ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುರಳಿ ವಿಜಯ್ ಕ್ರಿಕೆಟ್ ಟೆಸ್ಟ್ ಜೀವನ ಮುಗಿಯಿತೇ?: ಅಭಿಮಾನಿಗಳ ಆಕ್ರೋಶ

fans displeasure over murali vijay drop from england test

ನವದೆಹಲಿ, ಆಗಸ್ಟ್ 23: ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಆರಂಭಿಕ ಅಟಗಾರ ಮುರಳಿ ವಿಜಯ್ ಅವರನ್ನು ಕೈಬಿಟ್ಟ ಆಯ್ಕೆ ಸಮಿತಿ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಮೊದಲ ಎರಡು ಟೆಸ್ಟ್‌ಗಳಲ್ಲಿ ಸೋತಿದ್ದ ಭಾರತ, ಮೂರನೇ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಕಂಡಿತ್ತು. ಮೊದಲೆರಡೂ ಪಂದ್ಯಗಳಲ್ಲಿ ವಿಜಯ್ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಟ್ರೆಂಟ್ ಬ್ರಿಡ್ಜ್ ಟೆಸ್ಟ್‌ನಲ್ಲಿ ಅವರು ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ.

ಈಗ ಮುರಳಿ ವಿಜಯ್ ಅವರನ್ನು ಕೊನೆಯ ಎರಡು ಪಂದ್ಯಗಳಿಂದಲೇ ಕೈಬಿಟ್ಟು ಅವರ ಸ್ಥಾನಕ್ಕೆ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಲಾಗಿದೆ.

ಕ್ರಿಕೆಟ್: ವಿಜಯ್, ಕುಲದೀಪ್‌ಗೆ ಕೊಕ್: ಪೃಥ್ವಿ ಶಾ, ಹನುಮ ವಿಹಾರಿ ತಂಡಕ್ಕೆ ಸೇರ್ಪಡೆಕ್ರಿಕೆಟ್: ವಿಜಯ್, ಕುಲದೀಪ್‌ಗೆ ಕೊಕ್: ಪೃಥ್ವಿ ಶಾ, ಹನುಮ ವಿಹಾರಿ ತಂಡಕ್ಕೆ ಸೇರ್ಪಡೆ

0,0, 6, 20- ಇದು ಮುರಳಿ ವಿಜಯ್ ಇಂಗ್ಲೆಂಡ್ ನೆಲದಲ್ಲಿ ಆಡಿದ ಮೊದಲ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಗಳಿಸಿದ ಸ್ಕೋರ್. ಆಂಗ್ಲರ ವೇಗದ ಬೌಲಿಂಗ್‌ನಲ್ಲಿನ ಸ್ವಿಂಗ್ ಮತ್ತು ಸೀಮ್‌ಅನ್ನು ಗ್ರಹಿಸುವಲ್ಲಿ ವಿಫಲವಾಗಿದ್ದರು. ನಾಲ್ಕೂ ಇನ್ನಿಂಗ್ಸ್‌ಗಳಲ್ಲಿ ಕಳಪೆ ಆಟ ಪ್ರದರ್ಶಿಸಿದ್ದರು. ಮುಖ್ಯ ಆರಂಭಿಕನಾಗಿ ಆಯ್ಕೆಯಾಗಿದ್ದರೂ, ಮೂರನೇ ಟೆಸ್ಟ್‌ನಲ್ಲಿ ಶಿಖರ್ ಧವನ್ ಮತ್ತು ಕೆ.ಎಲ್. ರಾಹುಲ್ ಸುಧಾರಿತ ಆಟ ಪ್ರದರ್ಶಿಸಿರುವುದು ವಿಜಯ್ ಸ್ಥಾನಕ್ಕೆ ಕುತ್ತು ತಂದಿದೆ.

ದಕ್ಷಿಣ ಆಫ್ರಿಕಾ ಸರಣಿಯಲ್ಲಿಯೂ ವಿಜಯ್ ವಿಫಲರಾಗಿದ್ದರು. ಆದರೆ, ಈ ವೈಫಲ್ಯಗಳ ಕಾರಣದಿಂದ ಅವರನ್ನು ತಂಡದಿಂದ ಕೈಬಿಟ್ಟಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಚಂದ್ರೇಶ್ ನಾರಾಯಣನ್

ಇದು ಮುರಳಿ ವಿಜಯ್ ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕಿನ ಅಂತ್ಯವೇ? ದಿನೇಶ್ ಕಾರ್ತಿಕ್ ಅವರನ್ನೇ ತಂಡದಲ್ಲಿ ಉಳಿಸಿಕೊಂಡಿದ್ದರೂ ವಿಜಯ್ ಅವರನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದು ಇದು ಸತ್ಯ ಎನಿಸುತ್ತದೆ ಎಂದು ಕ್ರಿಕೆಟ್ ಬರಹಗಾರ ಚಂದ್ರೇಶ್ ನಾರಾಯಣನ್ ಹೇಳಿದ್ದಾರೆ.

ತಂಡಕ್ಕೆ ಆಯ್ಕೆಯಾಗಲು ಮಯಾಂಕ್ ಇನ್ನೇನು ಮಾಡ್ಬೇಕು? : ಫ್ಯಾನ್ಸ್

ಹರಿ ಪ್ರಶಾಂತ್

ಮುರಳಿ ವಿಜಯ್ ಅವರನ್ನು ಕೈಬಿಟ್ಟಿದ್ದು ಕೆಟ್ಟ ನಡೆ. ಎರಡು ಕಳಪೆ ಟೆಸ್ಟ್‌ಗಳ ಕಾರಣ ಅವರನ್ನು ಕೈಬಿಡಲಾಗಿದೆ. ಕೆಲವು ಆಟಗಾರರು ಐದಕ್ಕೂ ಹೆಚ್ಚು ಅವಕಾಶ ಪಡೆದು ಆಡುವಾಗ ಅವರಿಗೆ ಏಕಿಲ್ಲ ಎಂದು ಹರಿ ಪ್ರಶಾಂತ್ ಎಂಬುವವರು ಪ್ರಶ್ನಿಸಿದ್ದಾರೆ.

ಆಕಾಶ್ ಚೋಪ್ರಾ

ಮುರಳಿ ವಿಜಯ್ ಅವರನ್ನು ಕೈಬಿಟ್ಟಿರುವುದು ಆಸಕ್ತಿಕರ ಎನ್ನುವುದಕ್ಕಿಂತ ನಿರಾಶಾದಾಯಕವಾಗಿದೆ. ಅಫ್ಫಾನಿಸ್ತಾನದ ವಿರುದ್ಧ ಶತಕ ಗಳಿಸಿದ್ದರು. ಶ್ರೀಲಂಕಾ ವಿರುದ್ಧ ತವರಿನಲ್ಲಿ ಸತತ ಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಮತ್ತು ಇಲ್ಲಿ ಮೊದಲ ಎರಡು ಟೆಸ್ಟ್‌ಗಳಲ್ಲಿ ಎಲ್ಲರೂ (ಕೊಹ್ಲಿ ಹೊರತುಪಡಿಸಿ) ವಿಫಲರಾಗಿದ್ದರು. ಆಸ್ಟ್ರೇಲಿಯಾ ಪ್ರವಾಸಕ್ಕೆ ಅವರು ಮರಳಿ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಇದು ಅವರ ವೃತ್ತಿ ಬದುಕಿನ ಅಂತ್ಯವೇ? ಹಾಗಾಗದಿರಲಿ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.

ಬಾಲಾಜಿ ಶ್ರೀನಿವಾಸನ್

ಮುರಳಿ ವಿಜಯ್ ಅವರ ಕ್ರಿಕೆಟ್ ಅಂತ್ಯವನ್ನು ಕಾಣುತ್ತಿದ್ದೇವೆ ಎನಿಸುತ್ತಿದೆ. ನಮ್ಮ ಕೆಲವು ಸ್ಮರಣೀಯ ಗೆಲುವುಗಳಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಈ ರೀತಿ ನಿರ್ಗಮಿಸುವುದನ್ನು ನೋಡಲು ದುಃಖವಾಗುತ್ತಿದೆ ಎಂದು ಬಾಲಾಜಿ ಶ್ರೀನಿವಾಸನ್ ನೋವು ವ್ಯಕ್ತಪಡಿಸಿದ್ದಾರೆ.

ಸುಜಿತ್ ಕೊಲಪ್

ಬಿಳಿ ದಿರಿಸಿನಲ್ಲಿ (ಟೆಸ್ಟ್ ಕ್ರಿಕೆಟ್) ರೋಹಿತ್ ಶರ್ಮಾ ಮತ್ತು ಮುರಳಿ ವಿಜಯ್ ಅವರ ಜೀವನ ಮುಕ್ತಾಯಗೊಂಡಿತು ಎಂದು ಬಿಸಿಸಿಐ ಹೇಳಿಕೆ ನೀಡಿದಂತಾಯಿತು. ಇಬ್ಬರಿಗೂ ವಿದಾಯ ಹೇಳುವ ಸಮಯವಿದು. ಮುರಳಿ ವಿಜಯ್ ಎಂಬ ಅಧ್ಯಾಯ ಅಂತ್ಯಗೊಂಡಿತು ಎಂದು ಸುಜಿತ್ ಕೊಲಪ್ ಹೇಳಿದ್ದಾರೆ.

ಶರತ್ ಸತು

ಮುರಳಿ ವಿಜಯ್ ಫಾರ್ಮ್ ಪರಿಗಣಿಸಿದಾಗ ಇದು ಅವರ ಕುರಿತು ಕಠಿಣ ಆದರೆ ಬಹುಶಃ ಸರಿಯಾದ ನಿರ್ಧಾರ. 2014ರಲ್ಲಿ ಕೊಹ್ಲಿ ಮತ್ತಿತರರು ಸಂಪೂರ್ಣ ವಿಫಲರಾಗಿದ್ದಾಗ ಇಂಗ್ಲಿಷ್‌ ಲೈನ್‌ಅಪ್‌ ಅನ್ನು ಸಮರ್ಥವಾಗಿ ಎದುರಿಸಿ ಗೌರವಾರ್ಹ ರನ್ ದಾಖಲಿಸಿದ್ದವರು ಎಂಬುದನ್ನು ನಾವು ಮರೆತಿದ್ದೇವೆ. ಮತ್ತಷ್ಟು ಬಲಗೊಂಡು ಮರಳಿಬನ್ನಿ ಎಂದು ಶರತ್ ಸತು ಹಾರೈಸಿದ್ದಾರೆ.

ಮಹಿನ್ವಾಲ್

ಮುರಳಿ ವಿಜಯ್ ಅವರ ವಿಚಾರವಾಗಿ ಬೇಸರವಾಗುತ್ತಿದೆ ಮತ್ತು ಮಯಂಕ್ ಅಗರ್ವಾಲ್ ವಿಚಾರದಲ್ಲಿ ಆಘಾತವಾಗಿದೆ. ಅವರನ್ನು ಏಕೆ ಆಯ್ಕೆ ಮಾಡುತ್ತಿಲ್ಲ? ಆಯ್ಕೆಯ ಮಾನದಂಡ ಯಾವುದು? ತಂಡಕ್ಕೆ ಆಯ್ಕೆಯಾಗಲು ಎಷ್ಟು ಶತಕಗಳನ್ನು ಬಾರಿಸಬೇಕು? ಇದು ಹರಡುವ ಸಂದೇಶವಾದರೂ ಏನು? ಎಂದು ಮಯಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡದ ಮಹಿನ್ವಾಲ್ ಎಂಬುವವರು ಆಯ್ಕೆದಾರರ ವಿರುದ್ಧ ಕಿಡಿಕಾರಿದ್ದಾರೆ.

Story first published: Thursday, August 23, 2018, 20:38 [IST]
Other articles published on Aug 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X