ನಿಂದನೆ ಮತ್ತು ಮಾನಸಿಕ ಕಿರುಕುಳಕ್ಕೆ RCB ಫ್ಯಾನ್‌ ಗರ್ಲ್‌ ಉತ್ತರ!

RCB ಗರ್ಲ್ ಗೆ ಮಹಿಳೆಯರೇ ದೊಡ್ಡ ವೈರಿಗಳು..!? | Oneindia Kannada

ಬೆಂಗಳೂರು, ಮೇ 13: ಪ್ರಸಕ್ತ ಸಾಲಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ನಡುವಣ ಪಂದ್ಯದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಆರ್‌ಸಿಬಿಗೆ ಬೆಂಬಲಿಸುತ್ತಿದ್ದ, ಚೆಂದದ ಹುಡುಗಿಯೊಬ್ಬಳು ರಾತ್ರೋ ರಾತ್ರಿ ಇಂಟರ್‌ನೆಟ್‌ ಸೆನ್ಸೇಷನ್‌ ಆಗಿಬಿಟ್ಟಳು.

ಐಪಿಎಲ್‌ ಪಂದ್ಯದ ವೇಳೆ ಟೆಲಿವಿಷನ್‌ ಪರದೆ ಮೇಲೆ ಕಾಣಿಸಿಕೊಂಡಿದ್ದೇ ಕ್ಷಣ ಸಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಫ್ಯಾನ್‌ ಗರ್ಲ್‌ ಟ್ಯಾಗ್‌ನೊಂದಿಗೆ ದೀಪಿಕಾ ಘೋಸ್‌ ಎಂಬ ಹುಡುಗಿ ಫೋಟೊಗಳು ಇನ್ನಿಲ್ಲದಂತೆ ಹರಿದಾಡಿಬಿಟ್ಟಿತ್ತು.

RCB ಗರ್ಲ್ ಟ್ರೆಂಡಿಂಗ್, ಎಲ್ಲಾ ಮ್ಯಾಚಿಗೂ ಕರೆಸಿ ಎಂದು ಕೊಹ್ಲಿಗೆ ಮನವಿ

ಅನಿರೀಕ್ಷಿತವಾಗಿ ಸಿಕ್ಕ ಜನಪ್ರಿಯತೆ ಕೆಲ ಕಾಲ ಸಂತಸ ನೀಡಿದರೂ, ಅದರ ದುಷ್ಪರಿಣಾಮದ ಕರಾಳತೆ ನಿಧಾನವಾಗಿ ಚಾಚಿಕೊಂಡಿದ್ದು, ಇದೀಗ ದೀಪಿಕಾ ಅವರನ್ನು ಕಾಡಲಾರಂಭಿಸಿದೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಗಾಣಿಸಿಕೊಂಡ ಒಂದೇ ತಪ್ಪಿಗೆ ಇಂದು ದೀಪಿಕಾ ಘೋಸ್‌ ಮಾನಸಿಕ ಹಿಂಸೆ ಮತ್ತು ಅಪರಿಚಿತ ವ್ಯಕ್ತಿಗಳಿಂದೆಲ್ಲಾ ನಿಂದನೆಗೆ ಎದುರಿಸುವಂತಾಗಿದೆ.

ಅವಕಾಶ ಸಿಕ್ರೆ ಮಿ. ನ್ಯಾಗ್ಸ್‌ ಪಾತ್ರ ಮಾಡ್ತೇನೆಂದ ಕೊಹ್ಲಿ: ವಿಡಿಯೊ

ಈ ಕುರಿತಾಗಿ ಮತ್ತು ಹಬ್ಬಿರಿರುವ ಹಲವು ಊಹಾ ಪೋಹಗಳು ಮತ್ತು ಈ ಎಲ್ಲಾ ಬೆಳವಣಿಗೆಗಳಿಂದ ತಾವು ಅನುಭವಿಸುತ್ತಿರುವ ಮಾನಸಿಕ ಚಿತ್ರಹಿಂಸೆ ಬಗ್ಗೆ ದೀಪಿಕಾ ಘೋಸ್‌ ತಮ್ಮ ಇನ್‌ಸ್ಟಾಗ್ರಾಮ್‌ ಗೋಡೆಯ ಮೇಲೆ ಬರೆದುಕೊಳ್ಳುವ ಮೂಲಕ ಎಲ್ಲರ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. "ನನ್ನ ಹೆಸರು ದೀಪಿಕಾ ಘೋಸ್‌. ಇದಷ್ಟೇ ಸತ್ಯ,'' ಎಂದು ತಮ್ಮೊಳಗಿನ ನೋವನ್ನು ಹಂಚಿಕೊಂಡಿದ್ದಾರೆ.

RCB ಇನ್‌ಸೈಡರ್‌: ಕೋಳಿ ಸಾರಿನ ಚರ್ಚೆಯಲ್ಲಿ ಹೆಟ್ಮಾಯೆರ್‌!

ಮೊದಲಿಗೆ ಒಂದು ಫೋಟೊದೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಆರಂಭಿಸಿದ ದೀಪಿಕಾ, "ನಾನು ಯಾರು, ನನಗೆ ಈ ಜನಪ್ರಿಯತೆ ಮತ್ತು ಫಾಲೋವರ್ಸ್‌ ಹೇಗೆ ಸಿಕ್ಕಿತು? ಇದರಿಂದ ನನಗೇನನಿಸುತ್ತಿದೆ? ನೀವೆಲ್ಲರೂ ನನ್ನ ಬಗ್ಗೆ ಮಾತನಾಡುತ್ತಿದ್ದೀರಿ. ನನಗೂ ಹೇಳಬೇಕನಿಸುತ್ತಿದೆ,'' ಎಂದು ಸಂದೇಶ ಬರೆಯಲಾರಂಭಿಸಿದರು.

ದೀಪಿಕಾ ಘೋಸ್‌ ಎಂಬುದಷ್ಟೇ ಸತ್ಯ

"ನನ್ನ ಹೆಸರು ದೀಪಿಕಾ ಘೋಸ್‌. ನನ್ನ ಬಗ್ಗೆ ಹೇಳಲಾಗುತ್ತಿರುವ ವಿಷಯಗಳಲ್ಲಿ ಇದಷ್ಟೇ ಶೇ. 100 ರಷ್ಟು ಸತ್ಯ. ಶನಿವಾರ ನಡೆದ ಎಸ್‌ಆರ್‌ಎಚ್‌ ಮತ್ತು ಆರ್‌ಸಿಬಿ ನಡುವಣ ಪಂದ್ಯದಿಂದ ಇದೆಲ್ಲವೂ ಶುರುವಾಯಿತು. ಹಲವು ವರ್ಷಗಳಿಂದ ನಾನು ಆರ್‌ಸಿಬಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದೇನೆ. ಬೆಂಗಳೂರು ತಂಡವನ್ನು ಹುರಿದುಂಬಿಸುವುದು ನಮ್ಮ ಕುಟುಂಬದ ಸಂಪ್ರದಾಯದಂತೆ ಆಗಿಬಿಟ್ಟಿದೆ. ಅಂತೆಯೇ ಮೇ 4ರಂದು ಪಂದ್ಯ ವೀಕ್ಷಿಸಲು ಹೋದಾಗ ಈ ರೀತಿಯ ವಿಭಿನ್ನ ಅನುಭವ ಎದುರಾಗುತ್ತದೆ ಎಂದು ಕಂಡಿತಾ ಅಂದಾಜಿಸಿರಲಿಲ್ಲ,'' ಎಂದು ತಮ್ಮ ಅನುಭವವನ್ನು ದೀಪಿಕಾ ಹಂಚಿಕೊಂಡಿದ್ದಾರೆ.

ನಾನು ಸಾಮಾನ್ಯ ಹುಡುಗಿ

"ಕ್ಯಾಮೆರಾದಲ್ಲಿ ನನ್ನನ್ನು ಎಷ್ಟು ಬಾರಿ ತೋರಿಸಲಾಯಿತು ಎಂಬುದು ನನಗೆ ಗೊತ್ತಿರಲಿಲ್ಲ. ನಾನೇನು ಸೆಲೆಬ್ರಿಟಿ ಅಲ್ಲ. ಪಂದ್ಯವನ್ನು ನೋಡಿ ಆನಂದಿಸುತ್ತಿದ್ದ ಸಾಮಾನ್ಯ ಹುಡುಗಿ ಅಷ್ಟೇ. ಈ ರೀತಿಯ ಜನಪ್ರಿಯತೆಗೆ ನಾನೂ ಏನನ್ನೂ ಮಾಡಿರಲಿಲ್ಲ. ಅದನ್ನು ನಾನು ಅಪೇಕ್ಷಿಸಿಯೂ ಇರಲ್ಲಿಲ್ಲ,'' ಎಂದು ಅನಿರೀಕ್ಷಿತವಾಗಿ ತಮಗೆ ಸಿಕ್ಕ ಜನಪ್ರಿಯತೆಯ ಕುರಿತಾಗಿ ದೀಪಿಕಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನನ್ನಲ್ಲಿ ನನ್ನದೇ ಪ್ರತಿಭೆಗಳಿವೆ

"ನಾನು ಸೌಮ್ಯ ಸ್ವಭಾವದ, ಕಲಾತ್ಮಕ ಹಾಗೂ ಶ್ರಮವಹಿಸಿ ದುಡಿಯುವಂತಹ ಮಹಿಳೆ. ನಾನು ಸುಶಿಕ್ಷಿತೆ, ಜಗತ್ತಿನ ವಿವಿಧ ಭಾಗಗಳಿಗೆ ಪ್ರವಾಸ ಮಾಡಿದ್ದೇನೆ. ನನ್ನ ಸ್ನೇಹಿತರು ಮತ್ತು ಕುಟುಂಬದವರು ನನ್ನನ್ನು ಪ್ರೀತಿಸುತ್ತಾರೆ. ನನ್ನಲ್ಲಿ ನನ್ನದೇ ಆದ ಪ್ರತಿಭೆಗಳಿವೆ ಅವುಗಳ ಮೂಲಕ ವೃತ್ತಿ ಬದುಕಿನಲ್ಲೂ ಡ್ಯಾನ್ಸರ್‌/ಟೀಚರ್‌/ಉದ್ಯಮಿಯಾಗಿ ಯಶಸ್ಸು ಕಂಡಿದ್ದೇನೆ. ಕೇವಲ ಐಪಿಎಲ್‌ ಪಂದ್ಯದ ವೇಳೆ ಟೆಲಿವಿಷನ್‌ ಪರದೆ ಮೇಲೆ ಕಾಣಿಸಿಕೊಂಡ ಮಾತ್ರಕ್ಕೆ ಅದು ನನ್ನ ದೊಡ್ಡ ಸಾಧನೆ ಎಂದು ಕೊಚ್ಚಿಕೊಳ್ಳುವಷ್ಟು ಮೂರ್ಖಳಲ್ಲ. ಇದರಿಂದ ನನ್ನ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಸಂಖ್ಯಗಳಲ್ಲಿ ಮಾತ್ರವೇ ಬದಲಾವಣೆಯಾಗಿದೆ. ಇವೆಲ್ಲವುದರಿಂದ ನನಗೆ ಆಘಾತವಾಗಿದೆ,'' ಎಂದು ತಮ್ಮ ವಿರುದ್ಧ ಟ್ರೋಲ್‌ಗಳಿಗೆ ಉತ್ತರಿಸಿರುವ ದೀಪಿಕಾ, ತಮಗಾದ ನೋವನ್ನೂ ವಿವರಿಸಿದ್ದಾರೆ.

ಮಾನಸಿಕ ಕಿರುಕುಳವಿದು

"ಅಪಾರ ಪ್ರೀತಿ ಸಿಕ್ಕಿರುವುದಕ್ಕೆ ಆಭಾರಿಯಾಗಿದ್ದೇನೆ. ಆದರೆ, ಅನಗತ್ಯ ಋಣಾತ್ಮಕ ವಿಚಾರಗಳಿಂದ ನನಗೆ ಘಾಸಿಯಾಗಿದೆ. ಅತೀವ ನಿಂದನೆ ಮತ್ತು ಮಾನಸಿಕ ಕಿರುಕುಳ ಎದುರಿಸಿದ್ದೇನೆ. ನನ್ನ ಹೆಸರು ಮತ್ತು ನನ್ನ ಪ್ರೊಫೈಲ್‌ ಹೇಗೆ ತಿಳಿಯುತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕ್ಷಣಮಾತ್ರದಲ್ಲಿ ನನ್ನ ಗುರುತು, ನನ್ನ ಖಾಸಗಿತನ ಹಾಗೂ ಜೀವನಕ್ಕೂ ಕನ್ನ ಬಿದ್ದಂತಾಗಿದೆ. ನನ್ನನ್ನು ಫಾಲೋ ಮಾಡಿರುವ ಹಲವು ಗಂಟಸರು ಈ ಮೂಲಕ ನನ್ನನ್ನು ಅಸಭ್ಯವಾಗಿ ನಿಂದಿಸಿದ್ದಾರೆ,'' ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮಹಿಳೆಯರಿಂದಲೂ ನಿಂದನೆ

"ನನಗೆ ಆಘಾತ ನೀಡಿದ ಸಂಗತಿಯೆಂದರೆ ಹಲವು ಮಹಿಳೆಯರು ನನ್ನನ್ನು ಈ ಮೂಲಕ ದ್ವೇಶಿಸುತ್ತಿರುವುದು. ನನ್ನ ಬಗ್ಗೆ ನನ್ನ ವ್ಯಕ್ತಿತ್ವದ ಬಗ್ಗೆ ತಿಳಿಯದೇ ಇಷ್ಟು ಕಠೋರವಾಗಿ ಅಸಭ್ಯವಾಗಿ ನಿಂದಿಸುವುದು ಎಷ್ಟು ಸರಿ?. ನಾನೂ ಕೂಡ ನಿಮ್ಮಂತೆ ಸಾಮಾನ್ಯಳು! ಈ ಜಗತ್ತಿನಲ್ಲಿ ಮಹಿಳೆಯರಿಗೆ ಮಹಿಳೆಯರು ಬೆಂಬಲಿಸುವ ಅಗತ್ಯವಿದೆ. ಒಂದು ಹುಡುಗಿಯ ಬಗ್ಗೆ ಈ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಬಿಡಿ. ಒಂದು ಅನಗತ್ಯವಾಗಿ ಇಂಥದ್ದೊಂದು ಸಂಗತಿಗೆ ಸಿಲುಕಿದ್ದಾಳೆ ಎಂಬುದರ ಅರಿವಿರಲಿ," ಎಂದು ತಮ್ಮನ್ನು ಅನಗತ್ಯವಾಗಿ ಟೀಕಿಸಿದವರನ್ನು ದೀಪಿಕಾ ಪ್ರಶ್ನಿಸಿದ್ದಾರೆ.

ನಾನೇ ಆರ್‌ಸಿಬಿ ಗರ್ಲ್‌

"ಹಲವರು ನಾನು ನಿಮ್ಮನ್ನು ಯಾಕೆ ಫಾಲೊ ಮಾಡಬೇಕೆಂಬ ಪ್ರಶ್ನೆ ಕೇಳುತ್ತಿದ್ದಾರೆ. ಈ ಪ್ರಶ್ನೆ ಸಹಜ. ಇಷ್ಟೆಲ್ಲಾ ಆದಮೇಲೆ ಇದನ್ನು ಉತ್ತಮ ರೀತಿಯಲ್ಲಿ, ಅರ್ಥಯುತವಾಗಿ ಹಾಗೂ ಅಮೋಘವಾಗಿ ಬಳಸಿಕೊಳ್ಳ ಬೇಕೆಂದಿದ್ದೇನೆ. ಹೌದು, ನಾನೇ ಆರ್‌ಸಿಬಿ ಗರ್ಲ್‌. ಆದರೆ, ಅದಕ್ಕಿಂತಲೂ ಮೀರಿದ ವ್ಯಕ್ತಿತ್ವ ನನ್ನದು,'' ಎಂದು ದಿಟ್ಟ ಸಂದೇಶವನ್ನೂ ಸಾರಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, May 13, 2019, 20:05 [IST]
Other articles published on May 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X