ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೈಫಲ್ಯಗಳು ಚಾಂಪಿಯನ್ ಆಟಗಾರನನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ: ರಾಹುಲ್ ಆಟಕ್ಕೆ ಧವನ್ ಪ್ರಶಂಸೆ

Failures make champion players stronger: Shikhar Dhawan hails KL Rahuls 43-ball 62 not out vs England

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ ಕೆಎಲ್ ರಾಹುಲ್ ಏಕದಿನ ಸರಣಿಯಲ್ಲಿ ಫಾರ್ಮ್‌ಗೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಭರ್ಜರಿ ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.

ಈ ಅದ್ಭುತ ಪ್ರದರ್ಶನದ ಬಗ್ಗೆ ಮೊದಲ ಪಂದ್ಯದಲ್ಲಿ ಶತಕದಂಚಿನಲ್ಲಿ ಎಡವಿದರೂ ತಂಡದ ಬೃಹತ್ ಮೊತ್ತಕ್ಕೆ ಬುನಾದಿ ಹಾಕಿದ ಶಿಖರ್ ಧವನ್ ಪ್ರತಿಕ್ರಿಯಿಸಿದರು. 98 ರನ್‌ಗಳಿಸಿ ಔಟಾದ ಶಿಖರ್ ಧವನ್ ತಮ್ಮ ಅದ್ಭುತ ಪ್ರದರ್ಶನದ ಕಾರಣಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಬಳಿಕ ಕೆಎಲ್ ರಾಹುಲ್ ಫಾರ್ಮ್‌ಗೆ ಮರಳಿದ ವಿಚಾರವಾಗಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಭಾರತ ವಿರುದ್ಧದ ದ್ವಿತೀಯ ಏಕದಿನಕ್ಕೆ ಮಾರ್ಗನ್, ಬಿಲ್ಲಿಂಗ್ಸ್‌ ಅನುಮಾನಭಾರತ ವಿರುದ್ಧದ ದ್ವಿತೀಯ ಏಕದಿನಕ್ಕೆ ಮಾರ್ಗನ್, ಬಿಲ್ಲಿಂಗ್ಸ್‌ ಅನುಮಾನ

"ಕೆಎಲ್ ರಾಹುಲ್ ಅರ್ಧ ಶತಕವನ್ನು ಸಿಡಿಸಿರುವುದು ನೋಡಲು ಸಂತಸವಾಗುತ್ತದೆ. ಆತನೋರ್ವ ಶಾಸ್ತ್ರೀಯ ಆಟಗಾರ. ಆತ ಆಡುವುದನ್ನು ನೋಡುಲು ನಾವೆಲ್ಲರೂ ಇಷ್ಟ ಪಡುತ್ತೇವೆ. ವೈಫಲ್ಯಗಳು ಚಾಂಪಿಯನ್ ಆಟಗಾರನನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ. ಈಗ ಖಂಡಿತಾ ಆತ ಮತ್ತಷ್ಟು ಬಲಿಷ್ಠನಾಗಿದ್ದಾರೆ" ಎಂದು ಕೆಎಲ್ ರಾಹುಲ್ ಫಾರ್ಮ್ ಬಗ್ಗೆ ಶಿಖರ್ ಧವನ್ ಮಾತನಾಡಿದ್ದಾರೆ.

"ಆತ ಇಂದು ಹಾದಿಗೆ ಮರಳಿದ ರೀತಿ ಹಾಗೂ ತಂಡದ ಮೊತ್ತ 300 ರನ್ ದಾಟಲು ಕಾರಣನಾದ ರೀತಿ ನೋಡಲು ನಿಜಕ್ಕೂ ಶ್ರೇಷ್ಠವಾಗಿತ್ತು. ಈ ಆಟ ಆತನಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದು ನಾನು ಬಾವಿಸುತ್ತೇನೆ. ಹೀಗಾಗಿ ಮುಂದೆ ಮತ್ತಷ್ಟು ಸುಲಲಿತವಾಗಿ ಆತ ಬ್ಯಾಟ್ ಬೀಸಲಿದ್ದಾನೆ" ಎಂದು ಧವನ್ ಕೆಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆ ಮಾತನಾಡಿದರು.

ಕೃನಾಲ್-ಕರನ್ ಮಧ್ಯೆ ಮಾತಿನ ಚಕಮಕಿ, ಗಡ್ಡ ಎಳೆದ ಕೊಹ್ಲಿ: ವಿಡಿಯೋಕೃನಾಲ್-ಕರನ್ ಮಧ್ಯೆ ಮಾತಿನ ಚಕಮಕಿ, ಗಡ್ಡ ಎಳೆದ ಕೊಹ್ಲಿ: ವಿಡಿಯೋ

ಗಮನಾರ್ಹ ಸಂಗತಿಯೆಂದರೆ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇಬ್ಬರೂ ಆಟಗಾರರು ಅಂದು ವಿಫಲರಾಗಿದ್ದರು. ಧವನ್ ಆ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿ ಔಟಾಗಿದ್ದರು. ಬಳಿಕ ಟಿ20 ಸರಣಿಯಲ್ಲಿ ಧವನ್ ಯಾವುದೇ ಅವಕಾಶವನ್ನು ಪಡೆಯಲು ಸಾಧ್ಯವಾಗಿರಲಿಲ್ಲ.

Story first published: Wednesday, March 24, 2021, 15:18 [IST]
Other articles published on Mar 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X