ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು 2021: ಸಂಪೂರ್ಣ ಪಟ್ಟಿ ಪ್ರಕಟ, ಶ್ರೀಶಾಂತ್ ಇಲ್ಲ!

Fast bowler S Sreesanth wasnt shortlisted by any of the eight India IPL franchise

ಮುಂಬೈ: ಭಾರತದ ಮಾಜಿ ವೇಗಿ ಎಸ್‌ ಶ್ರೀಶಾಂತ್‌ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿಯ ಹರಾಜಿಗಾಗಿ ಯಾವುದೇ ಫ್ರಾಂಚೈಸಿಗಳು ಶಾರ್ಟ್ ಲಿಸ್ಟ್‌ನಲ್ಲಿ ಸೇರಿಸಿಕೊಂಡಿಲ್ಲ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 14ನೇ ಆವೃತ್ತಿಯ ಐಪಿಎಲ್‌ ಹರಾಜಿಗಾಗಿ ಬಿಡುಗಡೆಗೊಳಿಸಿರುವ 292 ಮಂದಿಯ ಪಟ್ಟಿಯಲ್ಲಿ ಶ್ರೀಶಾಂತ್ ಹೆಸರೇ ಇಲ್ಲ. ಐಪಿಎಲ್‌ನಲ್ಲೇ ಸ್ಪಾಟ್ ಫಿಕ್ಸಿಂಗ್ ಆರೋಪದಡಿಯಲ್ಲಿ ನಿಷೇಧಕ್ಕೀಡಾಗಿದ್ದ ಶ್ರೀಶಾಂತ್ ಮೂಲಬೆಲೆ 75 ಲಕ್ಷ ರೂ. ಆಗಿತ್ತು.

ಐಪಿಎಲ್ 2021 ಹರಾಜು: ಅಂತಿಮ ಪಟ್ಟಿಯಲ್ಲಿ 292 ಕ್ರಿಕೆಟರ್ಸ್ಐಪಿಎಲ್ 2021 ಹರಾಜು: ಅಂತಿಮ ಪಟ್ಟಿಯಲ್ಲಿ 292 ಕ್ರಿಕೆಟರ್ಸ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಐಪಿಎಲ್ 2021 ಹರಾಜಿಗಾಗಿ ಮಾಡಲಾಗಿರುವ ಶಾರ್ಟ್‌ ಲಿಸ್ಟ್‌ನಲ್ಲಿದ್ದಾರೆ. ಅವರ ಮೂಲ ಬೆಲೆ 20 ಲಕ್ಷ ರೂ. ಫೆಬ್ರವರಿ 18ರಂದು ಚೆನ್ನೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಭಾರತ vs ಇಂಗ್ಲೆಂಡ್: 5 ಪಂದ್ಯಗಳ ಟಿ20ಐ ಸರಣಿಗೆ ಆಂಗ್ಲ ತಂಡ ಪ್ರಕಟಭಾರತ vs ಇಂಗ್ಲೆಂಡ್: 5 ಪಂದ್ಯಗಳ ಟಿ20ಐ ಸರಣಿಗೆ ಆಂಗ್ಲ ತಂಡ ಪ್ರಕಟ

ಆಸ್ಟ್ರೇಲಿಯಾದ ಆಟಗಾರ ಮಾರ್ನಸ್ ಲ್ಯಬುಶೇನ್ ಮತ್ತು ಭಾರತದ ಟೆಸ್ಟ್ ಸ್ಪೆಶಾಲಿಸ್ಟ್ ಚೇತೇಶ್ವರ ಪೂಜಾರ ಕೂಡ ಶಾರ್ಟ್ ಲಿಸ್ಟ್‌ನಲ್ಲಿದ್ದು, ಅವರ ಮೂಲಬೆಲೆ ಕ್ರಮವಾಗಿ 1 ಕೋ.ರೂ. ಮತ್ತು 50 ಲಕ್ಷ ರೂ. ಆಗಿದೆ.

ಭಜ್ಜಿ, ಮ್ಯಾಕ್ಸ್‌ವೆಲ್, ಸ್ಮಿತ್‌ಗೆ ಭರ್ಜರಿ ಬೆಲೆ

ಭಜ್ಜಿ, ಮ್ಯಾಕ್ಸ್‌ವೆಲ್, ಸ್ಮಿತ್‌ಗೆ ಭರ್ಜರಿ ಬೆಲೆ

ಹರಾಜಿಗಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿರುವ ಆಟಗಾರರ ಪಟ್ಟಿಯಲ್ಲಿರುವ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್, ಕೇದಾರ್ ಜಾಧವ್, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಇಂಗ್ಲೆಂಡ್ ಮೊಯೀನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಪ್ಲಂಕೆಟ್, ಜೇಸನ್ ರಾಯ್, ಮಾರ್ಕ್‌ವುಡ್ ಅತ್ಯಧಿಕ ಬೆಲೆಗೆ ಅಂದರೆ 2 ಕೋ.ರೂ. ಮೂಲಬೆಲೆಗೆ ಹೆಸರಿಸಲ್ಪಟ್ಟಿದ್ದಾರೆ.

ಮೂಲ ಬೆಲೆ, ಅಂಕಿ-ಅಂಶಗಳು

ಮೂಲ ಬೆಲೆ, ಅಂಕಿ-ಅಂಶಗಳು

* ಆರಂಭದಲ್ಲಿ 14ನೇ ಐಪಿಎಲ್ ಆವೃತ್ತಿಯ ಆಟಗಾರರ ಹರಾಜಿಗಾಗಿ ಒಟ್ಟು 1114 ಮಂದಿ ನೋಂದಾಯಿಸಿಕೊಂಡಿದ್ದರು.
* ಇದರಲ್ಲಿ ಮತ್ತೆ ಚುಟುಕು ಪಟ್ಟಿ ಮಾಡಲಾಗಿದೆ. ಒಟ್ಟು 10 ಮಂದಿ ಆಟಗಾರರ ಮೂಲಬೆಲೆ 1.5 ಕೋ.ರೂ. ಆಗಿದೆ.
* ಭಾರತದ ಹನುಮ ವಿಹಾರಿ ಮತ್ತು ಉಮೇಶ್ ಯಾದವ್ ಮೂಲಬೆಲೆ 1 ಕೋ.ರೂ. ಆಗಿದೆ.
* ಶಾರ್ಟ್ ಲಿಸ್ಟ್‌ನಲ್ಲಿರುವ ಆಟಗಾರರಲ್ಲಿ 164 ಮಂದಿ ಭಾರತೀಯರು, 125 ಮಂದಿ ವಿದೇಶಿಯರು ಮತ್ತು 3 ಆಟಗಾರರು ಸಹ ರಾಷ್ಟ್ರಗಳ ಆಟಗಾರರು.

ನಯನ್ ದೋಶಿ ಹಿರಿಯ ಆಟಗಾರ

ನಯನ್ ದೋಶಿ ಹಿರಿಯ ಆಟಗಾರ

ಫೆಬ್ರವರಿ 18ರಂದು ಮಧ್ಯಾಹ್ನ 3 ಗಂಟೆಗೆ ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 8 ಫ್ರಾಂಚೈಸಿಗಳು ವಿವಿಧ ಸ್ಲಾಟ್ ಗಳಲ್ಲಿರುವ ಆಟಗಾರರನ್ನು ಆಯ್ಕೆ ಮಾಡಲಿವೆ.
ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ಅವರ ಪುತ್ರ ನಯನ್ ದೋಶಿ ಅವರು ಐಪಿಎಲ್ 2021ರ ಹರಾಜಿಗೆ ನೋಂದಣಿ ಮಾಡಿಕೊಂಡಿದ್ದು, ಪಟ್ಟಿಯಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

* ಶಾರ್ಟ್ ಲಿಸ್ಟ್‌ನಲ್ಲಿರುವ ಎಲ್ಲರ ಮಾಹಿತಿ ಕೆಳಗಿದೆ

Fast bowler S Sreesanth wasnt shortlisted by any of the eight India IPL franchise
Fast bowler S Sreesanth wasnt shortlisted by any of the eight India IPL franchise
Fast bowler S Sreesanth wasnt shortlisted by any of the eight India IPL franchise

Story first published: Saturday, February 13, 2021, 8:59 [IST]
Other articles published on Feb 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X