ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್

Even today, the third umpire’s decision baffles me: Saeed Ajmal

ಕರಾಚಿ, ಏಪ್ರಿಲ್ 28: ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ ಅವರಿಗೆ 2011ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಕೈತಪ್ಪಿದ್ದ ಬೇಸರ ಇಂದಿಗೂ ಕಡಿಮೆಯಾದಂತೆ ಕಾಣಿಸುತ್ತಿಲ್ಲ. ಅದರಲ್ಲೂ ಇತ್ತೀಚೆಗೆ ಇಂಗ್ಲೆಂಡ್‌ನ ಅಂಪೈರ್ ಇಯಾನ್ ಗೌಲ್ಡ್, ಆವತ್ತು ಸಚಿನ್ ನಿಜಕ್ಕೂ ಔಟ್ ಆಗಿದ್ದರು ಎಂದ ಬಳಿಕವಂತೂ ಅಜ್ಮಲ್ ಚಡಪಡಿಕೆ ಇನ್ನೂ ಜಾಸ್ತಿಯಾದಂತಿದೆ.

ಕೈ ಬೆರಳು ಕಳೆದುಕೊಂಡ ಭಾವುಕ ಕ್ಷಣ ಸ್ಮರಿಸಿದ ಪಾರ್ಥಿವ್ ಪಟೇಲ್!ಕೈ ಬೆರಳು ಕಳೆದುಕೊಂಡ ಭಾವುಕ ಕ್ಷಣ ಸ್ಮರಿಸಿದ ಪಾರ್ಥಿವ್ ಪಟೇಲ್!

ಸಚಿನ್ ಆವತ್ತು ನಿಜಕ್ಕೂ ಔಟಾಗಿದ್ದರು ಎಂದು ಪಾಕ್ ಸ್ಪಿನ್ನರ್ ಅಜ್ಮಲ್ ವಾದಿಸುತ್ತಿರುವ ಆ ಪಂದ್ಯ ನಡೆದಿದ್ದು ಭಾರತದ ಮೊಹಾಲಿ ಸ್ಟೇಡಿಯಂನಲ್ಲಿ. 2011ರ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯವದು. ಸಚಿನ್ ಆವತ್ತು ಗಣನೀಯ 85 ರನ್ ಬಾರಿಸಿದ್ದರು.

'ನೀನು ನನ್ನ ಮಗನ ವೃತ್ತಿಬದುಕನ್ನೇ ಮುಗಿಸಿಬಿಟ್ಟೆ!': ಮಾತು ನೆನೆದ ಯುವಿ'ನೀನು ನನ್ನ ಮಗನ ವೃತ್ತಿಬದುಕನ್ನೇ ಮುಗಿಸಿಬಿಟ್ಟೆ!': ಮಾತು ನೆನೆದ ಯುವಿ

ಪಾಕಿಸ್ತಾನ ವಿರುದ್ಧ ಆವತ್ತು 29 ರನ್ ಗೆಲುವು ದಾಖಲಿಸಿದ್ದ ಭಾರತ ಫೈನಲ್‌ಗೆ ಪ್ರವೇಶಿಸಿತ್ತು. ಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿ ಎರಡನೇ ವಿಶ್ವಕಪ್ ಗೆದ್ದಿತ್ತು.

ಅಜ್ಮಲ್ ಎಸೆತಕ್ಕೆ ಎಲ್‌ಬಿಡಬ್ಲ್ಯೂ

ಅಜ್ಮಲ್ ಎಸೆತಕ್ಕೆ ಎಲ್‌ಬಿಡಬ್ಲ್ಯೂ

ಆವತ್ತಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್, 23 ರನ್ ಬಾರಿಸಿದ್ದಾಗ ಅಜ್ಮಲ್ ಎಸೆತಕ್ಕೆ ಎಲ್‌ಬಿಡಬ್ಲ್ಯೂ ಆಗಿದ್ದರು. ಆಗ ಅಂಪೈರ್ ಆಗಿದ್ದ ಗೌಲ್ಡ್ ಇದಕ್ಕೆ ಔಟ್ ತೀರ್ಪಿತ್ತಿದ್ದರು. ಆದರೆ ರಿವ್ಯೂ ಪರಿಶೀಲಿಸಿದ ಥರ್ಡ್ ಅಂಪೈರ್ ಬಿಲ್ಲಿ ಬೌಡೆನ್, ಚೆಂಡು ಲೈನ್‌ನಲ್ಲಿ ಇರಲಿಲ್ಲ ಎಂದು ಔಟ್ ತೀರ್ಪನ್ನು ಬದಲಾಯಿಸಿದ್ದರು.

ನಿರ್ಧಾರ ಸರಿ ಎಂದ ಗೌಲ್ಡ್

ನಿರ್ಧಾರ ಸರಿ ಎಂದ ಗೌಲ್ಡ್

ಆವತ್ತಿನ ಘಟನೆಯನ್ನು ಇತ್ತೀಚೆಗೆ ನೆನಪಿಸಿಕೊಂಡಿದ್ದ ಐಸಿಸಿ ಎಲೈಟ್ ಪ್ಯಾನೆಲ್‌ನ ಅಂಪೈರ್‌ ಗೌಲ್ಡ್, ತನ್ನ ನಿರ್ಧಾರವೇ ಸರಿ. ತೆಂಡೂಲ್ಕರ್ ಆವತ್ತು ಔಟಾಗಿದ್ದರು ಎಂದಿದ್ದರು. ಅದೇ ಘಟನೆಯ ಬಗ್ಗೆ ಮಾತನಾಡಿರುವ ಅಜ್ಮಲ್ ಕೂಡ ಅಂದು ಸಚಿನ್ 100 ಶೇ. ಔಟ್ ಎಂದು ಹೇಳಿದ್ದಾರೆ.

ವಿಕೆಟ್ ಮುರಿದಿದ್ದು ಇದೇ ಅಜ್ಮಲ್

ವಿಕೆಟ್ ಮುರಿದಿದ್ದು ಇದೇ ಅಜ್ಮಲ್

ಅಂದ್ಹಾಗೆ ಅಂದು 85 ರನ್‌ ಬಾರಿಸಿದ ಬಳಿಕ ಸಚಿನ್ ಔಟಾಗಿದ್ದು ಇದೇ ಸಯೀದ್ ಅಜ್ಮಲ್ ಅವರ ಎಸೆತಕ್ಕೆ ಅಂದರೆ 36.6ನೇ ಓವರ್‌ನಲ್ಲಿ. ಪಾಕ್ ಆಲ್ ರೌಂಡರ್ ಶಾಹಿದ್ ಅಫ್ರಿದಿ ಕ್ಯಾಚ್ ಮಾಡಿ ಸಚಿನ್‌ ಅವರನ್ನು ಪೆವಿಲಿಯನ್‌ಗೆ ಅಟ್ಟಿದ್ದರು. ಆವತ್ತು ಭಾರತ 260-9 (50) ಸ್ಕೋರ್ ಮಾಡಿದ್ದರೆ, ಪಾಕಿಸ್ತಾನ 231-10 (49.5) ಸ್ಕೋರ್‌ ಮಾಡಿತ್ತು.

ನಾಟೌಟ್ ತೀರ್ಪು ಶಾಕ್ ನೀಡಿತ್ತು

ನಾಟೌಟ್ ತೀರ್ಪು ಶಾಕ್ ನೀಡಿತ್ತು

'ಇದು ನನ್ನ ಕಣ್ಣಮುಂದೆಯೇ ನಡೆದಿದ್ದು. ಸಚಿನ್ ಆವತ್ತು ಶೇ. 100ರಷ್ಟು ಔಟಾಗಿದ್ದರು. ಶಾಹಿದ್ ಅಫ್ರಿದಿ, ಕಮ್ರನ್ ಅಕ್ಮಲ್, ವಹಾಬ್ ಎಲ್ಲರೂ ನನ್ನಲ್ಲಿ ಸಚಿನ್ ಔಟಲ್ಲವೆ ಎಂದು ಕೇಳಿದ್ದರು, ನಾನದಕ್ಕೆ ಹೌದು ಔಟ್ ಎಂದೇ ಹೇಳಿದ್ದೆ. ಆದರೆ ಥರ್ಡ್ ಅಂಪೈರ್ ಅವರ ನಾಟೌಟ್ ತೀರ್ಪು ನನಗೆ ಶಾಕ್ ನೀಡಿತ್ತು,' ಎಂದು ಸಯೀದ್ ಅಜ್ಮಲ್ ಹೇಳಿಕೊಂಡಿದ್ದಾರೆ.

Story first published: Tuesday, April 28, 2020, 16:19 [IST]
Other articles published on Apr 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X