ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಡಿಸಿ ಎದುರು ಸಿಎಸ್‌ಕೆ ಗೆಲುವಿನ ಗುಟ್ಟು ಬಿಚ್ಚಿಟ್ಟ ಡು ಪ್ಲೆಸಿಸ್

Faf Du Plessis explains how having experienced players helped CSK

ವಿಶಾಖಪಟ್ಟಣ, ಮೇ 11: ಮುಂಚಿತ ಯೋಜನೆಗಳು ಆಟದ ಮೇಳೆ ಕೆಲಸಕ್ಕೆ ಬರುತ್ತವೆ ಎಂಬುದಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಕ್ವಾಲಿಫೈಯರ್-2 ಪಂದ್ಯ ಸಾಕ್ಷಿ ಒದಗಿಸಿತ್ತು. ಪಂದ್ಯದಲ್ಲಿ 6 ವಿಕೆಟ್‌ ಸೋಲಿನೊಂದಿಗೆ ಯುವ ತಂಡ ಡೆಲ್ಲಿ ಐಪಿಎಲ್ ಫೈನಲ್ ಪ್ರವೇಶಕ್ಕೆ ಇದ್ದ ಅಪರೂಪದ ಅವಕಾಶವನ್ನು ಕೈ ಚೆಲ್ಲಿತ್ತು.

ಐಪಿಎಲ್ ಫೈನಲ್‌: ಚೆನ್ನೈ vs ಮುಂಬೈ, ಕುತೂಹಲಕಾರಿ ಅಂಕಿ-ಅಂಶಗಳು!ಐಪಿಎಲ್ ಫೈನಲ್‌: ಚೆನ್ನೈ vs ಮುಂಬೈ, ಕುತೂಹಲಕಾರಿ ಅಂಕಿ-ಅಂಶಗಳು!

ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಪ್ರವೇಶಿಸಿದ್ದ ಡಿಸಿ, ಪ್ರಮುಖ ಪಂದ್ಯದಲ್ಲಿ ಸೋತಿದ್ದಕ್ಕೆ ಎದುರಾಳಿ ಸಿಎಸ್‌ಕೆ ತಂಡದಲ್ಲಿದ ಅನುಭವಿ ಆಟಗಾರರ ಚತುರ ಆಟ ಕಾರಣವಾಗಿತ್ತು. ಅದರಲ್ಲೂ ಚೆನ್ನೈ ಆರಂಭಿಕರಾದ ಫಾ ಡು ಪ್ಲೆಸಿಸ್ ಮತ್ತು ಶೇನ್ ವ್ಯಾಟ್ಸನ್ ಅರ್ಧಶತಕ ತಂಡದ ಗೆಲುವಿಗೆ ಪ್ರಮುಖ ಕಾರಣ.

IPL: CSKಗೆ ಗೆಲುವಿನ ಫಾರ್ಮುಲಾ ಹೇಳಿಕೊಟ್ಟ ವಿವಿಯನ್‌ ರಿಚರ್ಡ್ಸ್!IPL: CSKಗೆ ಗೆಲುವಿನ ಫಾರ್ಮುಲಾ ಹೇಳಿಕೊಟ್ಟ ವಿವಿಯನ್‌ ರಿಚರ್ಡ್ಸ್!

ಪಂದ್ಯದ ಗೆಲುವಿನ ಬಗ್ಗೆ ಮಾತನಾಡುತ್ತ, ಡು ಪ್ಲೆಸಿಸ್, '. ಸುಮಾರು 5-6 ಪಂದ್ಯಗಳಲ್ಲಿ ನಾವು ಗಮನಾರ್ಹ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಆದರೆ ಸಿಎಸ್‌ಕೆ ಹೆಚ್ಚಿನ ಪಂದ್ಯಗಳಲ್ಲಿ ಗೆದ್ದಿರುವುದರಿಂದ ಆತ್ಮವಿಶ್ವಾಸವನ್ನು ನಾವೀ ಆಟದಲ್ಲಿ ಬಳಸಿಕೊಳ್ಳಬೇಕು ಎಂದು ಆಟಕ್ಕೂ ಮುನ್ನ ನಾವಿಬ್ಬರೂ ಮಾತನಾಡಿಕೊಂಡಿದ್ದೆವು. ಅದನ್ನೇ ಮಾಡಿದೆವು' ಎಂದರು.

ಡಿಸಿ ನೀಡಿದ್ದ 148 ಸುಲಭ ರನ್ ಗುರಿ ಬೆಂಬತ್ತಿದ ಸಿಎಸ್‌ಕೆ, ಡು ಪ್ಲೆಸಿಸ್ ಅವರ ಮೊದಲ ವಿಕೆಟ್ ಕಳೆದುಕೊಳ್ಳುವಾಗ (10.2ನೇ ಓವರ್) 81 ರನ್ ಕಲೆ ಹಾಕಿತ್ತು. ಅಲ್ಲದೆ ಡು ಪ್ಲೆಸಿಸ್-ವ್ಯಾಟ್ಸ್ಮನ್ ಇಬ್ಬರೂ ಅರ್ಧಶತಕ (ಭರ್ತಿ 50 ರನ್) ಬಾರಿಸಿದ್ದು, ಚೆನ್ನೈ ಗೆಲುವನ್ನು ಸಾರಿತು.

ಕಾಮೆಂಟರಿ ಮಧ್ಯೆ ಡಾ. ರಾಜ್‌ ಹಾಡು ಹಾಡಿದ ವೆಂಕಟೇಶ್ ಪ್ರಸಾದ್-ವಿಡಿಯೋಕಾಮೆಂಟರಿ ಮಧ್ಯೆ ಡಾ. ರಾಜ್‌ ಹಾಡು ಹಾಡಿದ ವೆಂಕಟೇಶ್ ಪ್ರಸಾದ್-ವಿಡಿಯೋ

ಪಂದ್ಯದ ಬಳಿಕ ಮಾತನಾಡಿದ ಡು ಪ್ಲೆಸಿಸ್, ಮಾತು ಮುಂದುವರೆಸಿ, 'ಉತ್ತಮ ಜೊತೆಯಾಟ ನೀಡಿದರೆ ಅದರಿಂದ ತಂಡಕ್ಕಾಗುವ ಲಾಭದ ಬಗ್ಗೆ ನಮಗೆ ಅರಿವಿತ್ತು. 3-4 ಓವರ್‌ ವರೆಗೆ ರನ್ ಬಾರದಿದ್ದರೂ ನಮ್ಮ ತಂಡದ ಮಧ್ಯಮ ಮತ್ತು ಕೆಳ ಬ್ಯಾಟಿಂಗ್ ಕ್ರಮಾಂಕ ಚೆನ್ನಾಗಿದ್ದಿದರಿಂದ ನಮ್ಮ ವಿಶ್ವಾಸ ಕುಂದಲಿಲ್ಲ. ಇದು ನಮಗೆ ಗೆಲುವಿನ ಮೂಲಕ ನೆರವಾಯ್ತು' ಎಂದರು.

Story first published: Saturday, May 11, 2019, 17:21 [IST]
Other articles published on May 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X