ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೋಲಿನ ಮೇಲೆ ಸೋಲು; ನಿವೃತ್ತಿಯ ಮಾತು: ದ. ಆಫ್ರಿಕಾ ನಾಯಕನ ಮನದಾಳದ ಮಾತು!

Faf Du Plessis Opens Up On Retirement Rumours

ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಪ್ ಡು ಪ್ಲೆಸಿಸ್ ನಿವೃತ್ತಿಯ ಬಗ್ಗೆ ಕ್ರಿಕೆಟ್‌ ಲೋಕದಲ್ಲಿ ಭಾರೀ ಚರ್ಚೆ ನಡೆದಿದೆ. ದಕ್ಷಿಣ ಆಫ್ರಿಕಾ ತಂಡ ಮೇಲಿಂದ ಮೇಲೆ ಸೋಲನ್ನು ಕಾಣುತ್ತಿದ್ದು ಇದೇ ಕಾರಣಕ್ಕೆ ನಾಯಕ ನಿವೃತ್ತಿಯಾಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿತ್ತು. ಇದಕ್ಕೆ ಸ್ವತಃ ಫಾಪ್ ಡು ಪ್ಲೆಸಿಸ್ ಉತ್ತರವನ್ನು ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ನಾಯಕ ಫಾಪ್ ಡು ಪ್ಲೆಸಿಸ್ ಈ ಸುದ್ದಿಯನ್ನು ನೇರವಾಗಿ ತಳ್ಳಿಹಾಕಿದ್ದಾರೆ. ತನ್ನ ನಿವೃತ್ತಿಯ ಬಗ್ಗೆ ಗಾಳಿ ಸುದ್ದಿ ಹರಿದಾಡುತ್ತಿದೆ, ಅದು ಸುಳ್ಳು ಎಂಬ ಮಾತನ್ನು ಡು ಪ್ಲೆಸಿಸ್ ಹೇಳಿದ್ದಾರೆ. ಮುಂದಿನ ಟಿ20 ವಿಶ್ವಕಪ್‌ವರೆಗೆ ನನ್ನ ದಾರಿಯ ಬಗ್ಗೆ ಸ್ಪಷ್ಟತೆಯಿದೆ ಎನ್ನುವ ಮೂಲಕ ವರ್ಷಾಂತ್ಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ವರೆಗೆ ನಿವೃತ್ತಿಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಮೂರನೇ ಪಂದ್ಯವನ್ನು ಇನ್ನಿಂಗ್ಸ್‌ ಹಾಗೂ 53 ರನ್‌ಗಳಿಂದ ಸೋಲು ಕಂಡ ಬಳಿಕ ದಕ್ಷಿಣ ಆಫ್ರಿಕಾ ನಾಯಕ ಈ ಹೇಳಿಕೆಯನ್ನು ನೀಡಿದ್ದಾರೆ.

ಐಸಿಸಿ ಏಕದಿನ ಶ್ರೇಯಾಂಕ: ಅಗ್ರಸ್ಥಾನದಲ್ಲಿ ಮುಂದುವರಿದ ವಿರಾಟ್, ರೋಹಿತ್ಐಸಿಸಿ ಏಕದಿನ ಶ್ರೇಯಾಂಕ: ಅಗ್ರಸ್ಥಾನದಲ್ಲಿ ಮುಂದುವರಿದ ವಿರಾಟ್, ರೋಹಿತ್

ಈ ಸಂದರ್ಭದಲ್ಲಿ ಫಾಪ್ ಡು ಪ್ಲೆಸಿಸ್‌ಗೆ ಹಿಂದೆಂದೂ ಇಲ್ಲದಷ್ಟು ಒತ್ತಡದಲ್ಲಿದ್ದೀರಾ ಎಂಬ ಪ್ರಶ್ನೆ ಮಾಧ್ಯಮಗಳಿಂದ ಕೇಳ ಬಂತು. ಇದಕ್ಕೆ ಫಾಪ್ ಡು ಪ್ಲೆಸಿಸ್ 'ನಾನೇನು ರೋಬೋಟ್ ಅಲ್ಲ, ಇದು ಖಂಡಿತಾ ಕಠೀಣ ಪರಿಸ್ಥಿತಿ. ಹಾಗಂತಾ ಈ ಜವಾಬ್ದಾರಿಯಿಂದ ನಾನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ. ಈ ಜವಾಬ್ದಾರಿಯಿಂದ ಹಿಂದಕ್ಕೆ ಸರಿಯಲಾರೆ. ತಾನು ತಂಡದ ನಾಯಕ. ಈ ಜವಾಬ್ದಾರಿಯ ಜೊತೆಗೆ ಒತ್ತಡವೂ ಸೇರಿರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಡು ಪ್ಲೆಸಿಸ್ ಈ ವರ್ಷಾಂತ್ಯಕ್ಕೆ ನಿವೃತ್ತಿ ಹೇಳುವುದಾಗಿಯೂ ತಿಳಿಸಿದ್ದಾರೆ. ಆದರೆ ತನ್ನ ಬದ್ಧತೆ ಈ ಸರಣಿಯ ಮೇಲೆ ಇದೆ. ದಕ್ಷಿಣ ಆಫ್ರಿಕಾ ತಂಡದ ಪ್ರಬಲ ನಾಯಕನಾಗಲು ತಾನು ಬಯಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಕ್ರೀಡಾಪಟುವಾಗಿದ್ದು ಕೆಲಸಹುಡುಕುತ್ತಿದ್ದೀರಾ? ಕಳೆದುಕೊಳ್ಳದಿರಿ ಈ ಅವಕಾಶಕ್ರೀಡಾಪಟುವಾಗಿದ್ದು ಕೆಲಸಹುಡುಕುತ್ತಿದ್ದೀರಾ? ಕಳೆದುಕೊಳ್ಳದಿರಿ ಈ ಅವಕಾಶ

ಸರಣಿಯ ಮಧ್ಯದಲ್ಲಿ ನಿವೃತ್ತಿಯನ್ನು ಹೇಳಿ ಹೋಗುವುದು ಉತ್ತಮ ನಾಯಕನ ಲಕ್ಷಣವಲ್ಲ ಎಂದಿರುವ ಡು ಪ್ಲೆಸಿಸ್ ಕಂಕಷ್ಟದ ಸಮಯದಲ್ಲೂ ತಂಡದ ಜೊತೆ ನಿಲ್ಲಬೇಕು ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ತಕ್ಷಣವೇ ನಿವೃತ್ತಿಯಾಗಲಿದ್ದಾರೆ ಎಂಬ ಗಾಳಿ ಸುದ್ದಿಗೆ ಅಂತ್ಯ ಹೇಳಿರುವ ದಕ್ಷಿಣ ಆಫ್ರಿಕಾ ನಾಯಕ ವರ್ಷಾಂತ್ಯದಲ್ಲಿ ನಿವೃತ್ತಿಯಾಗುವುದನ್ನು ಖಚಿತಪಡಿಸಿದ್ದಾರೆ.

Story first published: Monday, January 20, 2020, 19:52 [IST]
Other articles published on Jan 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X