ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಹುಲ್ ದ್ರಾವಿಡ್ ಕೋಚ್ ಆಗಿದ್ದಕ್ಕೆ ಸಾಕಷ್ಟು ಉತ್ಸುಕನಾಗಿದ್ದೇನೆ, ಕಲಿಯಲು ಸಾಕಷ್ಟಿದೆ: ಕೆ.ಎಲ್ ರಾಹುಲ್

KL RAHUL

ಇತ್ತೀಚೆಗಷ್ಟೇ ಟೀಮ್ ಇಂಡಿಯಾದ ಉಪನಾಯಕನಾಗಿ ನೇಮಕಗೊಂಡ ಕೆಎಲ್ ರಾಹುಲ್, ತಂಡದ ಗಮನವು ಮುಂಬರುವ 2022ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ.

ಭಾರತವು ಟಿ20 ವಿಶ್ವಕಪ್ ರನ್ನರ್ ಅಪ್ ಆಗಿರುವ ನ್ಯೂಜಿಲೆಂಡ್‌ ವಿರುದ್ಧ ಮೂರು ಟಿ20 ಪಂದ್ಯಗಳು ಮತ್ತು ಎರಡು ಟೆಸ್ಟ್‌ ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ. ನವೆಂಬರ್ 17 ಮತ್ತು ಡಿಸೆಂಬರ್ 7 ರ ನಡುವೆ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ಸರಣಿ ಮತ್ತೊಂದು ವಿಶೇಷವೆಂದರೆ ಹೊಸ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆಯಾಗಿರುವುದು.

ಹೌದು ಕೋಚ್ ದ್ರಾವಿಡ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಹೊಸ ಎತ್ತರಕ್ಕೆ ತಲುಪುವ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ರವಿಶಾಸ್ತ್ರಿ ಜಾಗದಲ್ಲಿ ರಾಹುಲ್ ದ್ರಾವಿಡ್ ಕೋಚ್ ಆಗಿ ಆಯ್ಕೆಗೊಂಡರೆ, ನಾಯಕ ವಿರಾಟ್ ಕೊಹ್ಲಿ ನಾಯಕತ್ವ ಬಿಟ್ಟುಕೊಟ್ಟ ಬಳಿಕ ರೋಹಿತ್ ಶರ್ಮಾ ಅವರು ಜವಾಬ್ದಾರಿಯನ್ನು ವಹಿಸಿಕೊಂಡರು.

"ಯುವಕನಾಗಿದ್ದಾಗ, ನಾನು ನಾನು ಅವರಿಂದ ಸಲಹೆಗಳನ್ನು ಪಡೆಯಲು ಪ್ರಯತ್ನಿಸಿದೆ ಮತ್ತು ಅವರು ಕರ್ನಾಟಕದಲ್ಲಿ ನಮ್ಮೊಂದಿಗೆ ಯಾವಾಗಲೂ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಮುಂದಿರುತ್ತಿದ್ದರು. ನಾವು ಅವರನ್ನು ಕೋಚ್ ಆಗಿ ಹೊಂದಲು ತುಂಬಾ ಉತ್ಸುಕರಾಗಿದ್ದೇವೆ ಏಕೆಂದರೆ ನಾವು ಅವರಿಂದ ಕಲಿಯಲು ಮತ್ತು ಆಟವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅವರು ಯಾವಾಗಲೂ ಟೀಮ್ ಮ್ಯಾನ್ ಆಗಿದ್ದಾರೆ ಮತ್ತು ಅದೇ ಸಂಸ್ಕೃತಿಯನ್ನು ಇಲ್ಲಿಯೂ ತರಲು ಬಯಸುತ್ತಾರೆ ಎಂದು ರಾಹುಲ್ ಸೋಮವಾರ ಪಂದ್ಯ ಪೂರ್ವ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾನು ಆಸ್ಪತ್ರೆಗೆ ತೆರಳುವಾಗ ಉಸಿರೇ ಆಡಲು ಸಾಧ್ಯವಾಗುತ್ತಿರಲಿಲ್ಲ: ಮೊಹಮ್ಮದ್ ರಿಜ್ವಾನ್ನಾನು ಆಸ್ಪತ್ರೆಗೆ ತೆರಳುವಾಗ ಉಸಿರೇ ಆಡಲು ಸಾಧ್ಯವಾಗುತ್ತಿರಲಿಲ್ಲ: ಮೊಹಮ್ಮದ್ ರಿಜ್ವಾನ್

ಉಪನಾಯಕನಾಗಿ ತಮ್ಮ ಅವಧಿಯ ಕುರಿತು ಮಾತನಾಡಿದ ರಾಹುಲ್, ತಂಡದ ವಾತಾವರಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಯುವಕರಿಗೆ ಸಹಾಯ ಮಾಡುವುದು ಅವರ ಪ್ರಾಥಮಿಕ ಗುರಿಯಾಗಿದೆ ಎಂದು ಹೇಳಿದರು. "ಇದು ಹೆಚ್ಚುವರಿ ಜವಾಬ್ದಾರಿಯಾಗಿದೆ ಆದರೆ ನಾನು ಯಾವಾಗಲೂ ಅದನ್ನು ಆನಂದಿಸುವೆ. ಡ್ರೆಸ್ಸಿಂಗ್ ರೂಂಗೆ ಬರುವ ಪ್ರತಿಯೊಬ್ಬರೂ ಸಂತೋಷದಿಂದ ಖಚಿತಪಡಿಸಿಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯ. ರಾಹುಲ್ ದ್ರಾವಿಡ್ ಬರುವುದರಿಂದ, ಅವರು ಅದನ್ನು ಸಾಧಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ರಾಹುಲ್ ಹೇಳಿದ್ದಾರೆ.

ಇನ್ನು ರೋಹಿತ್ ಶರ್ಮಾ ಟೀಂ ಇಂಡಿಯಾ ಟಿ20 ಕ್ರಿಕೆಟ್ ನಾಯಕನಾಗಿರುವ ಕುರಿತು ಮಾತನಾಡಿರುವ ರಾಹುಲ್ "ರೋಹಿತ್ ನಾಯಕನಾಗುವುದರಲ್ಲಿ ಹೊಸದೇನೂ ಇಲ್ಲ ಮತ್ತು ಮುಂಬೈ ಇಂಡಿಯನ್ಸ್‌ನೊಂದಿಗೆ ಅಂಕಿಅಂಶಗಳು ಎಲ್ಲರಿಗೂ ನೋಡಲು ಇವೆ. ಅವರು ಆಟದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿದ್ದಾರೆ ಮತ್ತು ಯುದ್ಧತಂತ್ರದಲ್ಲಿ ತುಂಬಾ ನೈಪುಣ್ಯತೆಯಿದೆ. ನಾವು ಯಾವ ರೀತಿಯ ಕ್ರಿಕೆಟ್ ಆಡಲಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮುಂದಿನ ಒಂದೆರಡು ವಾರಗಳು ನಮಗೆ ಉತ್ತೇಜನಕಾರಿಯಾಗಿದೆ, "ಎಂದು ಅವರು ರೋಹಿತ್ ಅಡಿಯಲ್ಲಿ ಆಡುವ ಬಗ್ಗೆ ರಾಹುಲ್ ಹೇಳಿದರು.

ಡಾ.ಸುಧಾಕರ್ ರಾಂಗ್ ಟ್ರೀಟ್ ಮೆಂಟ್ ನಿಂದ ಬಿಜೆಪಿಗೆ ಭಾರಿ ಮುಜುಗರ | Oneindia Kannada

ಮುಂದಿನ ವರ್ಷ ಟಿ 20 ವಿಶ್ವಕಪ್‌ಗೆ ಈಗಲೇ ತಂಡವು ಒಂದು ಕಣ್ಣನ್ನು ಇಟ್ಟಿದೆ. ಎಂದು ಕೆ. ಎಲ್ ರಾಹುಲ್ ತಿಳಿಸಿದ್ದಾರೆ.

Story first published: Tuesday, November 16, 2021, 10:17 [IST]
Other articles published on Nov 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X