂಲಕ ಭಾರತ ತಂಡಕ್ಕೆ ದೊಡ್ಡ ಯಶಸ್ಸು ನೀಡಿದರು.

ಇನ್ನು ದಿನದಂತ್ಯದಲ್ಲಿ ಹಠಾತ್ ಕುಸಿತ ಕಂಡ ಇಂಗ್ಲೆಂಡ್ ತನ್ನ ಆರು ವಿಕೆಟ್ ಕಳೆದುಕೊಂಡಿದ್ದು 269 ರನ್‌ಗಳಿಸಿ ಮೊದಲ ದಿನದಾಟವನ್ನು ಮುಗಿಸಿದೆ. ಭಾರತದ ಪರವಾಗಿ ಸ್ನೇಹಾ ರಾಣಾ 3 ವಿಕೆಟ್ ಪಡೆದು ಮಿಂಚಿದರೆ ದೀಪ್ತಿ ಶರ್ಮಾ ಎರಡು ವಿಕೆಟ್ ಹಾಗೂ ಪೂಜಾ ವಸ್ತ್ರಾಕರ್ ಒಂದು ವಿಕೆಟ್ ಪಡೆದಿದ್ದಾರೆ.

Story first published: Thursday, June 17, 2021, 8:48 [IST]
Other articles published on Jun 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X