ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಗ ಭಾರತದ ಕ್ರಿಕೆಟಿಗ, ಇಂಜಿನಿಯರ್: ಈಗ ಯುಎಸ್ ಕ್ರಿಕೆಟ್ ತಂಡದ ನಾಯಕ!

Ex-Mumbai pacer Saurabh Netravalkar, now US cricket team captain

ನವದೆಹಲಿ, ನವೆಂಬರ್ 4: ಬದುಕು ನಮ್ಮನ್ನು ಎತ್ತೆತ್ತಲೋ ತಿರುಗಿಸಿ ಮತ್ತೆಲ್ಲಿಗೋ ತಂದು ನಿಲ್ಲಿಸಿಬಿಡುತ್ತೆ ಅನ್ನೋದಕ್ಕೆ ಸೌರಭ್ ನೇತ್ರವಾಲ್ಕರ್ ಉತ್ತಮ ಉದಾಹರಣೆ. ಭಾರತ ಅಂಡರ್ 19 ತಂಡದ ಆಟಗಾರರಾಗಿದ್ದವರು ಕಲಿಕೆಗಾಗಿ ಅಮೆರಿಕಾಕ್ಕೆ ತೆರಳಿದ್ದರು. ಮತ್ತೀಗ ಯುಎಸ್‌ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಮಾಡೆಲ್ ವರಿಸಿದ ಇಂಗ್ಲೆಂಡ್ ಏಕದಿನ ತಂಡದ ನಾಯಕ ಇಯಾನ್ ಮಾರ್ಗನ್ಮಾಡೆಲ್ ವರಿಸಿದ ಇಂಗ್ಲೆಂಡ್ ಏಕದಿನ ತಂಡದ ನಾಯಕ ಇಯಾನ್ ಮಾರ್ಗನ್

27ರ ಹರೆಯದ ಸೌರಭ್, ಈ ಹಿಂದೆ ಮುಂಬೈ ತಂಡದ ಮಧ್ಯಮ ವೇಗಿಯಾಗಿದ್ದವರು. 2010ರ ಅಂಡರ್ 19 ವರ್ಲ್ಡ್ ಕಪ್ ತಂಡದಲ್ಲೂ ಆಡಿದ್ದ ಸೌರಭ್ ಮುಂಬೈಯ ಸರ್ದಾರ್ ಪಟೇಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಪದವೀಧರ.

ಐಪಿಎಲ್: ಪ್ರೀತಿ ಜಿಂಟಾ ತಂಡವನ್ನು ಸೆಹ್ವಾಗ್ ತೊರೆದಿದ್ದೇಕೆ?ಐಪಿಎಲ್: ಪ್ರೀತಿ ಜಿಂಟಾ ತಂಡವನ್ನು ಸೆಹ್ವಾಗ್ ತೊರೆದಿದ್ದೇಕೆ?

ಕಲಿಕೆಗಾಗಿ ಅಮೆರಿಕಾಕ್ಕೆ ತೆರಳಿದ್ದ ಸೌರಭ್, ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದರ ಬಗ್ಗೆ ಇಲ್ಲೊಂದಿಷ್ಟು ಚುಟುಕು ಮಾಹಿತಿಗಳಿವೆ.

'ಮಾಸ್ಟರ್ಸ್' ಪದವಿಗಾಗಿ ಪಯಣ

'ಮಾಸ್ಟರ್ಸ್' ಪದವಿಗಾಗಿ ಪಯಣ

ಜಿಆರ್‌ಇ ಮತ್ತು ಟಿಒಇಎಫ್‌ಎಲ್‌ ಪರೀಕ್ಷೆ ತೆಗೆದುಕೊಂಡಿದ್ದ ಸೌರಭ್ 2015ರಲ್ಲಿ ಸ್ನಾತಕೋತ್ತರ ಪದವಿಗಾಗಿ ಅಮೆರಿಕಾದ ಕಾರ್ನೆಲ್ ಯೂನಿವರ್ಸಿಟಿಗೆ ತೆರಳಿದ್ದರು. ನೇತ್ರವಾಲ್ಕರ್ ಅವರನ್ನು ಕ್ರಿಕೆಟ್ ಮತ್ತೆ ಸೆಳೆಯಿತು. ಈಗ ಸೌರಭ್ ಯುಎಸ್‌ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ದಾಳಿಯಾತ್ಮಕ ಬೌಲರ್

ದಾಳಿಯಾತ್ಮಕ ಬೌಲರ್

2010ರ ಅಂಡರ್ 19 ವರ್ಲ್ಡ್ ಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸೌರಭ್ ದಾಳಿಯಾತ್ಮಕ ಬೌಲರ್ ಎಂದು ಗುರುತಿಸಿಕೊಂಡಿದ್ದರು. ಈಗ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿರುವ ಜೋ ರೂಟ್ ಮತ್ತು ಪಾಕಿಸ್ತಾನದ ಅಪಾಯಕಾರಿ ಆರಂಭಿಕ ಆಟಗಾರ ಅಹ್ಮದ್ ಶೆಹಝಾದ್ ವಿಕೆಟ್‌ಗಳನ್ನು ಆಗ ಸೌರಭ್ ಕೆಡವಿದ್ದರು.

ಕರ್ನಾಟಕ ವಿರುದ್ಧ ಪಾರಮ್ಯ

ಕರ್ನಾಟಕ ವಿರುದ್ಧ ಪಾರಮ್ಯ

ಅದಾಗಿ ಮೂರು ವರ್ಷಗಳ ಬಳಿಕ ಅಂದರೆ 2013-14ರಲ್ಲಿ ಮುಂಬೈ ಪರ ಒಂದೇ ಒಂದು ರಣಜಿ ಟ್ರೋಫಿ ಪಂದ್ಯದಲ್ಲಿ ಪಾಲ್ಗೊಂಡಿದ್ದ ಎಡಗೈ ಬೌಲರ್ ಸೌರಭ್ ನೇತ್ರವಾಲ್ಕರ್, ಕರ್ನಾಟಕದ ಮೂರು ವಿಕೆಟ್ ಉರುಳಿಸಿ ಪಾರಮ್ಯ ಮೆರೆದಿದ್ದೂ ಉಲ್ಲೇಖನೀಯ.

ಅಮೆರಿಕಾದ ಬೆಸ್ಟ್ ಕ್ರಿಕೆಟರ್

ಅಮೆರಿಕಾದ ಬೆಸ್ಟ್ ಕ್ರಿಕೆಟರ್

ಮಹಾರಾಷ್ಟ್ರದ ಮುಂಬೈಯಲ್ಲಿ 16 ಅಕ್ಟೋಬರ್ 1991ರಲ್ಲಿ ಜನಿಸಿದ್ದ ಸೌರಭ್, 2018ರ ಜನವರಿಯಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದಿದ್ದ '2017-18 ರೀಜಿನಲ್ ಸೂಪರ್ 50' ಟೂರ್ನಮೆಂಟ್ ಗಾಗಿ ಅಮೆರಿಕಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈಗ ಅಮೆರಿಕಾದಲ್ಲೇ ಬೆಸ್ಟ್ ಕ್ರಿಕೆಟರ್ ಎನಿಸಿದ್ದಾರೆ.

ಕೆಲಿಕೆಯೆಡೆಗೆ ಮುಖ ಮಾಡಿದ್ದೆ

ಕೆಲಿಕೆಯೆಡೆಗೆ ಮುಖ ಮಾಡಿದ್ದೆ

ಹಿಂದಿನ ದಿನಗಳನ್ನು ಸ್ಮರಿಸಿಕೊಂಡು ಮಾತನಾಡಿದ ಸೌರಭ್, ಎರಡು ವರ್ಷಗಳ ಕಾಲ ಸಂಪೂರ್ಣವಾಗಿ ಕ್ರಿಕೆಟ್ ಗಾಗಿ ಸಮಯ ಮೀಸಲಿಟ್ಟಿದ್ದೆ. ಆದರೆ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟಕ್ಕೇರುವುದು ನನ್ನಿಂದ ಸಾಧ್ಯವಾಗಲಾರದು ಅನ್ನಿಸಿ ಕ್ರಿಕೆಟ್ ತೊರೆದು ಕೆಲಿಕೆಯೆಡೆಗೆ ಮುಖ ಮಾಡಿದ್ದೆ. ಈಗ ಮತ್ತೆ ಕ್ರಿಕೆಟ್‌ನೆಡೆಗೆ ಬಂದಿದ್ದೇನೆ' ಎಂದರು.

Story first published: Sunday, November 4, 2018, 18:07 [IST]
Other articles published on Nov 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X