ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಣಿದಾಡಿದ ಪಾಕಿಸ್ತಾನ ಆಟಗಾರ್ತಿಯರ ವೀಡಿಯೋ ಶೇರ್ ಮಾಡಿದ ಐಸಿಸಿ

Fans express displeasure after ICC posts video of Pakistan cricketers dancing

ಸಿಡ್ನಿ, ಫೆಬ್ರವರಿ 20: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಸಂಬಂಧಿಸಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದೆ. ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಬಾಯಲ್ಲೇ ಮ್ಯೂಸಿಕ್ ಹಾಕಿ, ಡ್ಯಾನ್ಸ್ ಮಾಡುತ್ತಿರುವ ದೃಶ್ಯ ವೀಡಿಯೋದಲ್ಲಿದೆ.

ICC ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ ತಕ್ಷಣದಿಂದಲೇ ಅಮಾನತು: ಪಿಸಿಬಿICC ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ ತಕ್ಷಣದಿಂದಲೇ ಅಮಾನತು: ಪಿಸಿಬಿ

ಬುಧವಾರ (ಫೆಬ್ರವರಿ 19) ಐಸಿಸಿ ಈ ವೀಡಿಯೋವನ್ನು ಹಂಚಿಕೊಂಡಿತ್ತು. ವೀಡಿಯೋದ ಜೊತೆಗೆ, 'ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ನಿಜಕ್ಕೂ ರಾಕ್‌ ಸ್ಟಾರ್‌ಗಳು,' ಎಂದು ಸಾಲೊಂದನ್ನೂ ಸೇರಿಸಿತ್ತು. ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ.

ನಟನೆಯತ್ತ ಮುಖ ಮಾಡಿದ ಟೀಂ ಇಂಡಿಯಾದ ಖ್ಯಾತ ಮಾಜಿ ಆಟಗಾರನಟನೆಯತ್ತ ಮುಖ ಮಾಡಿದ ಟೀಂ ಇಂಡಿಯಾದ ಖ್ಯಾತ ಮಾಜಿ ಆಟಗಾರ

ಮುಂದೊಬ್ಬಳು ಬ್ಯಾಟನ್ನು ಮೈಕ್‌ನಂತೆ ಹಿಡಿದು, ಬಾಯಲ್ಲೇ ಮ್ಯೂಸಿಕ್ ಹಾಕುತ್ತ, ಆ ಮ್ಯೂಸಿಕ್ಕಿಗೆ ತಕ್ಕಂತೆ ಹೆಜ್ಜೆಯೂ ಬದಲಿಸುತ್ತಿದ್ದರೆ, ಆಕೆಯ ಹಿಂದಿರುವ ಆಟಗಾರ್ತಿಯರು ರಾಕ್‌ ಸ್ಟಾರ್‌ನಂತೆ ಸ್ಟೆಪ್‌ ಹಾಕುತ್ತಿರುವ ದೃಶ್ಯ ವೀಡಿಯೋದಲ್ಲಿತ್ತು. ಈ ವೀಡಿಯೋಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಇದರ ಬದಲು ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆ ತೋರಿಸಲಿ ಎಂದು ಪಾಕ್ ಆಟಗಾರ್ತಿಯರ ಕಾಲೆಳೆದಿದ್ದಾರೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ 2020 ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಫೆಬ್ರವರಿ 21ರಂದು ಆರಂಭಗೊಳ್ಳುವ ಈ ಟೂರ್ನಿ, ಮಾರ್ಚ್ 8ರಂದು ಕೊನೆಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳೆಯರು ಮತ್ತು ಭಾರತದ ಮಹಿಳೆಯರು ಸೆಣಸಾಡಲಿದ್ದಾರೆ. ಸಿಡ್ನಿಯಲ್ಲಿ ನಡೆಯುವ ಈ ಪಂದ್ಯ 1.30 pmಗೆ ಆರಂಭಗೊಳ್ಳಲಿದೆ. ಪಾಕ್ ಮಹಿಳಾ ತಂಡ ಫೆಬ್ರವರಿ 26ರಂದು ವೆಸ್ಟ್ ಇಂಡೀಸ್ ಸವಾಲು ಸ್ವೀಕರಿಸಲಿದೆ.

Story first published: Thursday, February 20, 2020, 18:41 [IST]
Other articles published on Feb 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X