ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ABD ಮತ್ತೆ ದಕ್ಷಿಣ ಆಫ್ರಿಕಾ ಪರ ಆಡುವ ವಿಶ್ವಾಸ ವ್ಯಕ್ತಪಡಿಸಿದ ಫಾಫ್ ಡುಪ್ಲೆಸಿಸ್

 Faf Du Plesis Excited For ABD Reunion In South Africa Colours

ವಿಶ್ವ ಕ್ರಿಕೆಟ್‌ನ ಸೂಪರ್ ಮ್ಯಾನ್, ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಮತ್ತೆ ದಕ್ಷಿಣ ಆಫ್ರಿಕಾ ಜೆರ್ಸಿ ತೊಡುವ ಸಾಧ್ಯತೆಗಳ ಕುರಿತು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

ಎಬಿ ಡಿವಿಲಿಯರ್ಸ್‌ಗೆ 2019 ರ ವಿಶ್ವಕಪ್‌ಗೆ ಲಭ್ಯವಾಗಲು ಸ್ವಲ್ಪ ತಡವಾಯಿತು. ಅದಾಗಲೇ ತಂಡವನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈಗಾಗಲೇ ಕೋವಿಡ್‌ನಿಂದ ಮುಂದೂಡಲ್ಪಟ್ಟಿರುವ 2020ರ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಡಿವಿಲಿಯರ್ಸ್ ಮತ್ತೊಮ್ಮೆ ತಮ್ಮ ನಿರ್ಧಾರವನ್ನು ಮರುಶೀಲಿಸಲು ಫಾಫ್ ಡುಪ್ಲೆಸಿಸ್ ಹೇಳಿದ್ದಾರಂತೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಬಿ ಡಿವಿಲಿಯರ್ಸ್ ವಿದಾಯಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಬಿ ಡಿವಿಲಿಯರ್ಸ್ ವಿದಾಯ

ದುರದೃಷ್ಟವಶಾತ್ ಕೋವಿಡ್ -19 ಪರಿಸ್ಥಿತಿಯಿಂದಾಗಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020 ಟಿ 20 ವಿಶ್ವಕಪ್ ಅನ್ನು ಮುಂದೂಡಲಾಯಿತು. ಆದರೆ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 2021 ರ ವಿಶ್ವಕಪ್‌ನಲ್ಲಿ ಡುಪ್ಲೆಸಿಸ್ ದಕ್ಷಿಣ ಆಫ್ರಿಕಾದ ಜೆರ್ಸಿಯಲ್ಲಿ ಮತ್ತೆ ಡಿವಿಲಿಯರ್ಸ್ ರನ್ನು ನೋಡಲು ಉತ್ಸುಕನಾಗಿದ್ದಾರೆ.

"ಇದು [ಡಿವಿಲಿಯರ್ಸ್‌ಗೆ ಹಿಂತಿರುಗುವಂತೆ ಮನವೊಲಿಸಲು ಪ್ರಯತ್ನಿಸುತ್ತಿದೆ] ವಾಸ್ತವವಾಗಿ ನಾನು 2019 ರ ವಿಶ್ವಕಪ್‌ನ ನಂತರ ಬಹಳ ನೇರವಾಗಿ ಪ್ರಯತ್ನಿಸಿದ್ದೇನೆ. ಒಂದು ವಾರದ ನಂತರ (ವಿಶ್ವಕಪ್‌ನಿಂದ ಹೊರಬಂದ ಬಳಿಕ), ನಾನು 'ಸರಿ, ಮುಂದಿನ ವಿಶ್ವಕಪ್‌ಗಾಗಿ ನಾವು ಹೇಗೆ ಯೋಜಿಸಬಹುದು?' ಅಂದರೆ 2020 [ಟಿ 20] ವಿಶ್ವಕಪ್ಗೆ ಹೇಗೆ ಸಿದ್ಧಗೊಳ್ಳಬಹುದು ಎಂದು ನಾನು ಎಬಿಡಿಗೆ ಫೋನ್ ಕರೆ ಮಾಡಿದ್ದೇನೆ. ಜೊತೆಗೆ ಈ ಬಾರಿ ನೀವು ಸೆಲೆಕ್ಷನ್‌ಗೆ ಲಭ್ಯರಾಗಿರಿ, ದಕ್ಷಿಣ ಆಫ್ರಿಕಾ ಪರ ಟಿ 20 ಕ್ರಿಕೆಟ್ ಆಡಲು ಮರಳಿ ಬನ್ನಿ ಎಂದು ಕೇಳಿಕೊಂಡಿರುವುದಾಗಿ'' ದಕ್ಷಿಣ ಆಫ್ರಿಕಾದ ಬಿಸಿನೆಸ್ ಕೌನ್ಸಿಲ್ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಡುಪ್ಲೆಸಿಸ್ ಹೇಳಿದರು.

ಡಿವಿಲಿಯರ್ಸ್ ಅವರು 2018 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಆಘಾತ ನೀಡಿದರು. 2019 ವಿಶ್ವಕಪ್‌ಗೆ ಮರಳಿ ಕರೆತರುವ ಪ್ರಯತ್ನವು ವಿಫಲವಾಯಿತು. ಆದರೆ ಇದೀಗ ದಕ್ಷಿಣ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಚರ್ ಅವರು ಡಿವಿಲಿಯರ್ಸ್, ಕ್ರಿಸ್ ಮೋರಿಸ್ ಮತ್ತು ಇಮ್ರಾನ್ ತಾಹಿರ್ ಅವರ ಪುನರಾಗಮನವನ್ನು ಪರಿಗಣಿಸಿ ಲಭ್ಯವಾಗುವಂತೆ ಗಡುವನ್ನು ನಿಗದಿಪಡಿಸಿದ್ದಾರೆ.

Story first published: Saturday, October 31, 2020, 9:42 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X