ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಪಾಲ್ಗೊಂಡಿದ್ದ ಪ್ರೇಕ್ಷಕನಿಗೆ ಕೊರೊನಾ ಪಾಸಿಟಿವ್

Fan who attended Boxing Day Test at MCG, tested positive for Covid-19

ಮೆಲ್ಬರ್ನ್‌ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಂಡಿದ್ದ ಅಭಿಮಾನಿಗಳು ಆತಂಕಪಡುವ ಸುದ್ಧಿಯೊಂದು ಹೊರಬಿದ್ದಿದೆ. ಭಾರತ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಪ್ರೇಕ್ಷಕರ ಪೈಕಿ ಓರ್ವನಿಗೆ ಕೊರೊನಾ ವೈರಸ್ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಪಾಸಿಟಿವ್ ಬಂದ ವ್ಯಕ್ತಿ ಮೆಲ್ಬರ್ನ್ ಟೆಸ್ಟ್‌ನ ಎರಡನೇ ದಿನ ಕೊರೊನಾ ವೈರಸ್ ಧೃಡಪಟ್ಟ ವ್ಯಕ್ತಿ ಪಂದ್ಯವನ್ನು ವೀಕ್ಷಿಸಲು ಮೆಲ್ಬರ್ನ್‌ಗೆ ಬಂದಿದ್ದ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಆದರೆ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ಆ ವ್ಯಕ್ತಿ ಕೊರೊನಾ ವೈರಸ್‌ಗೆ ತುತ್ತಾಗಿರಲಿಲ್ಲ ಎಂದು ಮೆಲ್ಬರ್ನ್ ಕ್ರಿಕೆಟ್ ಕ್ಲಬ್ ಹೇಳಿಕೆ ನೀಡಿದೆ.

ಭಾರತದ ದೊಡ್ಡ ಶಕ್ತಿ ಏನೆಂದು ತಿಳಿಸಿದ ಆಸೀಸ್ ಕೋಚ್ ಲ್ಯಾಂಗರ್!ಭಾರತದ ದೊಡ್ಡ ಶಕ್ತಿ ಏನೆಂದು ತಿಳಿಸಿದ ಆಸೀಸ್ ಕೋಚ್ ಲ್ಯಾಂಗರ್!

"ಕೊರೊನಾ ವೈರಸ್‌ಗೆ ತುತ್ತಾಗಿದ್ದ ವ್ಯಕ್ತಿ ಬಾಕ್ಸಿಂಗ್ ಡೇ ಟೆಸ್ಟ್ ನಡೆದ ಸಂದರ್ಭದಲ್ಲಿ ಕೊರೊನಾ ವೈರಸ್‌ಗೆ ತುತ್ತಾಗಿರಲಿಲ್ಲ. ಆದರೆ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನ ಗ್ರೇಟ್ ಸೌತರ್ನ್ ಸ್ಟ್ಯಾಂಡ್‌ನ ಐದನೇ ವಲಯದಲ್ಲಿ, ಡಿಸೆಂಬರ್ 27 ಭಾನುವಾರ 12:30 PM ನಿಂದ 3:30ರ ಅವಧಿಯಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಎಲ್ಲರೂ ಕೊರೊನಾ ಪರೀಕ್ಷೆಗೆ ಒಳಪಡಬೇಕು ಹಾಗೂ ನೆಗೆಟಿವ್ ವರದಿ ಬರುವವರೆಗೆ ಐಸೋಲೇಶನ್‌ನಲ್ಲಿರಬೇಕು" ಎಂದು ಎಂಸಿಜಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಗಿರುವ ಈ ಘಟನೆಯಿಂದ ಕ್ರಿಕೆಟ್ ಆಸ್ಟ್ರೇಲಿಯಾ ಎಚ್ಚೆತ್ತುಕೊಂಡಿದೆ. ಹೀಗಾಗಿ ಸಿಡ್ನಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಪ್ರೇಕ್ಷಕರಿಗೂ ನ್ಯೂಸೌಥ್ ವೇಲ್ಸ್ ಸರ್ಕಾರ ಮಾರ್ಸ್ ಧರಿಸುವುದನ್ನು ಕಡ್ಡಾಯ ಮಾಡಿದೆ

Story first published: Wednesday, January 6, 2021, 13:09 [IST]
Other articles published on Jan 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X