ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತ್ವರಿತಗತಿ 1000ರನ್ : ವಿವ್ ರಿಚರ್ಡ್ಸ್ ದಾಖಲೆ ಮುರಿದ ಜಮಾನ್

By Mahesh
Fakhar Zaman

ಬುಲವಾಯೋ, ಜುಲೈ 22: ಪಾಕಿಸ್ತಾನದ ಪರ ಒಡಿಐಯಲ್ಲಿ ಮೊದಲ ದ್ವಿಶತಕ ಬಾರಿಸಿದ ದಾಖಲೆ ಬರೆದ ಬೆನ್ನಲ್ಲೇ ಆರಂಭಿಕ ಆಟಗಾರ ಫಖರ್ ಜಮಾನ್ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತ್ವರಿತಗತಿಯಲ್ಲಿ 1000ರನ್ ಗಳಿಸಿದ್ದಾರೆ.

ಪಾಕಿಸ್ತಾನ ಹಾಗೂ ಜಿಂಬಾಬ್ವೆ ಪಂದ್ಯದ ಲೈವ್ ಸ್ಕೋರ್ ಕಾರ್ಡ್

ಜಿಂಬಾಬ್ವೆ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿಂದು ಈ ಸಾಧನೆ ಮಾಡಲು ಜಮಾನ್ ಗೆ ಕೇವಲ 20ರನ್ ಅಗತ್ಯವಿತ್ತು. 83 ಎಸೆತಗಳಲ್ಲಿ 85ರನ್ (10 ಬೌಂಡರಿ, 1ಸಿಕ್ಸರ್) ಸಿಡಿಸಿದ ಜಮಾನ್ ಅವರು 18ಇನ್ನಿಂಗ್ಸ್ ಗಳಲ್ಲಿ 1,000ರನ್ ಗಡಿ ದಾಟಿದರು.

1
43585

ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ ನ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ವಿವಿಯನ್ ರಿಚರ್ಡ್ಸ್ ಹೆಸರಿನಲ್ಲಿತ್ತು. 1980ರಲ್ಲಿ 21 ಇನ್ನಿಂಗ್ಸ್ ಗಳಲ್ಲಿ 1,000ರನ್ ಗಡಿ ದಾಟಿದ್ದರು.

ಒಡಿಐಯಲ್ಲಿ ದ್ವಿಶತಕ ಬಾರಿಸಿದ ಮೊದಲ ಪಾಕಿಸ್ತಾನಿ ಫಖರ್

ನಂತರ ಕೆವಿನ್ ಪೀಟರ್ಸನ್, ಜೋನಾಥನ್ ಟ್ರಾಟ್, ಕ್ವಿಂಟಾನ್ ಡಿಕಾಕ್, ಬಾಬರ್ ಅಜಮ್ ಅವರು ಈ ದಾಖಲೆ ಸಮಕ್ಕೆ ನಿಂತಿದ್ದರು. ಭಾರತದ ಪರ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ 24 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಜಮಾನ್ ಅವರು ಇತ್ತೀಚೆಗೆ ಪಾಕಿಸ್ತಾನದ ಪರವಾಗಿ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ದಾಖಲಿಸಿದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 156 ಎಸೆತಗಳನ್ನು ಎದುರಿಸಿದ ಫಖರ್ ಜಮಾನ್​ 5 ಸಿಕ್ಸರ್​ ಹಾಗೂ 24 ಬೌಂಡರಿಗಳ ಮೂಲಕ 210 ರನ್​ ಬಾರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Sunday, July 22, 2018, 15:43 [IST]
Other articles published on Jul 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X