ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಾ ಮಾದರಿಯ ಕ್ರಿಕೆಟ್‌ ನಾಯಕತ್ವದಿಂದ ಕೆಳಗಿಳಿದ ಫಾ ಡು ಪ್ಲೆಸಿಸ್

Duplesis steps down from Captaincy from all format | Faf-du-plesis | Quinton-de-cock | Cricket
Faf du Plessis steps down as South Africa captain in all formats

ಕೇಪ್‌ಟೌನ್, ಫೆಬ್ರವರಿ 17: ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಫಾ ಡು ಪ್ಲೆಸಿಸ್, ಟೆಸ್ಟ್‌ ಮತ್ತು ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅಂದರೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಡು ಪ್ಲೆಸಿಸ್ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ. ಕ್ರಿಕೆಟ್ ಸೌತ್‌ ಆಫ್ರಿಕಾ (ಸಿಎಸ್‌ಎ) ಈ ವಿಚಾರವನ್ನು ಸೋಮವಾರ (ಫೆಬ್ರವರಿ 17) ಘೋಷಿಸಿದೆ.

ಆರ್‌ಸಿಬಿ ತಂಡದ ಪಂದ್ಯಗಳು ಎಲ್ಲೆಲ್ಲಿ ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆಆರ್‌ಸಿಬಿ ತಂಡದ ಪಂದ್ಯಗಳು ಎಲ್ಲೆಲ್ಲಿ ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆ

ಡು ಪ್ಲೆಸಿಸ್ ನಾಯಕತ್ವದದಿಂದ ಕೆಳಗಿಳಿಯುತ್ತಿರುವ ವಿಚಾರವನ್ನು ಟ್ವಿಟರ್ ಮೂಲಕ ತಿಳಿಸಿರುವ ಸಿಎಸ್‌ಎ, 'ಈ ಕ್ಷಣದಿಂದಲೇ ಫಾ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ಆಫ್ರಿಕಾ ಟೆಸ್ಟ್ ಮತ್ತು ಟಿ20 ನಾಯಕತ್ವದಿಂದ ಕೆಳಗಿಳಿದಿರುವುದನ್ನು ಘೋಷಿಸಿದ್ದಾರೆ,' ಎಂದು ಬರೆದುಕೊಂಡಿದೆ.

ಇಂಗ್ಲೆಂಡ್ vs ದ.ಆಫ್ರಿಕಾ ಟಿ20 : ಮತ್ತೊಂದು ರೋಚಕ ಕಾದಾಟದಲ್ಲಿ ಗೆದ್ದು ಸರಣಿ ಜಯಗಳಿಸಿದ ಇಂಗ್ಲೆಂಡ್ಇಂಗ್ಲೆಂಡ್ vs ದ.ಆಫ್ರಿಕಾ ಟಿ20 : ಮತ್ತೊಂದು ರೋಚಕ ಕಾದಾಟದಲ್ಲಿ ಗೆದ್ದು ಸರಣಿ ಜಯಗಳಿಸಿದ ಇಂಗ್ಲೆಂಡ್

'ಕ್ವಿಂಟನ್ ಡಿ ಕಾಕ್ ಅವರ ಹೊಸ ಉಸ್ತುವಾರಿ ಅಡಿಯಲ್ಲಿ ತಂಡದಲ್ಲಿ ಮುಂದಿನ ಪೀಳಿಗೆಯ ನಾಯಕರು ಹೊರಹೊಮ್ಮಲು ಅನುಕೂಲವಾಗುವಂತೆ ತಾನು ನಾಯಕತ್ವದಿಂದ ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳುವ ಅಗತ್ಯತೆಯಿದೆ ಎಂದು 35ರ ಹರೆಯದ ಡು ಪ್ಲೆಸಿಸ್ ಹೇಳಿದ್ದಾರೆ,' ಎಂದು ಸಿಎಸ್‌ಎ ಟ್ವೀಟ್‌ನಲ್ಲಿ ಹೇಳಿದೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1ರಿಂದ ಡ್ರಾಗೊಳಿಸಿತ್ತು (ಒಂದು ಪಂದ್ಯ ರದ್ದಾಗಿತ್ತು). ಇದೇ ಪ್ರವಾಸ ಸರಣಿಯ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-2ರ ಹಿನ್ನಡೆ ಅನುಭವಿಸಿತ್ತು. ಈ ಎರಡೂ ಸರಣಿಗಳಲ್ಲೂ ಡು ಪ್ಲೆಸಿಸ್ ಪಾಲ್ಗೊಂಡಿರಲಿಲ್ಲ. ಪ್ಲೆಸಿಸ್ ಬದಲಿಗೆ ಆಫ್ರಿಕಾ ತಂಡದ ನಾಯಕತ್ವವನ್ನು ಕ್ವಿಂಟನ್ ಡಿ ಕಾಕ್ ವಹಿಸಿಕೊಂಡಿದ್ದರು.

Story first published: Monday, February 17, 2020, 16:23 [IST]
Other articles published on Feb 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X