ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ದ.ಆಫ್ರಿಕಾ ಟಿ20 : ಮತ್ತೊಂದು ರೋಚಕ ಕಾದಾಟದಲ್ಲಿ ಗೆದ್ದು ಸರಣಿ ಜಯಗಳಿಸಿದ ಇಂಗ್ಲೆಂಡ್

Eoin Morgan Leads England To T20i Series Win Over South Africa

ಇತ್ತೀಚೆಗೆ ಟಿ20 ಪಂದ್ಯಗಳು ಮತ್ತಷ್ಟು ರೋಚಕತೆಯನ್ನು ಪಡೆದುಕೊಳ್ಳುತ್ತಿವೆ. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯೂ ಇದಕ್ಕೆ ಹೊರತಾಗಿಲ್ಲ. ಮೊದಲೆರಡು ಪಂದ್ಯಗಳು ರೋಚಕವಾಗಿ ಅಂತ್ಯಗೊಂಡು ಎರಡು ತಂಡಗಳೂ ತಲಾ ಒಂದೊಂದು ಪಂದ್ಯಗಳನ್ನು ವಶಕ್ಕೆ ಪಡೆದ ನಂತರ ಕೊನೆಯ ಪಂದ್ಯವೂ ಅಭಿಮಾನಿಗಳಿಗೆ ಸಂಪೂರ್ಣ ಮನರಂಜನೆಯನ್ನು ನೀಡಿತು.

ಅಂತಿಮ ಪಂದ್ಯ ದೊಡ್ಡ ಮೊತ್ತದ ಕಾದಾಟಕ್ಕೆ ಸಾಕ್ಷಿಯಾಗಿತ್ತು. ಎರಡು ತಂಡಗಳು ಸರಣಿಯನ್ನು ಸಮಬಲ ಮಾಡಿಕೊಂಡಿದ್ದರಿಂದ ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯಲು ಕಾತರರಾಗಿದ್ದವು. ಆದರೆ ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ಸೋತು ಸರಣಿಯನ್ನು 1-2 ಅಂತರದಲ್ಲಿ ಇಂಗ್ಲೀಷರ ಕೈಗೊಪ್ಪಿಸಿದೆ.

ಯುವಿ ಹಾದಿಯಲ್ಲಿ ಮತ್ತೊಬ್ಬ ಕ್ರಿಕೆಟರ್ : ಕ್ಯಾನ್ಸರ್ ಗೆದ್ದು ಶತಕ ಬಾರಿಸಿದ ಕಮಲ್ಯುವಿ ಹಾದಿಯಲ್ಲಿ ಮತ್ತೊಬ್ಬ ಕ್ರಿಕೆಟರ್ : ಕ್ಯಾನ್ಸರ್ ಗೆದ್ದು ಶತಕ ಬಾರಿಸಿದ ಕಮಲ್

ಮೊದಲಿಗೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್‌ಗಳಲ್ಲಿ ಬರೊಬ್ಬರಿ 222 ರನ್ ಕಲೆಹಾಕಿತು. ಹೆನ್ರಿಕ್ ಕ್ಲಾಸಿನ್ ಸ್ಪೋಟಕ ಅರ್ಧ ಶತಕವನ್ನು ದಾಖಲಿಸಿದರು. 33 ಎಸೆತಗಳಲ್ಲಿ ಕ್ಲಾಸಿನ್ 66 ರನ್‌ ಸಿಡಿಸಿದರೆ, ಆರಂಭಿಕ ಆಟಗಾರರು ಕೂಡ ಉತ್ತಮವಾಗಿ ಆಡಿದರು. ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟವನ್ನು ನೀಡಿದರು.

ದಕ್ಷಿಣ ಆಫ್ರಿಕಾ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ ಇನ್ನೂ ಐದು ಎಸೆತಗಳು ಬಾಕಿಯಿರುವಂತೆಯೇ ಗೆಲುವಿನ ಗುರಿಮುಟ್ಟಿತು. ಈ ಮೂಲಕ ರೋಚಕವಾಗಿ ಗೆಲುವನ್ನು ದಾಖಲಿಸಿಕೊಂಡಿತು. ಇಂಗ್ಲೆಂಡ್ ಪರವಾಗಿ ಜೋಸ್ ಬಟ್ಲರ್, ಜಾನಿ ಬೇರ್‌ಸ್ಟ್ರೋ ಮತ್ತು ನಾಯಕ ಇಯಾನ್ ಮಾರ್ಗನ್ ಅರ್ಧ ಶತಕವನ್ನು ಸಿಡಿಸಿ ಮಿಂಚಿದರು.

ಐಪಿಎಲ್: ಚುಟುಕು ಕದನದ ವೇಳಾಪಟ್ಟಿ ಬಿಡುಗಡೆ : ಆರ್‌ಸಿಬಿ ಪಂದ್ಯ ಯಾವಾಗ?ಐಪಿಎಲ್: ಚುಟುಕು ಕದನದ ವೇಳಾಪಟ್ಟಿ ಬಿಡುಗಡೆ : ಆರ್‌ಸಿಬಿ ಪಂದ್ಯ ಯಾವಾಗ?

ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಆಟ ಇಲ್ಲಿ ವಿಶೇಷವಾಗಿತ್ತು. 22 ಎಸೆತಗಳನ್ನು ಎದುರಿಸಿದ ಮಾರ್ಗನ್ ಬರೊಬ್ಬರಿ 57 ರನ್ ಬಾರಿಸಿದರು. ಇದರಲ್ಲಿ ಒಂದೂ ಬೌಂಡರಿಯಿರಲಿಲ್ಲ. ಏಳು ಭರ್ಜರಿ ಸಿಕ್ಸರ್ ಸಿಡಿಸಿ ಗೆಲ್ಲಿಸಿದರು ಇಯಾನ್ ಮಾರ್ಗನ್. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಟೆಸ್ಟ್ ಏಕದಿನ ಸರಣಿಯ ನಂತರ ಟಿ20 ಸರಣಿಯನ್ನು ಕೂಡ ವಶಕ್ಕೆ ಪಡೆದುಕೊಂಡಿದೆ.

Story first published: Monday, February 17, 2020, 10:59 [IST]
Other articles published on Feb 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X