ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ: ಏಕದಿನ ಸರಣಿಯಿಂದ ಫಾಪ್ ಡು ಪ್ಲೆಸಿಸ್‌ಗೆ ವಿಶ್ರಾಂತಿ

Faf du Plessis rested for three-match ODI series against England

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ದಕ್ಷಿಣ ಆಫ್ರಿಕಾ 0-3 ಅಂತರದಿಂದ ಕಳೆದುಕೊಂಡು ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಆದರೆ ಏಕದಿನ ಪಂದ್ಯದ ಆರಂಭಕ್ಕೆ ಕೇವಲ ಒಂದು ದಿನ ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರಮುಖ ಆಟಗಾರನಿಗೆ ವಿಶ್ರಾಂತಿಯನ್ನು ನೀಡಲು ತೀರ್ಮಾನಿಸಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಗುರುವಾರ ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ತಂಡದಿಂದ ಬಿಡುಗಡೆಗೊಳಿಸುತ್ತಿರುವುದಾಗಿ ಖಚಿತಪಡಿಸಿದೆ. ಹೀಗಾಗಿ ಡಿಸೆಂಬರ್ 4ರಿಂದ ಆರಂಭವಾಗುವ ಏಕದಿನ ಸರಣಿಗೆ ಫಾಫ್ ಡು ಪ್ಲೆಸಿಸ್ ಅಲಭ್ಯರಾಗಲಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಮೊದಲ ಟಿ20: ಸಮಯ, ಸಂಭಾವ್ಯ ತಂಡ, ನೇರಪ್ರಸಾರಭಾರತ vs ಆಸ್ಟ್ರೇಲಿಯಾ ಮೊದಲ ಟಿ20: ಸಮಯ, ಸಂಭಾವ್ಯ ತಂಡ, ನೇರಪ್ರಸಾರ

ಫಾಪ್ ಡು ಪ್ಲೆಸಿಸ್ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದರು. ಮೂರು ಪಂದ್ಯಗಳಲ್ಲೂ ಕಣಕ್ಕಿಳಿದ ಡು ಪ್ಲೆಸಿಸ್ ಸರಣಿಯಲ್ಲಿ ಒಟ್ಟಾರೆ 121 ರನ್ ಗಳಿಸಿದ್ದರು. ಮೊದಲ ಪಂದ್ಯದಲ್ಲಿ ಗಳಿಸಿದ 58ರನ್ ಸರಣಿಯಲ್ಲಿ ಅವರ ಗರಿಷ್ಠ ಮೊತ್ತವಾಗಿದೆ.

ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಯುವ ಆಟಗಾರ ಕಗಿಸೋ ರಬಡಾ ಹೊರಬಿದ್ದಿದ್ದರು. ಗಾಯಗೊಂಡಿದ್ದ ಕಾರಣ ಕಗಿಸೋ ರಬಡಾ ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಗಿದೆ. ಈಗ ಮತ್ತೋರ್ವ ಅನುಭವಿ ಆಟಗಾರನೂ ದಕ್ಷಿಣ ಆಫ್ರಿಕಾ ತಂಡಕ್ಕೆ ಅಲಭ್ಯರಾಗುತ್ತಿದ್ದಾರೆ.

ಸುದೀರ್ಘ ಕಾಲಕ್ಕೆ ಆ ಇಬ್ಬರು ಆಟಗಾರರ ಟೀಮ್ ಇಂಡಿಯಾದ ದೊಡ್ಡ ಆಸ್ತಿಯಾಗಬಲ್ಲರು: ಗಂಗೂಲಿಸುದೀರ್ಘ ಕಾಲಕ್ಕೆ ಆ ಇಬ್ಬರು ಆಟಗಾರರ ಟೀಮ್ ಇಂಡಿಯಾದ ದೊಡ್ಡ ಆಸ್ತಿಯಾಗಬಲ್ಲರು: ಗಂಗೂಲಿ

ಕಗಿಸೋ ರಬಡಾ ಅವರ ಗಾಯದಿಂದ ಗುಣಮುಖರಾಗಲು ಮೂರು ವಾರಗಳ ಕಾಲಾವಕಾಶ ಬೇಕು ಎಂಬುದನ್ನು ಕ್ರಿಕೆಟ್ ಸೌತ್ ಆಫ್ರಿಕಾ ಸ್ಪಷ್ಟಪಡಿಸಿತ್ತು. ರಬಡಾ ಅವರು ಕೂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಮೂರು ಪಂದ್ಯಗಳಲ್ಲಿ ರಬಡಾ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು.

Story first published: Thursday, December 3, 2020, 17:19 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X