ಟಿ20 ವಿಶ್ವಕಪ್ ಗೆಲ್ಲುವ ಫೇವರೀಟ್ ತಂಡವನ್ನು ಹೆಸರಿಸಿದ ಮಾರ್ಗನ್, ಕೊಹ್ಲಿ

Virat Kohli ಪ್ರಕಾರ ಈ ಬಾರಿ ವಿಶ್ವಕಪ್ ಗೆಲ್ಲೋದು ಇವರೇ | Team To Beat | Oneindia Kannada

ಟಿ20 ವಿಶ್ವಕಪ್‌ ಆರಂಭಕ್ಕೆ ಕೆಲವೇ ತಿಂಗಳು ಬಾಕಿಯಿದೆ. ಈ ಸಂದರ್ಭದಲ್ಲಿ ಎಲ್ಲಾ ತಂಡಗಳು ಬಲಿಷ್ಠ ಆಟಗಾರರ ತಂಡವನ್ನು ಆಯ್ಕೆ ಮಾಡಲು ಸಿದ್ಧತೆಯನ್ನು ನಡೆಸುತ್ತಿದೆ. ಬಾರತದಲ್ಲಿ ನಡೆಯಬೇಕಿದ್ದ ಈ ಮಹತ್ವದ ಟೂರ್ನಿ ಕೊರೊನಾವೈರಸ್‌ನ ಕಾರಣದಿಂದಾಗಿ ಯುಎಇಗೆ ಸ್ಥಳಾಂತರವಾಗಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಹಾಗೂ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ್ದಾರೆ.

ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕನಾಗಿರುವ ಇಯಾನ್ ಮಾರ್ಗನ್ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಆದರೆ ಟಿ20 ವಿಶ್ವಕಪ್‌ನಲ್ಲಿ ಇಯಾನ್ ಮಾರ್ಗನ್ ಭಾರತವೇ ಈ ಬಾರಿಯ ಗೆಲ್ಲುವ ನೆಚ್ಚಿನ ತಂಡ ಎಂದು ಹೆಸರಿಸಿದ್ದಾರೆ.

ಹಾಗಾದರೆ ಮಾರ್ಗನ್ ಹೀಗೆ ಭಾರತ ಟಿ20 ವಿಶ್ವಕಪ್ ಗೆಲ್ಲಲಿದೆ ಎನ್ನಲು ಕಾರಣವೇನು? ಯಾವ ಆಧಾರದಿಂದ ಈ ಮಾತುಗಳನ್ನು ಮಾರ್ಗನ್ ಬಹಿರಂಗವಾಗಿ ಹೇಳಿದ್ದಾರೆ? ಭಾರತೀಯ ನಾಯಕನ ಪ್ರಕಾರ ವಿಶ್ವಕಪ್ ಗೆಲ್ಲುವ ತಂಡ ಯಾವುದು? ಮುಂದೆ ಓದಿ..

ಭಾರತ ಗೆಲ್ಲುವ ಫೆವರೀಟ್

ಭಾರತ ಗೆಲ್ಲುವ ಫೆವರೀಟ್

"ಈ ವಿಶ್ವಕಪ್‌ಗೆ ಭಾರತ ನೆಚ್ಚಿನ ತಂಡವಾಗಿ ಕಣಕ್ಕಿಳಿಯುತ್ತಿದೆ. ನನ್ನ ಪ್ರಕಾರ ಭಾರತ ಇದನ್ನು ಸಮರ್ಥಿಸಿಕೊಳ್ಳುತ್ತದೆ. ಅವರು ನಿಜಕ್ಕೂ ಬಲಿಷ್ಠ ತಂಡವಾಗಿದ್ದಾರೆ. ಅವರು ತಮ್ಮ ಬಳಗದಲ್ಲಿ ಹೆಚ್ಚಿನ ಆಳವನ್ನು ಹೊಂದಿದ್ದಾರೆ ಮತ್ತು ಎಲ್ಲಾ ವಿಭಾಗವನ್ನು ಒಳಗೊಂಡಿದೆ. ನಾವು 2019ರ ಏಕದಿನ ವಿಶ್ವಕಪ್‌ಗಿಂತ ವಿಭಿನ್ನವಾದ ಪ್ರಯಾಣವನ್ನು ಮಾಡುತ್ತಿದ್ದೇವೆ" ಎಂದು ಇಯಾನ್ ಮಾರ್ಗನ್ ಹೇಳಿದ್ದಾರೆ.

ಚುಟುಕು ಕ್ರಿಕೆಟ್‌ನಲ್ಲಿ ಭಾರತದ ಅದ್ಭುತ ಪ್ರದರ್ಶನ

ಚುಟುಕು ಕ್ರಿಕೆಟ್‌ನಲ್ಲಿ ಭಾರತದ ಅದ್ಭುತ ಪ್ರದರ್ಶನ

ಇನ್ನು ಇತ್ತೀಚಿನ ದಿನಗಳಲ್ಲಿ ಭಾರತ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿಕೊಂಡು ಬರುತ್ತಿದೆ. ಅದರಲ್ಲೂ ಟಿ20 ಕ್ರಿಕೆಟ್‌ನ ಪ್ರದರ್ಶನ ಗಮನಾರ್ಹವಾಗಿದೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ಅದರ ತವರಿನಲ್ಲೇ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 5-0 ಅಂತರದಿಂದ ಗೆದ್ದುಕೊಂಡಿತ್ತು. ಅದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಗೆದ್ದುಕೊಂಡಿತ್ತು. ಅದಾದ ಬಳಿಕ ಈ ವರ್ಷ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ 5 ಪಂದ್ಯಗಳ ಟಿ20 ಸರಣಿಯನ್ನು 3-2 ಅಂತರದಿಂದ ಗೆದ್ದು ಬೀಗಿತ್ತು. ಈ ಪ್ರದರ್ಶನ ಭಾರತ ಗೆಲ್ಲುವ ನೆಚ್ಚಿನ ತಂಡವನ್ನಾಗಿ ಮಾಡಿದೆ.

ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಇಂಗ್ಲೆಂಡ್ ತಂಡಕ್ಕಿದೆ

ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಇಂಗ್ಲೆಂಡ್ ತಂಡಕ್ಕಿದೆ

ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್ ನಡೆಸಿದ ಸಿದ್ಧತೆಯನ್ನು ಟಿ20 ವಿಶ್ವಕಪ್‌ಗೆ ನಡೆಸಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಕಾರ ಇಂಗ್ಲೆಂಡ್ ಈ ಬಾರಿಯ ಚುಟುಕು ಕ್ರಿಕೆಟ್‌ನ ಚಾಂಪಿಯನ್ ಪಟ್ಟಕ್ಕೇರುವ ನೆಚ್ಚಿನ ತಂಡವಾಗಿ ಗುರುತಿಸಿಕೊಳ್ಳುತ್ತದೆ ಎಂದಿದ್ದಾರೆ.

ಇಂಗ್ಲೆಂಡ್ ತಂಡದ ಬಗ್ಗೆ ಕೊಹ್ಲಿ ಹೇಳಿದ್ದಿಷ್ಟು

ಇಂಗ್ಲೆಂಡ್ ತಂಡದ ಬಗ್ಗೆ ಕೊಹ್ಲಿ ಹೇಳಿದ್ದಿಷ್ಟು

ಮೂರು ವಿಭಾಗಗಳಲ್ಲಿಯೂ ಇಂಗ್ಲೆಂಡ್ ಹೊಂದಿರುವ ಅದ್ಭುತವಾದ ಸಾಮರ್ಥ್ಯದ ಕಾರಣದಿಂದಾಗಿ ಎಲ್ಲಾ ತಂಡಗಳ ಚಿತ್ತ ಇಂಗ್ಲೆಂಡ್ ತಂಡದ ಮೇಲಿದೆ ಎಂದು ಕೊಹ್ಲಿ ಹೇಳಿದ್ದಾರೆ. "ಅವರು ನಂಬರ್ 1 ತಂಡವಾಗಿದ್ದಾರೆ ಮತ್ತು ಎಲ್ಲಾ ತಂಡದ ಚಿತ್ತ ಈ ತಂಡದ ಮೇಲಿದೆ. ಉಳಿದ ಎಲ್ಲಾ ತಂಡಗಳು ಕೂಡ ಇಂಗ್ಲೆಂಡ್ ತಂಡ ಅಂಗಳದಲ್ಲಿ ಹೊಂದಿರುವ ಸಾಮರ್ಥ್ಯದ ಕಾರಣದಿಂದಾಗಿ ತಲೆ ಕೆಡಿಸಿಕೊಳ್ಳುತ್ತವೆ. ನನ್ನ ಮಾತನ್ನು ಉಳಿದ ಎಲ್ಲಾ ತಂಡಗಳು ಕೂಡ ಒಪ್ಪಿಕೊಳ್ಳಲಿವೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, July 16, 2021, 20:54 [IST]
Other articles published on Jul 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X