ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಕಾಮೆಂಟರಿಯಿಂದ ಕಿತ್ತಾಕಿ': ಸುನಿಲ್ ಗವಾಸ್ಕರ್ ವಿರುದ್ಧ ಅಭಿಮಾನಿಗಳು ಕಿಡಿ

Fans Slam Sunil Gavaskar for his controversial Comment on Virat Kohli and Anushka Sharma

ನವದೆಹಲಿ: ಭಾರತದ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಕ್ರಿಕೆಟ್ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿದ್ದಾರೆ. ಗವಾಸ್ಕರ್ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದಲೇ ತೆಗೆದು ಹಾಕಬೇಕೆಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ. ಕಾಮೆಂಟರಿ ವೇಳೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದಕ್ಕಾಗಿ ಗವಾಸ್ಕರ್‌ ಸುದ್ದಿಯಲ್ಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ 6ನೇ ಪಂದ್ಯದಲ್ಲಿ ಗವಾಸ್ಕರ್ ವಿವಾದಾತ್ಮಕ ಕಾಮೆಂಟ್ ಮಾಡಿದ್ದರು.

IPL 2020: ಕಿಂಗ್ಸ್ ಇಲೆವೆನ್ ವಿರುದ್ಧ ಆರ್‌ಸಿಬಿ ಸೋಲಿಗೆ 5 ಕಾರಣಗಳುIPL 2020: ಕಿಂಗ್ಸ್ ಇಲೆವೆನ್ ವಿರುದ್ಧ ಆರ್‌ಸಿಬಿ ಸೋಲಿಗೆ 5 ಕಾರಣಗಳು

ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ಸೆಪ್ಟೆಂಬರ್‌ 24) ನಡೆದ ರಾಯಲ್ ಚಾಲೆಂಜರ್ಸ್-ಕಿಂಗ್ಸ್‌ ಇಲೆವೆನ್ ಪಂಜಾಬ್‌ ನಡುವಿನ ಪಂದ್ಯದಲ್ಲಿ ಕಾಮೆಂಟರಿ ನೀಡುತ್ತಿದ್ದ ಸುನಿಲ್ ಗವಾಸ್ಕರ್ ಹೇಳಿಕೆ ಅಪಾರ್ಥಕ್ಕೀಡುಮಾಡಿದೆ.

ಐಪಿಎಲ್ 2020: ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಭಾರೀ ದಂಡಐಪಿಎಲ್ 2020: ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಭಾರೀ ದಂಡ

ಕಾಮೆಂಟರಿಯಲ್ಲಿ ಗವಾಸ್ಕರ್ ಅವರು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಅವರನ್ನು ಎಳೆದು ತಂದಿದ್ದು ಕ್ರಿಕೆಟ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಅದಲ್ಲದೆ ಕಾಮೆಂಟ್ ಡಬಲ್ ಮೀನಿಂಗ್ ರೀತಿಯಲ್ಲಿದೆ.

ರಾಹುಲ್ ಎದುರು ಎಡವಿದ ಕೊಹ್ಲಿ

ರಾಹುಲ್ ಎದುರು ಎಡವಿದ ಕೊಹ್ಲಿ

ಕಿಂಗ್ಸ್‌ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಒಂದಿಷ್ಟು ತಪ್ಪುಗಳನ್ನು ಮಾಡಿದ್ದರು. ಮುಖ್ಯವಾಗಿ ಪಂಜಾಬ್‌ ಅಪಾಯಕಾರಿ ಆಟಗಾರ, ನಾಯಕ ಕೆಎಲ್ ರಾಹುಲ್ ಅವರ ಕ್ಯಾಚನ್ನು ಎರಡೆರಡು ಬಾರಿ ಕೈಚೆಲ್ಲಿದ್ದರು. ಇದೇ ಬೆಂಗಳೂರಿ ಗೆಲುವಿಗೆ ಮುಳುವಾಯಿತು.

ಕನ್ನಡಿಗನ ಸ್ಫೋಟಕ ಬ್ಯಾಟಿಂಗ್

ಕನ್ನಡಿಗನ ಸ್ಫೋಟಕ ಬ್ಯಾಟಿಂಗ್

ಕೊಹ್ಲಿಯಿಂದ ಎರಡೆರಡು ಬಾರಿ ಜೀವದಾನ ಪಡೆದ ಕನ್ನಡಿಗ, ಮೂಲತಃ ಮಂಗಳೂರಿನವರಾದ ರಾಹುಲ್ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು. 69 ಎಸೆತಗಳಲ್ಲಿ 14 ಫೋರ್ಸ್, 7 ಸಿಕ್ಸರ್ ಸೇರಿ 132 ರನ್ ಕೊಡುಗೆಯಿತ್ತರು. ಹೀಗಾಗಿ ಕೆXIಪಿ 206 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿ ನೀರಸ ಬ್ಯಾಟಿಂಗ್‌ನೊಂದಿಗೆ 109 ರನ್‌ ಸೇರಿಸಿ 97 ರನ್‌ನಿಂದ ಸೋತಿತು.

ಕಾಮೆಂಟರಿ ವಿವಾದ

ಕಾಮೆಂಟರಿ ವಿವಾದ

ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಆಗ ಕಾಮೆಂಟರಿ ನೀಡುತ್ತಿದ್ದ ಸುನಿಲ್ ಗವಾಸ್ಕರ್ ಕೊಹ್ಲೀನ ಟೀಕಿಸುವ ಭರದಲ್ಲಿ ಅನುಷ್ಕಾಳನ್ನು ಉಲ್ಲೇಖಿಸಿದ್ದರು. 'Inhone lockdown me to bas Anushka ki gendon ki practice ki hai' (ಲಾಕ್‌ಡೌನ್ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರೆ) ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.

ಅಭಿಮಾನಿಗಳು ಕಿಡಿ

ಅಭಿಮಾನಿಗಳು ಕಿಡಿ

ಗವಾಸ್ಕರ್ ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿದರೋ ಗೊತ್ತಿಲ್ಲ. ಆದರೆ ಗವಾಸ್ಕರ್ ಹೇಳಿಕೆಗಂತೂ ಅಭಿಮಾನಿಗಳು ಕಿಡಿ ಕಾರಿದ್ದಾರೆ. ಈ ಹೇಳಿಕೆ ಅಪಾರ್ಥ ರೀತಿಯಲ್ಲಿದೆ, ಡಬಲ್ ಮೀನಿಂಗ್ ರೀತಿಯಲ್ಲಿದೆ. ಸುನಿಲ್ ಗವಾಸ್ಕರ್ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದಲೇ ಕಿತ್ತು ಹಾಕಬೇಕೆಂದು ಅನೇಕರು ಟ್ವಿಟರ್‌ ಮೂಲಕ ಒತ್ತಾಯಿಸಿದ್ದಾರೆ.

ಅಭಿಮಾನಿಗಳು ಮಾಡಿರುವ ಕೆಲ ಟ್ವೀಟ್‌ಗಳು ಕೆಳಗಿವೆ

Story first published: Friday, September 25, 2020, 17:14 [IST]
Other articles published on Sep 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X