ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದು ಟ್ವೀಟ್ ಮೂಲಕ ವಿಲನ್ ಆದ ಯುವರಾಜ್, ಹರ್ಭಜನ್ ಸಿಂಗ್

Fans Blast Yuvraj Singh After He Appeals To Donate To Shahid Afridi’s Foundation

ಕೊರೊನಾ ವೈರಸ್ ವಿರುದ್ಧ ವಿಶ್ವವೇ ಒಂದಾಗಿ ಹೋರಾಡಬೇಕಾದ ಪರಿಸ್ಥಿತಿಯಿದೆ. ಇಂತಾ ಸಂದರ್ಭದಲ್ಲಿ ಭಾರತ ಸೇರಿದಂತೆ ಅನೇಕ ಪ್ರೀಡಾಪಟುಗಳು ತಮ್ಮದೇ ರೀತಿಯಲ್ಲಿ ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡ ತಮ್ಮ ಫೌಂಡೇಶನ್ ಮೂಲಕ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವವರ ನೆರವಿಗೆ ಧಾವಿಸಿದ್ದಾರೆ.

ಪಾಕಿಸ್ತಾನದ ಕ್ರಿಕೆಟಿಗನ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಟೀಮ್ ಇಂಡಿಯಾದ ಆಟಗಾರರು ಕೂಡ ಶಾಹಿದ್ ಅಫ್ರಿದಿ ಮಾಡಿದ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಟ್ವಿಟ್ಟರ್‌ನಲ್ಲಿ ಅಫ್ರಿದಿಗೆ ಶಬ್ಬಾಷ್‌ಗಿರಿ ನೀಡಿದರು.

ಆದರೆ ಟೀಮ್ ಇಂಡಿಯಾದ ಆಟಗಾರರರು ಪಾಕ್ ಕ್ರಿಕೆಟಿಗನಿಗೆ ಬೆಂಬಲಿಸಿದ ಕಾರಣಕ್ಕೆ ಒಂದು ಕಡೆ ಬೆಂಬಲವನ್ನು ಗಳಿಸಿದರೆ ಮತ್ತೊಂದೆಡೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ.

ಶಾಹಿದ್ ಅಫ್ರಿದಿಗೆ ಯುವಿ ಭಜ್ಜಿ ಬೆಂಬಲ

ಶಾಹಿದ್ ಅಫ್ರಿದಿಗೆ ಯುವಿ ಭಜ್ಜಿ ಬೆಂಬಲ

ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಶಾಹಿದ್ ಅಫ್ರಿದಿ ಮಾಡುತ್ತಿರುವ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಬೆಂಬಲವನ್ನು ವ್ಯಕ್ತಪಡಿಸಿ ನಿನ್ನೆ ವಿಡಿಯೋ ಸಂದೇಶವನ್ನು ತಮ್ಮ ತಮ್ಮ ಟ್ವಿಟ್ಟರ್ ಖಾತೆಗಳ ಹಂಚಿಕೊಂಡಿದ್ದರು.

ಪರೀಕ್ಷೆಯ ಸಂದರ್ಭ ಎಂದ ಯುವಿ

ಕೊರೊನಾ ವೈರಸ್ ವಿಶ್ವಾದ್ಯಂತ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇದೊಂದು ಪರೀಕ್ಷೆಯ ಸಂದರ್ಭ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಸಂಕಷ್ಟದಲ್ಲಿರುವವರ ನೆರವಿಗೆ ಇಂತಾ ಸಂದರ್ಭದಲ್ಲಿ ಭಾಗಿಯಾಗೋಣ. ಈ ಕಾರ್ಯದಲ್ಲಿ ನಿರತರಾಗಿರುವ ಅಫ್ರಿದಿ ಮತ್ತು ಅವರ ಫೌಂಡೇಶನ್‌ಗೆ ತಾನು ಬೆಂಬಲಿಸುತ್ತೇನೆ ಎಂದು ಹೇಳಿ ಅಫ್ರಿದಿ ಫೌಂಡೇಶನ್‌ಗೆ ಆರ್ಥಿಕ ಸಹಾಯ ಮಾಡಲು ಕೋರಿದ್ದರು.

ಇದೇ ಸಂದೇಶ ನೀಡಿದ್ದ ಭಜ್ಜಿ

ಇದಕ್ಕೂ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ ಕೂಡ ಇದೇ ಸಂದೇಶವನ್ನು ಹಾಕಿ ಟ್ವಿಟ್ಟರ್‌ನಲ್ಲಿ ವಿಡಿಯೋ ಹಾಕಿಕೊಂಡಿದ್ದರು. ಹರ್ಭಜನ್ ಸಿಂಗ್ ಕೂಡ ಶಾಹಿದ್ ಅಫ್ರಿದಿ ಫೌಂಡೇಶನ್‌ಗೆ ಆರ್ಥಿಕ ನೆರವನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ವಿಡಿಯೋದಲ್ಲಿ ಭಜ್ಜಿ ಟೀಮ್ ಇಂಡಿಯಾದ ಯುವರಾಜ್ ಸಿಂಗ್ ಸೇರಿದಂತೆ ವಾಸಿಮ್ ಅಕ್ರಮ್ ಮತ್ತು ಶೋಯೆಬ್ ಅಖ್ತರ್‌ಗೆ ಚಾಲೆಂಜ್ ಮಾಡಿದ್ದರು.

ಯುವಿ, ಭಜ್ಜಿ ನಿಲುವಿಗೆ ಅಭಿಮಾನಿಗಳ ಆಕ್ರೋಶ

ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್‌ಗಳಾದ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ತೆಗೆದುಕೊಂಡ ನಿಲುವಿಗೆ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಭಾರತೀಯರಾಗಿ ಪ್ರಧಾನಿಗಳ ಸಹಾಯನಿಧಿಗೆ ನೆರವಾಗುವಂತೆ ಕೋರುವ ಬದಲು ಪಾಕಿಸ್ತಾನಕ್ಕೆ ನೆರವಾಗಲು ಕೇಳಿಕೊಳ್ಳುತ್ತಿದ್ದೀರಾ ಎಂದು ಸಾಕಷ್ಟು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಧನ್ಯವಾದ ಸಲ್ಲಿಸಿದ ಶಾಹಿದ್ ಅಫ್ರಿದಿ

ತನ್ನ ಫೌಂಡೇಶನ್ ಮೂಲಕ ನಡೆಸುತ್ತಿರುವ ಕಾರ್ಯಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರರು ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಶಾಹಿದ್ ಅಫ್ರಿದಿ ಪ್ರತಿಕ್ರಿಯಿಸಿದ್ದರೆ. ಯುವರಾಜ್ ಸಿಂಗ್ ಮತ್ತು ಹರ್ಭಜನ್ ಕಡೆಯಿಂದ ಸಿಕ್ಕ ಬೆಂಬಲ ಪ್ರಮುಖವಾದದ್ದು ಎಂದಿದ್ದಾರೆ. ಮಾನವೀಯತೆಯ ದೃಷ್ಟಿಯಿಂದ ದೇಶ ಗಡಿಯನ್ನು ಮೀರಿದ ಈ ಬೆಂಬಲ ಪ್ರೀತಿ ಮತ್ತು ಶಾಂತಿಯನ್ನು ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.

Story first published: Wednesday, April 1, 2020, 15:47 [IST]
Other articles published on Apr 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X