ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ಗೆ ಮುನ್ನ, ಬಳಿಕ ಐಸೊಲೇಶನ್‌ನಲ್ಲಿರಿ: ಫಾ ಡು ಪ್ಲೆಸಿಸ್ ಸಲಹೆ

Faf suggests isolation for players before & after T20 WC

ಕೇಪ್‌ಟೌನ್, ಮೇ 14: ಟಿ20 ವಿಶ್ವಕಪ್‌ಗೂ ಮುನ್ನ ಮತ್ತು ಬಳಿಕ ಆಟಗಾರರು ಐಸೊಲೇಶನ್ ಪಾಲಿಸುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟರ್ ಫಾ ಡು ಪ್ಲೆಸಿಸ್ ಸಲಹೆ ನೀಡಿದ್ದಾರೆ. ವಿಶ್ವಕಪ್‌ ವೇಳೆ ಅಪಾಯ ತಪ್ಪಿಸುವುದಕ್ಕಾಗಿ ಡು ಪ್ಲೆಸಿಸ್ ಈ ಸಲಹೆ ನೀಡಿದ್ದಾರೆ.

ಪಾಕಿಸ್ತಾನ ಏಕದಿನ ತಂಡದ ನಾಯಕನಾಗಿ ಬಾಬರ್ ಅಝಾಮ್ ನೇಮಕಪಾಕಿಸ್ತಾನ ಏಕದಿನ ತಂಡದ ನಾಯಕನಾಗಿ ಬಾಬರ್ ಅಝಾಮ್ ನೇಮಕ

ಕೊರೊನಾವೈರಸ್ ಭೀತಿಗೆ ವಿಶ್ವದಾದ್ಯಂತ ಎಲ್ಲಾ ಕ್ರಿಕೆಟ್ ಪಂದ್ಯಾಟಗಳು ರದ್ದು ಇಲ್ಲವೆ ಮುಂದೂಡಲ್ಪಟ್ಟಿವೆ. ಮಾರಕ ಸೋಂಕಿನಿಂದಾಗಿ ಜನಪ್ರಿಯ ಆಟ ಕ್ರಿಕೆಟ್‌ಗೆ ಕತ್ತಲೆಯ ಕಾರ್ಮೋಡ ಕವಿದಂತಾಗಿದೆ. ಸದ್ಯದ ವೇಳಾ ಪಟ್ಟಿಯ ಪ್ರಕಾರ ಅಕ್ಟೋಬರ್ ನವೆಂಬರ್‌ ಹೊತ್ತಿಗೆ ವಿಶ್ವಕಪ್‌ ಟೂರ್ನಿ ಆರಂಭಗೊಳ್ಳಲಿದೆ.

ರೋಹಿತ್ ಶರ್ಮಾ ಸ್ಪೆಶಾಲಿಟಿ ಹೇಳಿದ ಯುವ ಬ್ಯಾಟ್ಸ್‌ಮನ್ ಪ್ರಿಯಂ ಗರ್ಗ್ರೋಹಿತ್ ಶರ್ಮಾ ಸ್ಪೆಶಾಲಿಟಿ ಹೇಳಿದ ಯುವ ಬ್ಯಾಟ್ಸ್‌ಮನ್ ಪ್ರಿಯಂ ಗರ್ಗ್

ವಿಶ್ವಕಪ್ ಟೂರ್ನಿಯ ಸಲುವಾಗಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳುವ ಆಟಗಾರರು ಎರಡು ವಾರಗಳ ಕಾಲ ಪ್ರತ್ಯೇಕತೆ (ಐಸೊಲೇಶನ್) ಪಾಲಿಸಿ, ಟೂರ್ನಿ ಮುಗಿದ ಬಳಿಕವೂ ಐಸೊಲೇಶನ್ ಪಾಲಿಸುವಂತೆ ಫಾ ಡು ಪ್ಲೆಸಿಸ್ ಹೇಳಿದ್ದಾರೆ.

ವಿರಾಟ್ ಮತ್ತು ತೆಂಡೂಲ್ಕರ್ ನಡುವಿನ ವ್ಯತ್ಯಾಸ ಹೇಳಿದ ವಾಸಿಮ್ ಅಕ್ರಮ್ವಿರಾಟ್ ಮತ್ತು ತೆಂಡೂಲ್ಕರ್ ನಡುವಿನ ವ್ಯತ್ಯಾಸ ಹೇಳಿದ ವಾಸಿಮ್ ಅಕ್ರಮ್

'ನನಗೆ ಖಾತರಿಯಿಲ್ಲ. ಆದರೆ ಈಗಿನ ಪರಿಸ್ಥಿಯಂತೆ ವಿದೇಶಕ್ಕೆ ಪ್ರವಾಸ ಕೈಗೊಳ್ಳುವುದು ಅನೇಕ ರಾಷ್ಟ್ರಗಳಿಗೆ ಸಮಸ್ಯೆ ತರಲಿದೆ. ಹೀಗಾಗಿ ಡಿಸೆಂಬರ್-ಜನವರಿ ವೇಳೆಗೆ ಪರಿಸ್ಥಿತಿ ಕೊಂಚ ತಿಳಿಯಾಗುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಏನೇ ಇರಲಿ, ಆಸ್ಟ್ರೇಲಿಯಾಕ್ಕೆ ತಲುಪಿದ 2 ವಾರಕ್ಕೆ ಮೊದಲು ಮತ್ತು ಟೂರ್ನಿಯ ಬಳಿಕ ಆಟಗಾರರು ಐಸೊಲೇಶನ್ ಪಾಲಿಸಬೇಕು,' ಎಂದು ಬಾಂಗ್ಲಾ ಕ್ರಿಕೆಟಿಗ ತಮೀಮ್ ಇಕ್ಬಾಲ್ ಜೊತೆ ಫೇಸ್ಬುಕ್ ಲೈವ್‌ನಲ್ಲಿ ಮಾತನಾಡುತ್ತ ಡು ಪ್ಲೆಸಿಸ್ ಹೇಳಿದ್ದಾರೆ.

Story first published: Thursday, May 14, 2020, 17:31 [IST]
Other articles published on May 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X