ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾವೈರಸ್ ಭೀತಿ: ಯೂರೋ ಟಿ20 ಸ್ಲ್ಯಾಮ್ ಮತ್ತೆ ಮುಂದಕ್ಕೆ

Euro T20 Slam postponed again over Coronavirus

ನವದೆಹಲಿ, ಜುಲೈ 22: ಕೊರೊನಾವೈರಸ್ ಭೀತಿಯಿಂದಾಗಿ ಯೂರೋ ಟಿ20 ಸ್ಲ್ಯಾಮ್ ಮುಂದೂಡಲ್ಪಟ್ಟಿದೆ. ಮಾರಕ ಸೋಂಕಿನ ಕಾರಣ ಟೂರ್ನಿ ಮುಂದಕ್ಕೆ ಹೋಗಿರುವುದನ್ನು ಆಯೋಜಕರು ಬುಧವಾರ (ಜುಲೈ 22) ಘೋಷಿಸಿದ್ದಾರೆ. ಯೂರೋ ಟಿ20 ಸ್ಲ್ಯಾಮ್ ಮುಂದೂಡಲ್ಪಡುತ್ತಿರುವುದು ಇದು ಎರಡನೇ ಬಾರಿ.

ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ನೆದರ್‌ಲ್ಯಾಂಡ್ಸ್‌ ಮೂಲದ 6 ಫ್ರಾಂಚೈಸಿಗಳ ಟೂರ್ನಿಯಿದು. ಅಸಲಿಗೆ ಈ ಕ್ರಿಕೆಟ್ ಪಂದ್ಯಾಟ 2019ರಂದೇ ಆರಂಭವಾಗಬೇಕಿತ್ತು. ಆದರೆ ಕಾರಣಾಂತರದಿಂದ ಟೂರ್ನಿ 2020ಕ್ಕೆ ಮುಂದೂಡಲ್ಪಟ್ಟಿತ್ತು. ಇದೀಗ ಕೊರೊನಾ ಕಾರಣ ಟೂರ್ನಿ ಮತ್ತೆ 2021ಕ್ಕೆ ಮುಂದೂಡಲ್ಪಟ್ಟಿದೆ.

ಟಿ20 ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಅಬ್ಬರ ನಡೆಸಲಿದ್ದಾರೆ ಎಬಿ ಡಿ ವಿಲಿಯರ್ಸ್!ಟಿ20 ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಅಬ್ಬರ ನಡೆಸಲಿದ್ದಾರೆ ಎಬಿ ಡಿ ವಿಲಿಯರ್ಸ್!

ಯೂರೋ ಟಿ20 ಸ್ಲ್ಯಾಮ್‌ನಲ್ಲಿ ಟಿ20 ಸ್ಟಾರ್ ಆಟಗಾರರಾದ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್, ವಿಶ್ವಕಪ್ ವಿಜೇತ ಇಂಗ್ಲೆಂಡ್‌ ನಾಯಕ ಇಯಾನ್ ಮಾರ್ಗನ್, ಪಾಕಿಸ್ತಾನ ಶಾಹೀದ್ ಅಫ್ರಿದಿ ಸೇರಿದಂತೆ ಇನ್ನೊಂದಿಷ್ಟು ಪ್ರಮುಖ ಕ್ರಿಕೆಟಿಗರು ಪಾಲ್ಗೊಳ್ಳುವುದರಲ್ಲಿದ್ದರು.

ಆತನಂತಾ ಆಟಗಾರ ಟೀಮ್ ಇಂಡಿಯಾದಲ್ಲಿದ್ದರೆ ಸೋಲೇ ಇಲ್ಲ: ಇರ್ಫಾನ್ ಪಠಾಣ್ಆತನಂತಾ ಆಟಗಾರ ಟೀಮ್ ಇಂಡಿಯಾದಲ್ಲಿದ್ದರೆ ಸೋಲೇ ಇಲ್ಲ: ಇರ್ಫಾನ್ ಪಠಾಣ್

ಈ ವರ್ಷ ಟೂರ್ನಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಈ ಸಂಬಂಧ ನಡೆದ ಸಭೆಯಲ್ಲಿ ಟೂರ್ನಿಯನ್ನು ಈ ವರ್ಷ ನಡೆಸುವ ಆಲೋಚನೆಗೆ ಹಿನ್ನಡೆಯಾಯಿತು. ಹೀಗಾಗಿ ಮುಂದಿನ ವರ್ಷ ಯೂರೋ ಟಿ20 ಸ್ಲ್ಯಾಮ್ ನಡೆಸಲು ನಿರ್ಧರಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

Story first published: Thursday, July 23, 2020, 9:45 [IST]
Other articles published on Jul 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X