ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಕಳಿಸಿ ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಂಡ ಪಾಕ್‌ ನಾಯಕ!

Fans troll Pakistan captain Sarfaraz for yawning on the field

ಮ್ಯಾಂಚೆಸ್ಟಟರ್‌, ಜೂನ್‌ 17: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಮುಖಾಮುಖಿಯಾದ ಸಂದರ್ಭದಲ್ಲಿಇಡೀ ಕ್ರಿಕೆಟ್‌ ಜಗತ್ತೇ ಅತ್ತ ಮುಖಮಾಡಿರುತ್ತದೆ. ಇತ್ತಂಡಗಳು ಯಾವುದೇ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳನ್ನು ಆಡದೇ ಇರುವುದರಿಂದ ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಮುಖಾಮುಖಿಯಾಗುತ್ತವೆ. ಹೀಗಾಗಿ ಇಂಡೊ-ಪಾಕ್‌ ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿರುತ್ತಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಅದರಲ್ಲೂ ವಿಶ್ವಕಪ್‌ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ ಈವರೆಗೆ ಒಂದೂ ಜಯ ದಾಖಲಿಸಿಲ್ಲ. ಇದರಿಂದಾಗಿ ಪಾಕಿಸ್ತಾನ ತಂಡಕ್ಕೆ ಭಾರಿ ಮುಖಭಂಗವೇ ಆಗಿದೆ. ಅದರಲ್ಲೂ ಪಾಕ್‌ ಕ್ರಿಕೆಟ್‌ ಅಭಿಮಾನಿಗಳಂತೂ ಭಾರತ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡ ಮೊದಲ ಜಯ ತಂದುಕೊಡುತ್ತದೆ ಎಂಬ ಬಕ ಪಕ್ಷಿಗಳಂತೆ ಕಾದು ಕುಳಿತಿರುತ್ತಾರೆ. ಹೀಗಿರುವಾಗ ವಿಕೆಟ್‌ ಕೀಪಿಂಗ್‌ ಮಾಡುವ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ನಾಯಕನೇ ಸತತವಾಗಿ ಆಕಳಿಸುತ್ತಾ ಆಲಸ್ಯ ಪ್ರದರ್ಶಿಸದರೆ ಪಾಕ್‌ ಅಭಿಮಾನಿಗಳಿಗೆ ಹೇಗನಿಸಬೇಡ.

ವಿಶ್ವಕಪ್‌: ಪಾಕ್‌ ವಿರುದ್ಧ ಔಟಾಗದೇ ಇದ್ದರೂ ವಿರಾಟ್‌ ಹೊರನಡೆದದ್ದೇಕೆ?ವಿಶ್ವಕಪ್‌: ಪಾಕ್‌ ವಿರುದ್ಧ ಔಟಾಗದೇ ಇದ್ದರೂ ವಿರಾಟ್‌ ಹೊರನಡೆದದ್ದೇಕೆ?

ಭಾನುವಾರ ನಡೆದ ಇಂಡು-ಪಾಕ್‌ ವಿಶ್ವಕಪ್‌ ಪಂದ್ಯದ ವೇಳೆ ಭಾರತದ ಇನಿಂಗ್ಸ್‌ನ 45ನೇ ಓವರ್‌ ಬಳಿಕ ಮೊದಲ ಬಾರಿ ಮಳೆ ಸುರಿದಾಗ ಕೆಲ ಕಾಲ ಆಟ ಸ್ಥಗಿತ ಗೊಳಿಸಲಾಗಿತ್ತು. 15-30 ನಿಮಿಷಗಳ ಬಳಿಕ ಆಟ ಮರಳಿ ಆರಂಭವಾಯಿತಾದರೂ ಈ ಸಂದರ್ಭದಲ್ಲಿ ವಿಕೆಟ್‌ಕೀಪಿಂಗ್‌ ಮಾಡುತ್ತಿದ್ದ ಪಾಕ್‌ ನಾಯಕ ಸತತವಾಗಿ ಆಕಳಿಸುತ್ತಿದ್ದುದ್ದನ್ನು ಟೆಲಿವಿಷನ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ಇದು ಪಾಕ್‌ ಕ್ರಿಕೆಟ್‌ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾದರೆ, ಭಾರತೀಯ ಕ್ರಿಕೆಟ್‌ ಅಭಿಮಾನಿಗಳಂತು ಹಲವು ವಿಭಿನ್ನ ರೀತಿಯಲ್ಲಿ ಟ್ರೋಲ್‌ ಮಾಡಿದ್ದಾರೆ.

ವಿಶ್ವಕಪ್‌: ಸಚಿನ್‌ ವಿಶ್ವ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!ವಿಶ್ವಕಪ್‌: ಸಚಿನ್‌ ವಿಶ್ವ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!

ಇಷ್ಟು ಒತ್ತಡ ಪಂದ್ಯದಲ್ಲು ಸೋಮಾರಿಯಂತೆ ವರ್ತಿಸಿದ ಪಾಕಿಸ್ತಾನ ತಂಡದ ನಾಯಕನ ಬಗ್ಗೆ ಸಾಮಾಜಿ ಜಾಲತಾಣಗಳಲ್ಲಿ ಭಾರಿ ಮೆಮೆಗಳು ಹರಿದಾಡಿದವು. ಅಷ್ಟೇ ಅಲ್ಲದೆ ಈ ರೀತಿಯ ಸೋಮಾರಿ ತನಕ್ಕೆ ಸರ್ಫರಾಝ್‌ ಅಭಿಮಾನಿಗಳಿಂದ ಸಾಕಷ್ಟು ಟೀಕೆಗೂ ಗುರಿಯಾಗಿದ್ದಾರೆ. 'ಸರ್ಫರಾಝ್‌ಗೆ ಪಾಕಿಸ್ತಾನ ತಂಡದ ನಾಯಕನಾಗಲು ಆಸಕ್ತಿಯೇ ಇಲ್ಲ' ಎಂದೆಲ್ಲಾ ಅಭಿಮಾನಿಗಳು ಟ್ವಿಟರ್‌ ಮೂಲಕ ಜರಿದಿದ್ದಾರೆ.

ವಿಶ್ವಕಪ್‌ನಲ್ಲಿ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾ ಶತಕಗಳ ದಾಖಲೆ!ವಿಶ್ವಕಪ್‌ನಲ್ಲಿ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾ ಶತಕಗಳ ದಾಖಲೆ!

ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅಂತೆಯೇ ಬ್ಯಾಟಿಂಗ್‌ ಆರಂಭಿಸಿದ ಭಾರತ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ (140) ಮತ್ತು ಕೆ.ಎಲ್‌ ರಾಹುಲ್‌ (57) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 50 ಓವರ್‌ಗಳಲ್ಲಿ 336/5 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ನಾಯಕ ಕೊಹ್ಲಿ ಕೂಡ 77 ರನ್‌ಗಳ ಕಾಣಿಕೆ ನೀಡಿದರು. ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ 40 ಓವರ್‌ಗಳಲ್ಲಿ 302ರನ್‌ಗಳ ಗುರಿ ನಿಗದಿ ಪಡಿಸಲಾಗಿತ್ತು. ಅಂತಿಮವಾಗಿ 6 ವಿಕೆಟ್‌ ನಷ್ಟದಲ್ಲಿ 212 ರನ್‌ಗಳನ್ನು ಗಳಿಸಿದ ಪಾಕ್‌ ಮತ್ತೊಂದು ಹೀನಾಯ ಸೋಲುಂಡಿತು.

 ವಿಶ್ವಕಪ್‌: ಪಾಕ್‌ ವಿರುದ್ಧದ ಪಂದ್ಯದಲ್ಲಿ ಧೋನಿ ದಾಖಲೆ ಮುರಿದ ಹಿಟ್‌ಮ್ಯಾನ್‌! ವಿಶ್ವಕಪ್‌: ಪಾಕ್‌ ವಿರುದ್ಧದ ಪಂದ್ಯದಲ್ಲಿ ಧೋನಿ ದಾಖಲೆ ಮುರಿದ ಹಿಟ್‌ಮ್ಯಾನ್‌!

ಇಂಡೊ ಪಾಕ್‌ ಪಂದ್ಯಕ್ಕೂ ಮೊದಲೇ ಪಾರ್ಟಿ ಮಾಡಿದ್ದ ಪಾಕ್‌ ಆಟಗಾರರು!
ವರದಿಗಳ ಪ್ರಕಾರ ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಅನುಭವಿ ಆಟಗಾರ ಶೊಯೇಬ್‌ ಮಲಿಕ್‌ ಹಾಗೂ ಅವರ ಪತ್ನಿ ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಇಂಡೊ-ಪಾಕ್‌ ಕ್ರಿಕೆಟ್‌ ಪಂದ್ಯಕ್ಕೂ ಮುನ್ನ ಪಾರ್ಟಿ ಆಯೋಜಿಸಿ ಇದರಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡದ ಆಟಗಾರರು ಎಲ್ಲರೂ ಭಾಗಿಯಾಗಿದ್ದರು. ಈ ಪಾರ್ಟಿ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಭಾರತ ವಿರುದ್ಧದ ಪಂದ್ಯದಲ್ಲಿ ಪಾಕ್‌ ತಂಡದ ಕಳಾಹೀನ ಪ್ರದರ್ಶನಕ್ಕೆ ಈ ರೀತಿ ಪಾರ್ಟಿ ಮಾಡುತ್ತಾ ಇರುವುದೇ ಕಾರಣ ಎಂದೆಲ್ಲಾ ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ಕಿಡಿ ಕಾರಿದ್ದಾರೆ.

Story first published: Monday, June 17, 2019, 16:31 [IST]
Other articles published on Jun 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X