ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021ರಿಂದ ಹಿಂದೆ ಸರಿದ ಮಾರಕ ವೇಗಿ ಡೇಲ್ ಸ್ಟೇನ್

Fast Bowlers Dale Steyn pulls out of IPL 2021 to take some time off

ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಿಂದ ಹಿಂದೆ ಸರಿದಿದ್ದಾರೆ. ಕ್ರಿಕೆಟ್‌ನಿಂದ ಕೊಂಚ ಕಾಲ ದೂರ ಉಳಿಯಲು ಬಯಸಿರುವುದರಿಂದ ಮುಂಬರುವ ಐಪಿಎಲ್‌ನಲ್ಲಿ ತಾನು ಆಡುತ್ತಿಲ್ಲ ಎಂದು ಸ್ಟೇನ್ ಹೇಳಿದ್ದಾರೆ.

ಪಾಕ್ ಕ್ರಿಕೆಟ್ ತಂಡದ ಮೋಸದ ಬಗ್ಗೆ ಬಾಂಬ್ ಸಿಡಿಸಿದ ಮೊಹಮ್ಮದ್ ಆಸಿಫ್!ಪಾಕ್ ಕ್ರಿಕೆಟ್ ತಂಡದ ಮೋಸದ ಬಗ್ಗೆ ಬಾಂಬ್ ಸಿಡಿಸಿದ ಮೊಹಮ್ಮದ್ ಆಸಿಫ್!

ತನಗೆ ಬೇರೊಂದು ಫ್ರಾಂಚೈಸಿಗೆ ಸೇರುವ ಉದ್ದೇಶವಿಲ್ಲ. ಆದರೆ ತಾನು ಕೊಂಚ ಕಾಲ ಕ್ರಿಕೆಟ್‌ನಿಂದ ದೂರ ಉಳಿಯುವುದಕ್ಕಾಗಿ ಮುಂದಿನ ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂದು 37ರ ಹರೆಯದ ಡೇಲ್ ಸ್ಟೇನ್ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸ್ಟೇನ್ ಅವರು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ.

'ಈ ವರ್ಷ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲು ಸ್ವತಃ ಅಲಭ್ಯನಿರಲು ನಾನೇ ನಿರ್ಧರಿಸಿದ್ದೇನೆ. ನಾನು ಬೇರೆ ಯಾವುದೇ ತಂಡಕ್ಕೆ ಆಡಲು ಯೋಚಿಸುತ್ತಿಲ್ಲ. ಆ ವೇಳೆ ನಾನು ಕ್ರಿಕೆಟ್‌ನಿಂದ ಕೊಂಚ ದೂರ ಇರಲು ನಾನು ಬಯಸಿದ್ದೇನೆ. ಅರ್ಥ ಮಾಡಿಕೊಂಡಿದ್ದಕ್ಕೆ ಆರ್‌ಸಿಬಿಗೆ ಧನ್ಯವಾದಗಳು. ಇಲ್ಲ, ನಾನು ನಿವೃತ್ತಿಯಾಗಿಲ್ಲ,' ಎಂದು ಸ್ಟೇನ್ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಟೀಮ್ ಇಂಡಿಯಾ ಆಟಗಾರರಿಗೆ ಭಾರತೀಯ ಅಭಿಮಾನಿಯಿಂದ ಕಂಟಕ!ಟೀಮ್ ಇಂಡಿಯಾ ಆಟಗಾರರಿಗೆ ಭಾರತೀಯ ಅಭಿಮಾನಿಯಿಂದ ಕಂಟಕ!

2020ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಒಂದೆರಡು ಪಂದ್ಯಗಳಲ್ಲಿ ಆಡಿದ್ದ ಸ್ಟೇನ್ ಹೆಚ್ಚು ರನ್‌ ನೀಡಿದ್ದರು. ಗಮನಾರ್ಹ ಅನ್ನುವಂತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಸ್ಟೇನ್‌ಗೆ ಅವಕಾಶ ನೀಡಿರಲಿಲ್ಲ. ಗಾಯದಿಂದಾಗಿ ಸ್ಟೇನ್ ಹೆಚ್ಚು ಕಾಲ ದಕ್ಷಿಣ ಆಫ್ರಿಕಾ ತಂಡದಿಂದ ಹೊರಗೆ ಉಳಿದಿದ್ದರು. ಆದರೂ ಸ್ಟೇನ್ 93 ಟೆಸ್ಟ್ ಪಂದ್ಯಗಳಲ್ಲಿ 439, 125 ಏಕದಿನ ಪಂದ್ಯಗಳಲ್ಲಿ 196, 47 ಟಿ20ಐಗಳಲ್ಲಿ 64 ವಿಕೆಟ್ ಪಡೆದಿದ್ದಾರೆ.

Story first published: Saturday, January 2, 2021, 20:14 [IST]
Other articles published on Jan 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X