ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಫಾಪ್ ಡು ಪ್ಲೆಸಿಸ್

Faf du Plessis retires from Test cricket, says My heart is clear and time is right in retirement post

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಅನುಭವಿ ಆಟಗಾರ ಫಾಪ್ ಡು ಪ್ಲೆಸಿಸ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಹಾಕಿರುವ ಪೋಸ್ಟ್‌ ಮೂಲಕ ಫಾಪ್ ಡು ಪ್ಲೆಸಿಸ್ ತಮ್ಮ ಟೆಸ್ಟ್ ವೃತ್ತಿ ಬದುಕಿಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.

36ರ ಹರೆಯದ ಫಾಪ್ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ತಂಡದ ಪರವಾಗಿ 69 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಫಾಪ್ ಡು ಪ್ಲೆಸಿಸ್ ಈವರೆಗೆ 4000 ರನ್ ಬಾರಿಸಿದ್ದಾರೆ. ಇದೀಗ ಕೇವಲ ಸೀಮಿತ ಓವರ್‌ಗಳ ಕ್ರಿಕೆಟ್‌ನತ್ತ ಗಮನ ಹರಿಸುವ ನಿರ್ಧಾರ ಮಾಡಿದ್ದಾರೆ.

ಆತ ಭವಿಷ್ಯದ ಆಂಡ್ರೆ ರಸ್ಸೆಲ್ ಎಂದು ಕೀವಿಸ್ ಆಟಗಾರನನ್ನು ಹೊಗಳಿದ ಗಂಭೀರ್ಆತ ಭವಿಷ್ಯದ ಆಂಡ್ರೆ ರಸ್ಸೆಲ್ ಎಂದು ಕೀವಿಸ್ ಆಟಗಾರನನ್ನು ಹೊಗಳಿದ ಗಂಭೀರ್

"ನನ್ನ ಹೃದಯ ಸ್ಪಷ್ಟವಾಗಿದೆ. ಹೊಸ ಅಧ್ಯಾಯದತ್ತ ಹೆಜ್ಜೆಯಿಡಲು ಇದು ಸೂಕ್ತವಾದ ಸಂದರ್ಭ" ಎಂದು ಫಾಪ್ ಡು ಪ್ಲೆಸಿಸ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು ಸುದೀರ್ಘ ಪತ್ರವನ್ನು ಕೂಡ ಹಂಚಿಕೊಂಡಿದ್ದಾರೆ.

ಈ ಪತ್ರದಲ್ಲಿ ಫಾಪ್ ಡು ಪ್ಲೆಸಿಸ್ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಕಾ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ. ಆದರೆ ಈಗ ಟೆಸ್‌ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಸಂದರ್ಭ ಬಂದಿದೆ ಎಂದು ಹೇಳಿಕೊಂಡಿದ್ದಾರೆ ಫಾಪ್ ಡು ಪ್ಲೆಸಿಸ್.

ಐಪಿಎಲ್‌ಗೆ ಪ್ರೇಕ್ಷಕರ ಪ್ರವೇಶದ ನಿರ್ಧಾರ ಶೀಘ್ರ ಪ್ರಕಟ: ಗಂಗೂಲಿಐಪಿಎಲ್‌ಗೆ ಪ್ರೇಕ್ಷಕರ ಪ್ರವೇಶದ ನಿರ್ಧಾರ ಶೀಘ್ರ ಪ್ರಕಟ: ಗಂಗೂಲಿ

ಇನ್ನು ಇದೇ ಸಂದರ್ಭದಲ್ಲಿ "ಮುಂದಿನ ಎರಡು ವರ್ಷಗಳಲ್ಲಿ ಐಸಿಸಿ ಟಿ20 ವಿಶ್ವಕಪ್‌ಗಳು ನಡೆಯುವ ಕಾರಣ ಆ ಮಾದರಿಯತ್ತ ಸಂಪೂರ್ನ ಚಿತ್ತ ನೆಡಲು ಬಯಸುತ್ತಿದ್ದೇನೆ. ಹೆಚ್ಚು ಹೆಚ್ಚು ಪಂದ್ಯಗಳಲ್ಲಿ ವಿಶ್ವಾದ್ಯಂತ ಆಡುವ ಮೂಲಕ ನಾನು ಅತ್ಯುತ್ತಮ ಆಟಗಾರನಾಗುವತ್ತ ಪ್ರಯತ್ನವನ್ನು ನಡೆಸಬಹುದು" ಎಂದು ಫಾಪ್ ಡು ಪ್ಲೆಸಿಸ್ ಹೇಳಿದ್ದಾರೆ. ಫಾಪ್ ಡು ಪ್ಲೆಸಿಸ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Story first published: Wednesday, February 17, 2021, 15:10 [IST]
Other articles published on Feb 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X