ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತ್ತ ಶಮಿ ಮಿಂಚುತ್ತಿದ್ದರೆ, ಇತ್ತ ಟ್ರೋಲಿಗರಿಂದ ರಕ್ಷಿಸಿ ಎಂದ ಹಸೀನ್ ಜಹಾನ್

Ensure Her Safety: Court To Cops On Cricketer Md Shamis Estranged Wife

ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಬಲಗೈ ವೇಗಿ ಮೊಹಮ್ಮದ್ ಸಮಿ ಅವರ ವೃತ್ತಿ ಬದುಕಿನಷ್ಟೇ ಅದ್ಭುತ ರೀತಿಯಲ್ಲಿ ಅವರ ವೈಯಕ್ತಿಕ ಜೀವನ ಸಾಗುತ್ತಿಲ್ಲ. ಕಳೆದ ಕೆಲ ವರ್ಷದಿಂದ ಸಾಂಸಾರಿಕ ಕಲಹದ ವಿಚಾರವಾಗಿ ಶಮಿ ಅನಗತ್ಯವಾಗಿ ಸುದ್ದಿಯಾಗುತ್ತಿದ್ದಾರೆ. ಈಗ ಮತ್ತೊಮ್ಮೆ ಕೌಟುಂಬಿಕ ವಿಚಾರ ಚರ್ಚೆಗೆ ಬಂದಿದೆ.

ಅತ್ತ ಯುಎಇಯಲ್ಲಿ ನಡೆದಿರುವ ಐಪಿಎಲ್ 2020ರಲ್ಲಿ ಶಮಿ ಮಿಂಚುತ್ತಿದ್ದರೆ, ಇತ್ತ ಟ್ರೋಲಿಗರು, ಸಾಮಾಜಿಕ ಜಾಲ ತಾಣದಲ್ಲಿ ಹಿಂಸೆ, ಬೆದರಿಕೆ ಒಡ್ಡುವವರಿಂದ ರಕ್ಷಿಸಿ ಎಂದು ಹಸೀನ್ ಜಹಾನ್ ಕೋರ್ಟ್ ಮೊರೆ ಹೋಗಿದ್ದಾರೆ.

ಮೊಹಮ್ಮದ್‌ ಶಮಿ ಅವರ ವಿರಕ್ತ ಪತ್ನಿ ಹಸೀನ್‌ ಜಹಾನ್‌, ವರದಕ್ಷಿಣೆ ಕಿರುಕುಳ ಮತ್ತು ಕುಟುಂಬದವರೊಡನೆ ಸೇರಿ ದೈಹಿಕೆ ಹಿಂಸೆ ನಡೆಸುತ್ತಿದ್ದಾರೆ ಎಂದು ದೂರು ದಾಖಲಿಸಿದ್ದರು. ಶಮಿ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಆದರೆ ಅವರ ಪೋಸ್ಟ್ ಗಳಿಗೆ ವಿರುದ್ಧವಾಗಿ ಸಾರ್ವಜನಿಕರಲ್ಲಿ ಅನೇಕರು ಬೆದರಿಕೆ ಕಾಮೆಂಟ್ ಮಾಡಿದ್ದಾರೆ. ನನಗೆ ರಕ್ಷಣೆ ಅಗತ್ಯವಿದೆ ಎಂದು ಕೋಲ್ಕತ್ತ ಪೊಲೀಸರ ಮೊರೆ ಹೋಗಿದ್ದಾರೆ.

ಮೊಹಮ್ಮದ್‌ ಶಮಿಯನ್ನು ಲಫಂಗಾ ಎಂದು ಜರಿದ ಪತ್ನಿ ಹಸೀನ್‌!ಮೊಹಮ್ಮದ್‌ ಶಮಿಯನ್ನು ಲಫಂಗಾ ಎಂದು ಜರಿದ ಪತ್ನಿ ಹಸೀನ್‌!

ಗಂಡ ಹೆಂಡತಿ ಚೆನ್ನಾಗಿದ್ದಾಗಲೂ ಸೋಷಿಯಲ್ ಮೀಡಿಯಾ ಸಮಸ್ಯೆ ಇಬ್ಬರಿಗೂ ಇದ್ದೇ ಇತ್ತು. ಪತ್ನಿ ಜೊತೆ ಫೋಟೊ ಹಾಕಿದ್ದರೆ ಮುಸ್ಲಿಮರ ವಿರೋಧವನ್ನು ಶಮಿ ಕಟ್ಟಿಕೊಳ್ಳಬೇಕಾಗಿತ್ತು.

ವಿಧಿಯಿಲ್ಲದೆ ಕೋರ್ಟ್ ಮೆಟ್ಟಿಲೇರಿದ್ದಾರೆ

ವಿಧಿಯಿಲ್ಲದೆ ಕೋರ್ಟ್ ಮೆಟ್ಟಿಲೇರಿದ್ದಾರೆ

ಗಂಡ ಹೆಂಡತಿ ಚೆನ್ನಾಗಿದ್ದಾಗಲೂ ಸೋಷಿಯಲ್ ಮೀಡಿಯಾ ಸಮಸ್ಯೆ ಇಬ್ಬರಿಗೂ ಇದ್ದೇ ಇತ್ತು. ಪತ್ನಿ ಜೊತೆ ಫೋಟೊ ಹಾಕಿದ್ದರೆ ಮುಸ್ಲಿಮರ ವಿರೋಧವನ್ನು ಶಮಿ ಕಟ್ಟಿಕೊಳ್ಳಬೇಕಾಗಿತ್ತು.


ಆದರೆ, ಪೊಲೀಸರು ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ವಿಧಿಯಿಲ್ಲದೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಹಸೀನ್ ಜಹಾನ್ ಆರ್ಜಿ ಆಲಿಸಿದ ಕೋರ್ಟ್, ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದೆ ಎಂದು ಹಸೀನ್ ಪರ ವಕೀಲ ಆಶೀಶ್ ಚಕ್ರವರ್ತಿ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಎಫ್ಐಆರ್ ಹಾಕಲಾಗಿದೆ

ಈ ಪ್ರಕರಣದಲ್ಲಿ ಎಫ್ಐಆರ್ ಹಾಕಲಾಗಿದೆ

ಹಸೀನ್ ಜಹಾನ್ ಅವರ ಆರೋಪವನ್ನು ಅಲ್ಲಗೆಳೆದಿರುವ ಸರ್ಕಾರ ಪರ ವಕೀಲರು ಈ ಪ್ರಕರಣದಲ್ಲಿ ಎಫ್ಐಆರ್ ಹಾಕಲಾಗಿದ್ದು, ತನಿಖೆ ಜಾರಿಯಲ್ಲಿದೆ ಎಂದಿದ್ದಾರೆ. ಎರಡು ಕಡೆ ವಾದ ಆಲಿಸಿದ ಜಸ್ಟೀಸ್ ದೆಬಾಂಗ್ಸು ಬಸಕ್ ಅವರು ಹಸೀನ್ ಅವರ ದೂರಿನ ಬಗ್ಗೆ ತೆಗೆದುಕೊಂಡಿರುವ ಕ್ರಮ ತನಿಖಾ ವರದಿಯನ್ನು ಕಾಲಕಾಲಕ್ಕೆ ಸಲ್ಲಿಸಿ, ಅವರಿಗೆ ಸೂಕ್ತ ಭದ್ರತೆ ಒದಗಿಸಿ ಎಂದು ಸೂಚಿಸಿದ್ದಾರೆ.

ಹಿಂದುಗಳಿಗೆ ಶುಭಹಾರೈಸಿದ್ದಕ್ಕೆ ಬೆದರಿಕೆ

ಹಿಂದುಗಳಿಗೆ ಶುಭಹಾರೈಸಿದ್ದಕ್ಕೆ ಬೆದರಿಕೆ

ಈ ಹಿಂದೆ ಆಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಹಸೀನ್ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಲಾಲ್ ಬಜಾರ್ ಹೆಡ್ ಕ್ವಾರ್ಟರ್ಸ್ , ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಸರಿಯಾದ ಕ್ರಮ ಜರುಗಿಸಿಲ್ಲ ಎಂದು ಹಸೀನ್ ಪರ ವಕೀಲ ಆಶೀಶ್ ಹೇಳಿದ್ದಾರೆ.

ಎಲ್ಲಾ ಚೆನ್ನಾಗಿದ್ದಾಗಲೂ ಸಮಸ್ಯೆ

ಎಲ್ಲಾ ಚೆನ್ನಾಗಿದ್ದಾಗಲೂ ಸಮಸ್ಯೆ

ಪತ್ನಿ ಹಸೀನ್ ಜಹಾನ್ ಸ್ಲೀವ್ ಲೆಸ್ ಡ್ರೆಸ್ ಧರಿಸಿಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದ್ದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಅವರು ಹೊಸ ವರ್ಷದಂದು ಮತ್ತೆ ತಮ್ಮ ಪತ್ನಿಯೊಂದಿಗಿರುವ ಚಿತ್ರವನ್ನು ಫೇಸ್‌ಬುಕ್‌ ಮತ್ತು ಟ್ವಿಟರ್ ನಲ್ಲಿ ಪೋಸ್ಟ್‌ ಮಾಡುವ ಮೂಲಕ ತಿರುಗೇಟು ನೀಡಿದ್ದರು.

Story first published: Thursday, October 1, 2020, 10:02 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X