ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ದಿನಾಂಕ ಘೋಷಣೆಯ ಬೆನ್ನಲ್ಲೇ ಬಿಸಿಸಿಐ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ

Fans Want To Boycott Ipl 2020 As Chinese Sponsors Retained In Cricket Carnival

ಐಪಿಎಲ್ ಆಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ದೊರೆಯುತ್ತಿದ್ದಂತೆಯೇ ಟೂರ್ನಿಯ ಚಟುವಟಿಕೆಗಳು ಗರಿಗೆದರತೊಡಗಿದೆ. ಆದರೆ ಈ ಮಧ್ಯೆ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ತೆಗೆಸುಕೊಂಡಿರುವ ಒಂದು ನಿರ್ಧಾರಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಐಪಿಎಲ್ ಬಹಿಷ್ಕರಿಸುವ ಅಭಿಯಾನವನ್ನು ಟ್ವಿಟ್ಟರ್‌ನಲ್ಲಿ ಆರಂಭಿಸಿದ್ದಾರೆ.

ಕ್ರಿಕೆಟ್ ಅಭಿಮಾನಿಗಳ ಈ ಆಕ್ರೋಶಕ್ಕೆ ಕಾರಣ ಬಿಸಿಸಿಐ ತೆಗೆದುಕೊಂಡಿರುವ ಒಂದು ನಿರ್ಧಾರ. ಈ ಬಾರಿಯ ಐಪಿಎಲ್‌ನಲ್ಲಿ ಎಲ್ಲಾ ಹಿಂದಿನ ಪ್ರಾಯೋಜಕರು ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಭಾನುವಾರ ಸ್ಪಷ್ಟಪಡಿಸಿತ್ತು.

ಐಪಿಎಲ್ 2020: ಆರಂಭ, ಅಂತ್ಯ, ಸಮಯ, ಕ್ರೀಡಾಂಗಣ, ಪ್ರಾಯೋಜಕತ್ವ ಎಲ್ಲದಕ್ಕೂ ಸ್ಪಷ್ಟ ಉತ್ತರಐಪಿಎಲ್ 2020: ಆರಂಭ, ಅಂತ್ಯ, ಸಮಯ, ಕ್ರೀಡಾಂಗಣ, ಪ್ರಾಯೋಜಕತ್ವ ಎಲ್ಲದಕ್ಕೂ ಸ್ಪಷ್ಟ ಉತ್ತರ

ಈ ಮೂಲಕ ಚೀನಾದ ಪ್ರಮುಖ ಮೊಬೈಲ್ ಸಂಸ್ಥೆಯಾದ ವಿವೋ ಈ ಬಾರಿಯ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕರಾಗಿಯೇ ಮುಂದುವರಿಯುವು ಖಚಿಪಡಿಸಿತ್ತು. ಬಿಸಿಸಿಐನ ಈ ನಿರ್ಧಾರ ಈಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕಾಗಿ ಬಿಸಿಸಿಐಗೆ ಮಂಗಳಾರತಿ ಮಾಡುತ್ತಿದ್ದಾರೆ ಅಭಿಮಾನಿಗಳು.

ನೀವು ನಿಮ್ಮ ಮುಖ್ಯ ಪ್ರಾಯೋಜಕರನ್ನು ಐಪಿಎಲ್‌ನಿಂದ ಬಹಿಷ್ಕರಿಸದಿದ್ದರೆ ನಾವು ಇಡೀ ಐಪಿಎಲ್‌ಅನ್ನು ಬಹಿಷ್ಕರಿಸುತ್ತೇವೆ ಎಂದು ಕೆಲ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಟ್ವಿಟ್ಟರ್‌ನಲ್ಲಿ #ಬಾಯ್ಕಾಟ್ಐಪಿಎಲ್ ಅಭಿಯಾನವನ್ನು ನಡೆಸುತ್ತಿದ್ದಾರೆ.

ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಗಳಿಸಿದ ಮೊದಲ ಸಂಪಾದನೆ ಎಷ್ಟು? ಅದನ್ನು ಶರ್ಮಾ ಏನ್ಮಾಡಿದ್ರು?ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಗಳಿಸಿದ ಮೊದಲ ಸಂಪಾದನೆ ಎಷ್ಟು? ಅದನ್ನು ಶರ್ಮಾ ಏನ್ಮಾಡಿದ್ರು?

ಇನ್ನೂ ಕೆಲವು ಅಭಿಮಾನಿಗಳು ನಾವು ಐಪಿಎಲ್‌ನ ದೊಡ್ಡ ಅಭಿಮಾನಿ. ಆದರೆ ಚೀನಾ ಕಂಪನಿಯನ್ನು ಬಹಿಷ್ಕರಿಸದಿದ್ದರೆ ನಾವು ಈ ಬಾರಿಯ ಐಪಿಎಲ್ ವೀಕ್ಷಿಸಲಾರೆವು ಎಂದು ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಈ ಅಭಿಯಾನವನ್ನು ಬಿಸಿಸಿಐ ಯಾವ ರೀತಿ ಪರಿಗಣಿಸುತ್ತದೆ ಎಂದು ಕಾದು ನೋಡಬೇಕಿದೆ.

Story first published: Monday, August 3, 2020, 14:47 [IST]
Other articles published on Aug 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X