ಬುಡಾಪೆಸ್ಟ್: ಪೋರ್ಚುಗಲ್ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ ಯೂರೋ ಕಪ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಯೂರೋ ಇತಿಹಾಸದಲ್ಲಿ ಅತೀ ಹೆಚ್ಚು ಗೋಲ್ ಬಾರಿಸಿದ ಸಾರ್ವಕಾಲಿಕ ಆಟಗಾರನಾಗಿ ರೊನಾಲ್ಡೋ ಗುರುತಿಸಿಕೊಂಡಿದ್ದಾರೆ. ಮಂಗಳವಾರ (ಜೂನ್ 15)ರ ಪಂದ್ಯದಲ್ಲಿ ರೊನಾಲ್ಡೋ ಈ ಸಾಧನೆ ಮಾಡಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಆರೋಪಿ ಅಂಕಿತ್ ಚೌವಾಣ್ ಸ್ಪರ್ಧಾತ್ಮಕ ಕ್ರಿಕೆಟ್ಗೆ ರೆಡಿ!
ಹಂಗೆರಿಯ ಬುಡಾಪೆಸ್ಟ್ನಲ್ಲಿರುವ ಪುಸ್ಕಸ್ ಅರೆನಾದಲ್ಲಿ ಮಂಗಳವಾರ ನಡೆದ ಯೂರೋ 2020 ಗ್ರೂಪ್ 'ಎಫ್' ಆರಂಭಿಕ ಪಂದ್ಯದಲ್ಲಿ ಹಂಗೆರಿ ವಿರುದ್ಧ ಪೋರ್ಚುಗಲ್ 3-0ಯ ಜಯ ದಾಖಲಿಸಿತ್ತು. ಪೋರ್ಚುಗಲ್ ಪರ ರಾಫೌಲ್ ಗೆರೆರೋ 84ನೇ ನಿಮಿಷದಲ್ಲಿ ಗೋಲ್ ಬಾರಿಸಿದರೆ, ಕ್ರಿಸ್ಚಿಯಾನೊ ರೊನಾಲ್ಡೋ 87 (ಪೆನಾಲ್ಟಿ) ಮತ್ತು 90+2ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಗೆಲುವು ಸಾರಿದ್ದರು.
ಈ ಎರಡು ಗೋಲ್ಗಳೊಂದಿಗೆ ರೊನಾಲ್ಡೋ ಯೂರೋ ಕಪ್ನಲ್ಲಿ ಒಟ್ಟು 11 ಗೋಲ್ಗಳನ್ನು ಬಾರಿಸಿದಂತಾಗಿದೆ. ಇದು ಯೂರೋ ಕಪ್ನಲ್ಲೇ ಅತ್ಯಧಿಕ ಗೋಲ್ ಸಾಧನೆಯಾಗಿದೆ. ಮಂಗಳವಾರದ ಪಂದ್ಯಕ್ಕೂ ಮುನ್ನ ರೊನಾಲ್ಡೋ, 9 ಗೋಲ್ಗಳೊಂದಿಗೆ ಫ್ರೆಂಚ್ ಮಾಜಿ ಆಟಗಾರ ಮೈಕೆಲ್ ಪ್ಲಾಟಿನಿ ಜೊತೆಗೆ ದಾಖಲೆ ಸರಿದೂಗಿಸಿಕೊಂಡಿದ್ದರು.
ಏಳು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ಆಡಲು ಭಾರತೀಯ ಮಹಿಳಾ ತಂಡ ಸಜ್ಜು
ಪೋರ್ಚುಗಲ್ ತಂಡದ ನಾಯಕರಾಗಿರುವ ರೊನಾಲ್ಡೋ ಐದು ಯುರೋಪಿಯನ್ ಚಾಂಪಿಯನ್ಶಿಪ್ ಆವೃತ್ತಿಗಳಲ್ಲಿ ಆಡಿದ ಮೊದಲ ಫುಟ್ಬಾಲರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ರೊನಾಲ್ಡೋ ಒಟ್ಟು ಐದು ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ಜಯಿಸಿದ್ದಾರೆ.