ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಭ್ ಪಂತ್‌ ನಾಯಕತ್ವದ ಹೊಣೆಗಾರಿಕೆಯನ್ನು ಸೂಕ್ತವಾಗಿ ನಿಭಾಯಿಸುತ್ತಾರೆ: ಪಾಂಟಿಂಗ್

Extra responsibility of captaincy will sit well with Rishabh Pant, feels Ricky Ponting
Rishab Pant ಮೇಲೆ ರಿಕಿ ಪಾಂಟಿಂಗ್ ಗೆ ಸಿಕ್ಕಾಪಟ್ಟೆ ನಂಬಿಕೆ | Oneindia Kannada

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ನಾಯಕ ರಿಷಭ್ ಪಂತ್ ತಮಗೆ ದೊರೆತಿರುವ ನಾಯಕತ್ವ ಜವಾಬ್ಧಾರಿಯನ್ನು ಆಸ್ವಾದಿಸಲಿದ್ದಾರೆ ಎಂದು ಎಂದು ಡೆಲ್ಲಿ ತಂಡದ ಕೋಚ್ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಶ್ರೇಯಸ್ ಐಯ್ಯರ್ ಗಾಯಗೊಂಡು ಐಪಿಎಲ್‌ನಿಂದ ಹೊರಗುಳಿದ ಕಾರಣ ರಿಷಭ್ ಪಂತ್ ಡೆಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಹೊತ್ತಿದ್ದಾರೆ.

"ನನಗನಿಸುತ್ತದೆ ಹೊಸ ಜವಾಬನ್ಧಾರಿ ಆತನಿಗೆ ಅತ್ಯುತ್ತಮವಾಗಿ ಹೊಂದಿಕೆಯಾಗುತ್ತದೆ. ಆತ ಜವಾಬ್ಧಾರಿಯನ್ನು ಇಷ್ಟಪಡುವ ಆಟಗಾರ, ಆತ ತಂಡದ ಮುಖ್ಯ ಆಟಗಾರನಾಗುಲು ಬಯಸುತ್ತಾರೆ, ಆತ ನಾಯಕನಾಗಲು ಬಯಸುತ್ತಾರೆ. ಆತ ಇದರಲ್ಲಿ ಹೇಗೆ ಮುಂದುವರಿಯುತ್ತಾನೆ ಎಂದು ನಾನು ತುಂಬಾ ಉತ್ಸುಕತೆಯಿಂದ ಕಾಯುತ್ತಿದ್ದೇನೆ" ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

ಐಪಿಎಲ್‌ನಿಂದ ಹೊರಗುಳಿದರೂ ಶ್ರೇಯಸ್ ಐಯ್ಯರ್‌ಗೆ ದೊರೆಯಲಿದೆ ಸಂಪೂರ್ಣ 7 ಕೋಟಿ ಸಂಬಳಐಪಿಎಲ್‌ನಿಂದ ಹೊರಗುಳಿದರೂ ಶ್ರೇಯಸ್ ಐಯ್ಯರ್‌ಗೆ ದೊರೆಯಲಿದೆ ಸಂಪೂರ್ಣ 7 ಕೋಟಿ ಸಂಬಳ

"ನಾವು ಆತನಿಗೆ ಖಂಡಿಯವಾಗಿಯೂ ಸಹಾಯಕವಾಗಿರುತ್ತೇವೆ. ಆದರೆ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಆತ ಹೆಚ್ಚಿನ ಸಹಾಯ ಆತನಿಗೆ ಅಗತ್ಯವೇ ಇರುವುದಿಲ್ಲ" ಎಂದು ಮಾಧ್ಯಮ ಹೇಳಿಕೆಯಲ್ಲಿ ರಿಕಿ ಪಾಂಟಿಂಗ್ ಹೇಳಿಕೊಂಡಿದ್ದಾರೆ.

"ರಿಷಭ್ ಅವರ ನಾಯಕತ್ವದ ಬಗ್ಗೆ ಹೆಚ್ಚಿನ ಮಾತುಕತೆ ನಡೆಸಲು ಸಾಧ್ಯವಾದರೆ ಪಂದ್ಯಾವಳಿ ಪ್ರಾರಂಭವಾಗುತ್ತಿದ್ದಂತೆ ನಾವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಪಂದ್ಯಾವಳಿ ಆರಂಬವಾದ ನಂತರ ಎಲ್ಲಾ ರೀತಿಯ ಮಾಹಿತಿಯೊಂದಿಗೆ ನಾಯಕನನ್ನು ಸಿದ್ಧಪಡಿಸಬೇಕಿದೆ" ಎಂದು ಪಾಂಟಿಂಗ್ ಪ್ರತಿಕ್ರಿಯಿಸಿದ್ದಾರೆ.

ಮುಂಬೈ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XI ಹೆಸರಿಸಿದ ಚೋಪ್ರಾಮುಂಬೈ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XI ಹೆಸರಿಸಿದ ಚೋಪ್ರಾ

"ನಾವು ನಮ್ಮ ಮಾತುಕತೆಗಳನ್ನು ನಡೆಸಿದ್ದೇವೆ. ಕಳೆದ ಬಾರಿಗಿಂತ ಒಂದು ಹೆಜ್ಜೆ ಹೇಗೆ ಮುಂದಿಬೇಕು ಎಂಬುದರ ಕುರಿತಾಗಿಯೇ ಆಗಿದೆ. ಮತ್ತೊಂದು ಮುಖ್ಯ ಸಂಗತಿಯೆಂದರೆ ಕಳೆದ ಬಾರಿಗಿಂತ ಸ್ವಲ್ಪ ಭಿನ್ನವಾದ ಬಳಗವನ್ನು ನಾವು ಹೊಂದಿದ್ದೇವೆ" ಎಂದಿದ್ದಾರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್.

Story first published: Monday, April 5, 2021, 23:18 [IST]
Other articles published on Apr 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X