ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KKR ನಾಯಕನಾದ ಬಳಿಕ, ಮೌನ ಮುರಿದ ಇಯಾನ್ ಮಾರ್ಗನ್ ಹೇಳಿದ್ದೇನು?

Eoin Morgan Breaks His Silence After Becoming KKR Captain

ಐಪಿಎಲ್ 13ನೇ ಆವೃತ್ತಿಯ ಮಧ್ಯದಲ್ಲಿ ಕೆಕೆಆರ್ ನಾಯಕತ್ವವನ್ನು ತ್ಯಜಿಸಿದ ದಿನೇಶ್ ಕಾರ್ತಿಕ್ ಕುರಿತಾಗಿ, ಹೊಸ ನಾಯಕ ಇಯಾನ್ ಮಾರ್ಗನ್ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮೊದಲು ಇಂಗ್ಲೆಂಡ್ ತಂಡದ ನಾಯಕ ದಿನೇಶ್ ಕಾರ್ತಿಕ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕಾರ್ತಿಕ್ ತನ್ನ ಬ್ಯಾಟಿಂಗ್ ಮತ್ತು ತಂಡದತ್ತ ಗಮನ ಹರಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ ಎಂದು ಇಯಾನ್ ಮಾರ್ಗನ್ ಹೇಳಿದ್ದಾರೆ. ಇಂಗ್ಲೆಂಡ್ ನಾಯಕ ಕೂಡ ತನ್ನ ಹೊಸ ಪಾತ್ರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ಅವರ ಗಮನವು ಟೂರ್ನಿಯ ಉಳಿದ ಪಂದ್ಯಗಳ ಮೇಲೆ ಸಂಪೂರ್ಣವಾಗಿ ಇದೆ ಎಂದಿದ್ದಾರೆ.

KKR ನಾಯಕತ್ವ ಬದಲಾವಣೆಗೆ ಇರ್ಫಾನ್ ಪಠಾಣ್, ಆಕಾಶ್ ಚೋಪ್ರಾ ಅಸಮಾಧಾನKKR ನಾಯಕತ್ವ ಬದಲಾವಣೆಗೆ ಇರ್ಫಾನ್ ಪಠಾಣ್, ಆಕಾಶ್ ಚೋಪ್ರಾ ಅಸಮಾಧಾನ

"ಡಿಕೆ ಅವರು ನಿನ್ನೆ ಮಾಹಿತಿ ನೀಡಿದರು ಮತ್ತು ಅವರು ಬ್ಯಾಟಿಂಗ್ ಬಗ್ಗೆ ಗಮನಹರಿಸಲು ಬಯಸುತ್ತಾರೆ. ಏಕೆಂದರೆ ಇದು ತಂಡಕ್ಕೆ ಉತ್ತಮ ಆಯ್ಕೆಯಾಗಿದೆ. ಇದು ನಂಬಲಾಗದಷ್ಟು ನಿಸ್ವಾರ್ಥವಾಗಿದೆ ಮತ್ತು ಈ ನಿರ್ಧಾರ ತೆಗೆದುಕೊಳ್ಳಲು ಅವನಿಂದ ಸಾಕಷ್ಟು ಧೈರ್ಯವನ್ನು ತೋರಿಸುತ್ತದೆ. ನಾಯಕನಾಗಿರುವುದಕ್ಕಿಂತ ತಂಡವನ್ನು ಮೊದಲ ಸ್ಥಾನದಲ್ಲಿರಿಸಿಕೊಂಡಿರುವುದು ಅವನ ನಿಸ್ವಾರ್ಥವಾಗಿದೆ "ಎಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮೊದಲು ಇಯಾನ್ ಮಾರ್ಗನ್ ಹೇಳಿದ್ದಾರೆ.

ಈ ವೇಳೆಯಲ್ಲಿ "ನಾಯಕತ್ವದ ಪಾತ್ರವನ್ನು ತಂಡದಲ್ಲಿ ಮುಂದುವರೆಸಲು ನನಗೆ ಸಂತೋಷವಾಗಿದೆ, ನಿಸ್ಸಂಶಯವಾಗಿ ನಾಯಕ ಮತ್ತು ಈಗ ಉಪನಾಯಕ ವಿಚಾರವಲ್ಲ, ಆದರೆ ಆಶಾದಾಯಕವಾಗಿ ನಮ್ಮ ಆಟಗಾರರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ನಾವು ಟೂರ್ನಿಯ ಅರ್ಧದಾರಿಯಲ್ಲೇ ಇದ್ದೇವೆ, ನಾವು ಕೆಲವು ಸಾಮರ್ಥ್ಯವನ್ನು ತೋರಿಸಿದ್ದೇವೆ, ಇನ್ನೂ ಹೆಚ್ಚಿನದನ್ನು ಸಾಧಿಸಿಲ್ಲ ಆದರೆ ಇಂದು ರಾತ್ರಿ ಮತ್ತೊಂದು ಉತ್ತಮ ಪರೀಕ್ಷೆಯಾಗಲಿದೆ ಮತ್ತು ಆಶಾದಾಯಕವಾಗಿ ನಾವು ಇದಕ್ಕೆ ಮುಂದಾಗುತ್ತೇವೆ, "ಎಂದು ಅವರು ಹೇಳಿದರು.

ಪ್ರಸ್ತುತ, ಕೆಕೆಆರ್ ಏಳು ಪಂದ್ಯಗಳಿಂದ ನಾಲ್ಕು ಗೆಲುವುಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಎರಡು ಬಾರಿ ಐಪಿಎಲ್ ಚಾಂಪಿಯನ್, 2014 ರಿಂದ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಇಂಗ್ಲೆಂಡ್‌ಗೆ ಐಸಿಸಿ ವಿಶ್ವಕಪ್ ಗೆದ್ದುಕೊಟ್ಟ ಇಯಾನ್‌ ಮಾರ್ಗನ್‌, ಕೆಕೆಆರ್‌ಗೆ ಮೂರನೇ ಪ್ರಶಸ್ತಿ ಗೆದ್ದುಕೊಡ್ತಾರ ಕಾದು ನೋಡಬೇಕು.

Story first published: Saturday, October 17, 2020, 10:41 [IST]
Other articles published on Oct 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X