ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಿನೇಶ್ ಕಾರ್ತಿಕ್ ಹಾಗೂ ಕೋಚ್ ಮೆಕ್ಕಲಮ್ ಕರ್ತವ್ಯದ ಬಗ್ಗೆ ಇಯಾನ್ ಮಾರ್ಗನ್ ಹೇಳಿಕೆ

Eoin Morgan statement on KKR captain Dinesh Karthik and coach Brendon McCullum

ಕೊಲ್ಕತ್ತಾ ನೈಟ್ ರೈಡರ್ಸ್ ಈ ಬಾರಿಯ ಟೂರ್ನಿಯಲ್ಲಿ ಆರಂಭದಲ್ಲಿ ಹಿನ್ನೆಡೆಯನ್ನು ಕಂಡ ಬಳಿಕ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಆದರೆ ನಾಯಕ ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡದಿರುವ ಕಾರಣ ನಾಯಕತ್ವದಿಂದ ಕೆಳಗಿಳಿಸಿ ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ. ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ತಂಡದಲ್ಲಿರುವ ಕಾರಣ ಮಾರ್ಗನ್ ನಾಯಕತ್ವ ವಹಿಸಿಕೊಳ್ಳಲಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ಆದರೆ ಇತ್ತ ಕೊಲ್ಕತಾ ನೈಟ್ ರೈಡರ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿರುವ ಇಯಾನ್ ಮಾರ್ಗನ್ ನಾಯಕ ದಿನೇಶ್ ಕಾರ್ತಿಕ್ ಹಾಗೂ ಕೋಚ್ ಬ್ರೆಂಡನ್ ಮೆಕ್ಕಲಮ್ ನಿರ್ಧಾರಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ನಾಯಕ ದಿನೇಶ್ ಕಾರ್ತಿಕ್ ಹಾಗೂ ಕೋಚ್ ಬ್ರೆಂಡನ್ ಮೆಕ್ಕಲಮ್ ತಂಡವನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂದು ಮಾರ್ಗನ್ ಹೇಳಿದ್ದಾರೆ.

ಆತ ಆಡಿದ್ದು ಸಾಕು, ತಂಡದಿಂದ ಕೈಬಿಡಿ: ಪಂಜಾಬ್ ತಂಡಕ್ಕೆ ಪೀಟರ್ಸನ್ ಸಲಹೆಆತ ಆಡಿದ್ದು ಸಾಕು, ತಂಡದಿಂದ ಕೈಬಿಡಿ: ಪಂಜಾಬ್ ತಂಡಕ್ಕೆ ಪೀಟರ್ಸನ್ ಸಲಹೆ

ದಿನೇಶ್ ಕಾರ್ತಿಕ್ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಈವರೆಗೆ ಕೇವಲ 49 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಬೇರೆ ಬೇರೆ ಕ್ರಮಾಮಕದಲ್ಲೂ ಕಾರ್ತಿಕ್ ಕಣಕ್ಕಿಳಿದಿದ್ದಾರೆ. ಕೆಲ ಸಂದರ್ಭಗಳಲ್ಲಿ ಇಯಾನ್ ಮಾರ್ಗನ್ ಕ್ರಮಾಂಕವನ್ನು ಕೆಳಗಿಳಿಸಿ ತಾವು ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ ಯಾವುದು ಕೂಡ ಫಲಪ್ರದವಾಗಿಲ್ಲ. ಹೀಗಾಗಿ ನಾಯಕತ್ವ ಬದಲಾಗಲಿ ಎಂಬ ಕೂಗು ಕೇಳಿ ಬಂದಿತ್ತು.ಆದರೆ ಈ ವಾದವನ್ನು ಇಯಾನ್ ಮಾರ್ಗನ್ ನಿರಾಕರಿಸಿದ್ದಾರೆ. ನಾಯಕ ಹಾಗೂ ಕೋಚ್ ಇಬ್ಬರೂ ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ.

ಇಯಾನ್ ಮಾರ್ಗನ್ ಮಾತನಾಡುತ್ತಾ ಮೈದಾನದ ಒಳಗೆ ಹಾಗೂ ಹೊರಗೆ ತೆಗೆದುಕೊಳ್ಳುವ ನಿರ್ಧಾರಗಳು ಕೇವಲ ದಿನೇಶ್ ಕಾರ್ತಿಕ್ ಒಬ್ಬರೇ ತೆಗೆದುಕೊಳ್ಳುವ ನಿರ್ಧಾರಗಳು ಆಗಿರುವುದಿಲ್ಲ. ಎಲ್ಲಾ ಹಿರಿಯ ಆಟಗಾರರು ಕೂಡ ಯುವ ಆಟಗಾರರಿಗೆ ಮಾರ್ಗದರ್ಶನವನ್ನು ನೀಡಲು ದೊಡ್ಡ ಪಾತ್ರವನ್ನು ಹೊಂದಿದ್ದಾರೆ ಎಂದು ಇಯಾನ್ ಮಾರ್ಗನ್ ಹೇಳಿಕೆಯನ್ನು ನೀಡಿದ್ದಾರೆ.

ಕೆಲ ಬೌಲರ್‌ಗಳಿಗೆ ವಿಭಿನ್ನ ಬ್ಯಾಟ್ಸ್‌ಮನ್‌ಗಳು ಸೂಕ್ತವಾಗುತ್ತಾರೆ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ನಾಯಕ ದಿನೇಶ್ ಕಾರ್ತಿಕ್ ಹಾಗೂ ಕೋಚ್ ಮೆಕ್ಕಲಮ್ ಚೆನ್ನಾಗಿ ಅರ್ಥೈಸಿಕೊಂಡು ನಿರ್ಧಾರವನ್ನು ತೆಗೆದುಕೊಳ್ಳಲು ಯಶಸ್ವಿಯಾಗುತ್ತಿದ್ದಾರೆ. ತಂಡಕ್ಕೆ ಸೂಕ್ತವಾಗುವಂತಾ ಸಾಕಷ್ಟು ಅವಕಾಶಗಳು ನಮ್ಮಲ್ಲಿ ಇದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

Story first published: Friday, October 9, 2020, 18:04 [IST]
Other articles published on Oct 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X