ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನ್ನ ನಂಬರ್ ಹಲವರ ಬಳಿ ಇದೆ, ಆದರೆ ನಾಯಕತ್ವ ಬಿಟ್ಟಾಗ ಮೆಸೇಜ್ ಮಾಡಿದ್ದು ಆತ ಮಾತ್ರ ಎಂದ ಕೊಹ್ಲಿ!

Except MS Dhoni no one messaged me when I quit test captaincy says Virat Kohli

ಸದ್ಯ ಯುಎಇ ನೆಲದಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರು ನಿರತರಾಗಿದ್ದಾರೆ. ಗ್ರೂಪ್ ಹಂತದಲ್ಲಿನ ಪಾಕ್ ಮತ್ತು ಹಾಂಕಾಂಗ್ ವಿರುದ್ಧದ ಪಂದ್ಯಗಳಲ್ಲಿ ಜಯ ಸಾಧಿಸಿದ ಟೀಂ ಇಂಡಿಯಾ ಸದ್ಯ ಸೂಪರ್ 4 ಸುತ್ತಿನಲ್ಲಿ ಸೆಣಸಾಡುತ್ತಿದ್ದು, ನಿನ್ನೆಯಷ್ಟೇ ( ಸೆಪ್ಟೆಂಬರ್ 4 ) ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸೂಪರ್ 4 ಹಂತದ ತನ್ನ ಪ್ರಥಮ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಸೋಲನ್ನು ಅನುಭವಿಸಿದೆ.

IND vs PAK Super 4: ಬೌಲರ್‌ಗಳೇ ವಿಲನ್ಸ್; ಭಾರತದ ವಿರುದ್ಧ ಪಾಕ್‌ಗೆ 5 ವಿಕೆಟ್‍ಗಳ ರೋಚಕ ಜಯIND vs PAK Super 4: ಬೌಲರ್‌ಗಳೇ ವಿಲನ್ಸ್; ಭಾರತದ ವಿರುದ್ಧ ಪಾಕ್‌ಗೆ 5 ವಿಕೆಟ್‍ಗಳ ರೋಚಕ ಜಯ

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿ ಎದುರಾಳಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 182 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಹೀಗೆ ಇಷ್ಟು ದೊಡ್ಡ ಮೊತ್ತವನ್ನು ಕಲೆ ಹಾಕಿದರೂ ಸಹ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಲು ಆಗಲಿಲ್ಲ. ತಂಡದ ಬೌಲಿಂಗ್ ವಿಭಾಗದ ಕಳಪೆ ಪ್ರದರ್ಶನದ ಕಾರಣದಿಂದಾಗಿ ಈ ದೊಡ್ಡ ಮೊತ್ತವನ್ನು ಸಹ ಸಂರಕ್ಷಿಸಲಾಗದ ಟೀಮ್ ಇಂಡಿಯಾ ಸೋಲನ್ನು ಅನುಭವಿಸಿತು. ಎದುರಾಳಿ ಪಾಕಿಸ್ತಾನ ಮಹಮ್ಮದ್ ರಿಜ್ವಾನ್ ಹಾಗೂ ಮೊಹಮ್ಮದ್ ನವಾಜ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ 5 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸಿತು.

IND vs PAK: ಸೂಪರ್ 4 ಪಂದ್ಯದಿಂದ ಡಿಕೆ ಔಟ್; ಇದಕ್ಕಿಂತ ಅನ್ಯಾಯ ಮತ್ತೊಂದಿಲ್ಲ!IND vs PAK: ಸೂಪರ್ 4 ಪಂದ್ಯದಿಂದ ಡಿಕೆ ಔಟ್; ಇದಕ್ಕಿಂತ ಅನ್ಯಾಯ ಮತ್ತೊಂದಿಲ್ಲ!

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕ್ ವಿರುದ್ಧ ಬೃಹತ್ ಮೊತ್ತ ಕಲೆಹಾಕಿಯೂ ಸೋತರೆ, ವಿರಾಟ್ ಕೊಹ್ಲಿ ಮಾತ್ರ ತಮ್ಮ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳ ಹೃದಯವನ್ನು ಗೆದ್ದರು. ಪಂದ್ಯದಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದ ವಿರಾಟ್ ಕೊಹ್ಲಿ ಪಂದ್ಯ ಮುಕ್ತಾಯವಾದ ನಂತರ ಮಾಧ್ಯಮದವರ ಜತೆ ಮಾತನಾಡಿದ್ದು, ತಾವು ಟೆಸ್ಟ್ ನಾಯಕತ್ವ ತ್ಯಜಿಸಿದ ವೇಳೆ ಜರುಗಿದ ಘಟನೆಯೊಂದನ್ನು ಸ್ಮರಿಸಿದ್ದಾರೆ.

ನಾನು ಟೆಸ್ಟ್ ನಾಯಕತ್ವ ತ್ಯಜಿಸಿದಾಗ ಮೆಸೇಜ್ ಮಾಡಿದ್ದು ಅವರೊಬ್ಬರೇ

ನಾನು ಟೆಸ್ಟ್ ನಾಯಕತ್ವ ತ್ಯಜಿಸಿದಾಗ ಮೆಸೇಜ್ ಮಾಡಿದ್ದು ಅವರೊಬ್ಬರೇ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ತಾವು ಭಾರತ ಕ್ರಿಕೆಟ್ ತಂಡದ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ ಹಾಗೂ ಆ ವೇಳೆ ತಮಗೆ ಮೆಸೇಜ್ ಮಾಡಿದ ಏಕೈಕ ವ್ಯಕ್ತಿ ಯಾರು ಎಂಬುದನ್ನು ಸಹ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. ತನ್ನ ಮೊಬೈಲ್ ನಂಬರ್ ಹಲವಾರು ಮಂದಿ ಬಳಿ ಇದ್ದರೂ ಸಹ ಅಂದು ಯಾರೊಬ್ಬರೂ ಸಹ ಮೆಸೇಜ್ ಮಾಡಲಿಲ್ಲ ಆದರೆ ಆ ವ್ಯಕ್ತಿ ಮಾತ್ರ ಮೆಸೇಜ್ ಮಾಡಿದರು ಎಂಬುದನ್ನು ವಿರಾಟ್ ಕೊಹ್ಲಿ ಬಿಚ್ಚಿಟ್ಟಿದ್ದಾರೆ.

ಕೊಹ್ಲಿ ನಾಯಕತ್ವ ಬಿಟ್ಟಾಗ ಮೆಸೇಜ್ ಮಾಡಿದ್ದು ಎಂ ಎಸ್ ಧೋನಿ!

ಕೊಹ್ಲಿ ನಾಯಕತ್ವ ಬಿಟ್ಟಾಗ ಮೆಸೇಜ್ ಮಾಡಿದ್ದು ಎಂ ಎಸ್ ಧೋನಿ!

ಹೌದು, ತಾನು ಟೆಸ್ಟ್ ನಾಯಕತ್ವ ಬಿಟ್ಟಾಗ ತನಗೆ ಮೆಸೇಜ್ ಮಾಡಿ ವಿಚಾರಿಸಿದ್ದು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ ಎಂಬುದನ್ನು ವಿರಾಟ್ ಕೊಹ್ಲಿ ಸ್ವತಃ ಬಿಚ್ಚಿಟ್ಟಿದ್ದಾರೆ. ತನ್ನ ನಂಬರ್ ಅನೇಕರ ಬಳಿ ಇದ್ದರೂ ಸಹ ಧೋನಿ ಹೊರತುಪಡಿಸಿ ಉಳಿದ ಯಾರೂ ಸಹ ಮೆಸೇಜ್ ಮಾಡಲಿಲ್ಲ ಎಂದು ಕೊಹ್ಲಿ ಬಿಚ್ಚಿಟ್ಟಿದ್ದಾರೆ. ಹಾಗೂ ಇದು ತನಗೆ ಮಹೇಂದ್ರ ಸಿಂಗ್ ಧೋನಿ ಮೇಲೆ ಇರುವ ನಿಜವಾದ ಗೌರವ ಹಾಗೂ ಅವರ ಜೊತೆ ಇರುವ ಸಂಬಂಧ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಕೊಹ್ಲಿ ಹೇಳಿಕೆಗೆ ವ್ಯಕ್ತವಾಯ್ತು ಮಿಶ್ರ ಪ್ರತಿಕ್ರಿಯೆ

ಕೊಹ್ಲಿ ಹೇಳಿಕೆಗೆ ವ್ಯಕ್ತವಾಯ್ತು ಮಿಶ್ರ ಪ್ರತಿಕ್ರಿಯೆ

ಇನ್ನು ಎಂಎಸ್ ಧೋನಿ ಕುರಿತಾಗಿ ವಿರಾಟ್ ಕೊಹ್ಲಿ ಈ ಹೇಳಿಕೆ ನೀಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದು ಎಂ ಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಡುವೆ ಇರುವ ಸ್ನೇಹ ಸಂಬಂಧ ಎಂದು ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಈ ಸಮಯದಲ್ಲಿ ಈ ವಿಷಯವನ್ನು ಬಹಿರಂಗಪಡಿಸುವ ಅಗತ್ಯವೇನಿತ್ತು ಹಾಗೂ ಎಂಎಸ್ ಧೋನಿ ಮೆಸೇಜ್ ಮಾಡಿದರು ಎಂಬ ವಿಷಯವನ್ನು ತಿಳಿಸುವ ಭರದಲ್ಲಿ ಇತರರಾರೂ ಮೆಸೇಜ್ ಮಾಡಲಿಲ್ಲ ಎಂಬುದನ್ನು ಉಲ್ಲೇಖಿಸಿ ಬೇಡದ ವಿವಾದ ಹುಟ್ಟು ಹಾಕುವುದಾದರೂ ಏಕೆ ಎಂದು ಕೊಹ್ಲಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

Story first published: Monday, September 5, 2022, 11:14 [IST]
Other articles published on Sep 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X