ಇಯಾನ್ ಮಾರ್ಗನ್ ನಿವೃತ್ತಿ; ಇಂಗ್ಲೆಂಡ್ ತಂಡದ ನಾಯಕನಾಗಲು ಈತನಿಗೆ ಮೈಕಲ್ ವಾನ್ ಬೆಂಬಲ

ಇಂಗ್ಲೆಂಡ್ ಕ್ರಿಕೆಟ್ ತಂಡದ ಸೀಮಿತ ಓವರ್‌ಗಳ ನಾಯಕ ಇಯಾನ್ ಮಾರ್ಗನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ ಮುಂದಿನ ಸೀಮಿತ ಓವರ್‌ಗಳ ಸರಣಿಗಳಿಗೆ ಇಂಗ್ಲೆಂಡ್ ತಂಡದ ನಾಯಕ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

Breaking: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್Breaking: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್

ವೈಟ್-ಬಾಲ್ ಸ್ವರೂಪಗಳಲ್ಲಿ ಮುಂದಿನ ಇಂಗ್ಲೆಂಡ್ ನಾಯಕ ಯಾರು ಎಂದು ಇಂಗ್ಲೆಂಡ್ ಅಭಿಮಾನಿಗಳು ಕೂಡ ಊಹಿಸುತ್ತಿದ್ದು, ಇದೇ ವೇಳೆ ಮಾಜಿ ಇಂಗ್ಲೆಂಡ್ ನಾಯಕ ಮೈಕೆಲ್ ವಾನ್ ಅವರು ಜೋಸ್ ಬಟ್ಲರ್ ಹೊಸ ನಾಯಕನಾಗಬಹುದು ಎಂದು ಹೇಳಿದ್ದಾರೆ ಮತ್ತು ಅವರು ವಿಶ್ವದ ಅತ್ಯುತ್ತಮ ವೈಟ್-ಬಾಲ್ ಕ್ರಿಕೆಟಿಗ ಎಂದು ಲೇಬಲ್ ಹಚ್ಚಿದರು. ಜೋಸ್ ಬಟ್ಲರ್ ಅವರು ಈ ವರ್ಷದ ಐಪಿಎಲ್‌ನಲ್ಲಿ 863 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿ ಗಮನಾರ್ಹ ಫಾರ್ಮ್‌ ಮುಂದುವರೆಸಿದ್ದಾರೆ.

ಜೋಸ್ ಬಟ್ಲರ್ ನಾಯಕನ ಅಧಿಕಾರ ವಹಿಸಿಕೊಳ್ಳಲು ಸಲಹೆ

ಜೋಸ್ ಬಟ್ಲರ್ ನಾಯಕನ ಅಧಿಕಾರ ವಹಿಸಿಕೊಳ್ಳಲು ಸಲಹೆ

"ನನಗೆ ಜೋಸ್ ಬಟ್ಲರ್ ಇಂಗ್ಲೆಂಡ್ ನಾಯಕ ಪಾತ್ರವನ್ನು ವಹಿಸಿಕೊಳ್ಳುವುದು ಉತ್ತಮ ಎಂದೆನಿಸುತ್ತದೆ. ಅವರು ವಿಶ್ವದ ಅತ್ಯುತ್ತಮ ವೈಟ್-ಬಾಲ್ ಆಟಗಾರ, ಅವರು ತುಂಬಾ ಸ್ಮಾರ್ಟ್ ಕ್ರಿಕೆಟ್ ಮೈಂಡ್ ಅನ್ನು ಹೊಂದಿದ್ದಾರೆ ಮತ್ತು ನಿಮಗೆ ಅಗತ್ಯವಿರುವ ಶಾಂತತೆಯನ್ನು ಅವರು ಹೊಂದಿದ್ದಾರೆ," ಎಂದು ಮೈಕೆಲ್ ವಾನ್ ತನ್ನ ದಿ ಟೆಲಿಗ್ರಾಫ್ ಅಂಕಣದಲ್ಲಿ ಬರೆದಿದ್ದಾರೆ.

ಇಂಗ್ಲೆಂಡ್ ತಂಡದ ವಿಕೆಟ್-ಕೀಪರ್ ಸಹ ಆಗಿರುವ 35 ವರ್ಷ ವಯಸ್ಸಿನ ಜೋಸ್ ಬಟ್ಲರ್ ನಾಯಕನ ಅಧಿಕಾರ ವಹಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಇತ್ತೀಚೆಗೆ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರು ಜೋಸ್ ಬಟ್ಲರ್‌ಗೆ ಟೆಸ್ಟ್‌ನಲ್ಲಿ ತಮ್ಮ ದೇಶದ ಪರ ಓಪನರ್ ಆಗಲು ಬೆಂಬಲ ನೀಡಿದರು. ಆರಂಭಿಕ ಸಂಯೋಜನೆಯು ಇಂಗ್ಲೆಂಡ್‌ಗೆ ಇತ್ತೀಚಿನ ದಿನಗಳಲ್ಲಿ ತೊಂದರೆಯಾಗಿದೆ ಮತ್ತು ಕುಮಾರ ಸಂಗಕ್ಕಾರ ಅವರ ಮೌಲ್ಯಮಾಪನವನ್ನು ಮೈಕೆಲ್ ವಾನ್ ಕೂಡ ಒಪ್ಪಿಕೊಂಡರು.

ಜೋಸ್ ಬಟ್ಲರ್ ಆಮೂಲಾಗ್ರ ಬದಲಾವಣೆ ಕಂಡಿದ್ದಾರೆ

ಜೋಸ್ ಬಟ್ಲರ್ ಆಮೂಲಾಗ್ರ ಬದಲಾವಣೆ ಕಂಡಿದ್ದಾರೆ

31 ವರ್ಷ ವಯಸ್ಸಿನ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಅವರ ಹೊಸ ಆಡಳಿತದೊಂದಿಗೆ ಜೋಸ್ ಬಟ್ಲರ್ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ ಎಂದು ಮಾಜಿ ಇಂಗ್ಲೆಂಡ್ ನಾಯಕ ಭಾವಿಸಿದ್ದಾರೆ.

"ಇಂಗ್ಲೆಂಡ್ ಈ ನಿರ್ಭೀತ ಮತ್ತು ಆಕ್ರಮಣಕಾರಿ ಆಟದ ಸ್ವಭಾವವನ್ನು ಹೊಂದಿದೆ. ಚೆಂಡುಗಳು ಇಂಗ್ಲೆಂಡ್‌ನಲ್ಲಿ ಹಿಂದಿನ ಸೀಸನ್‌ಗಳಲ್ಲಿ ಮಾಡಿದಂತೆ ತೋರುತ್ತಿಲ್ಲ. ಟೆಸ್ಟ್ ಓಪನರ್ ಆಗಿ ಜೋಸ್ ಬಟ್ಲರ್ ಆಮೂಲಾಗ್ರ ಬದಲಾವಣೆ ಕಂಡಿದ್ದಾರೆ. ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಅವರ ಈ ಮ್ಯಾನೇಜ್‌ಮೆಂಟ್ ಗುಂಪಿನ ಅಡಿಯಲ್ಲಿ ಬಟ್ಲರ್ ಐಪಿಎಲ್‌ನಲ್ಲಿ ಆಡಿದಂತೆ ಈ ಗುಂಪಿನಲ್ಲಿ ಆಡುವುದನ್ನು ನೋಡಲು ನಾನು ಇಷ್ಟಪಡುತ್ತೇನೆ," ಎಂದರು.

ವೀರೇಂದ್ರ ಸೆಹ್ವಾಗ್ ಶೈಲಿಯಲ್ಲಿ ಹೋಗಿ ದಾಳಿ

ವೀರೇಂದ್ರ ಸೆಹ್ವಾಗ್ ಶೈಲಿಯಲ್ಲಿ ಹೋಗಿ ದಾಳಿ

"ಈ ವರ್ಷ ಜೋಸ್ ಬಟ್ಲರ್ ಓಪನಿಂಗ್ ಮಾಡುವಾಗ ಅವರು ಸಾಕಷ್ಟು ಸಾಂಪ್ರದಾಯಿಕವಾಗಿ ಆಡಿದರು. ತದನಂತರ ಅವರು ಟೆಸ್ಟ್‌ ತಂಡಕ್ಕೂ ಪ್ರವೇಶಿಸಿದರು ಮತ್ತು ಪ್ರವರ್ಧಮಾನಕ್ಕೆ ಬಂದರು. ನ್ಯೂಜಿಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಂತೆ ಚೆಂಡು ತಿರುಗಿದರೆ ಅವರು ಇನ್ನೂ ಕಷ್ಟಪಡುತ್ತಾರೆ. ಆದರೆ ಅದು ನಮ್ಮಂತೆಯೇ ಫ್ಲಾಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ನೋಡಿದಾಗ ವೀರೇಂದ್ರ ಸೆಹ್ವಾಗ್ ಶೈಲಿಯಲ್ಲಿ ಹೋಗಿ ದಾಳಿ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಅವರಿಗಿದೆ ಮತ್ತು ಇದರಿಂದ ಎದುರಾಳಿ ತಂಡಗಳಿಗೆ ಖಂಡಿತ ತೊಂದರೆ ನೀಡಲಬಲ್ಲರು," ಎಂದು ಮಾಜಿ ಮೈಕೆಲ್ ವಾನ್ ಹೇಳಿದರು.

ಇಯಾನ್ ಮಾರ್ಗನ್ ಅಧಿಕೃತವಾಗಿ ನಿವೃತ್ತಿ

ಇಯಾನ್ ಮಾರ್ಗನ್ ಅಧಿಕೃತವಾಗಿ ನಿವೃತ್ತಿ

ಇಂಗ್ಲೆಂಡ್‌ನ 2019ರ ಏಕದಿನ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಇಂದು (ಜೂನ್ 28, ಮಂಗಳವಾರ) ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ನಿರ್ಭೀತ ಮತ್ತು ಆಕ್ರಮಣಕಾರಿ ಕ್ರಿಕೆಟ್ ಅನ್ನು ಪ್ರೋತ್ಸಾಹಿಸುವ ಮೂಲಕ ಇಂಗ್ಲೆಂಡ್ ವೈಟ್-ಬಾಲ್ ಕ್ರಿಕೆಟ್ ಅನ್ನು ಪ್ರಕಾಶಮಾನಗೊಳಿಸಿದರು. ಇದು ಏಕದಿನ ಮತ್ತು ಟಿ20 ತಂಡಗಳು ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರುವಂತೆ ಮಾಡಿತು. ವಿಶ್ವಕಪ್ 2019ರ ಗೆಲುವು ಇಂಗ್ಲೆಂಡ್ ವೈಟ್-ಬಾಲ್ ಕ್ರಿಕೆಟ್ ಕ್ರಾಂತಿಯ ಕಿರೀಟವಾಗಿದೆ.

ಇಯಾನ್ ಮಾರ್ಗನ್ ಅವರು ಐರ್ಲೆಂಡ್ ಪರ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು. ಮೂರು ವರ್ಷಗಳ ನಂತರ ಅವರು ಇಂಗ್ಲೆಂಡ್‌ಗೆ ತಮ್ಮ ನಿಷ್ಠೆಯನ್ನು ಬದಲಾಯಿಸಿದರು. ಅವರ ಬೆಲ್ಟ್ ಅಡಿಯಲ್ಲಿ ಒಟ್ಟು 248 ಏಕದಿನ ಪಂದ್ಯಗಳನ್ನಾಡಿ ನಿವೃತ್ತರಾಗಿದ್ದಾರೆ. ಇದರಲ್ಲಿ ಇಯಾನ್ ಮಾರ್ಗನ್ 14 ಶತಕಗಳೊಂದಿಗೆ 7,701 ರನ್ ಗಳಿಸಿದ್ದಾರೆ. ಅವರು 115 ಟಿ20 ಪಂದ್ಯಗಳನ್ನು ಆಡಿದ್ದಾರೆ, 14 ಅರ್ಧ ಶತಕಗಳೊಂದಿಗೆ 2,458 ರನ್‌ಗಳನ್ನು ಗಳಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, June 28, 2022, 20:05 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X