ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತಿ ವೇಗವಾಗಿ ಬಾಲ್ ಮಾಡಿರುವ ವಿಶ್ವದ ಟಾಪ್ 5 ಸ್ಪಿನ್ನರ್‌ಗಳು

ಸ್ಪಿನ್ನರ್‌ಗಳು ಸಹಜವಾಗಿ ವೇಗದ ಬೌಲಿಂಗ್ ಮಾಡಲ್ಲ. ಅದು ಅವರ ಪ್ರವೃತ್ತಿಯೂ ಅಲ್ಲ. ಸ್ಪಿನ್ ಮಾಡಲು ಹೆಚ್ಚು ಗಮನ ಕೊಡ್ತಾರೆ. ಅದೇ ಕಾರಣದಿಂದ ಶೇನ್ ವಾರ್ನ್, ಅನಿಲ್ ಕುಂಬ್ಳೆ, ಮುತ್ತಯ್ಯ ಮುರಳೀಧರನ್, ಸಕ್ಲೈನ್ ಮುಷ್ತಾಕ್ ಅಂತಹ ಬೌಲರ್‌ಗಳು ವಿಶ್ವ ಕ್ರಿಕೆಟ್‌ನಲ್ಲಿ ಶ್ರೇಷ್ಠ ಸ್ಪಿನ್ನರ್‌ಗಳಾಗಿ ಉಳಿದುಕೊಂಡಿರುವುದು.

ಆದ್ರೆ, ಸ್ಪಿನ್ನರ್‌ಗಳು ಸಹ ವೇಗದ ಬೌಲ್ ಎಸೆದು ದಾಖಲೆ ಬರೆದಿದ್ದಾರೆ. ಸಾಮಾನ್ಯವಾಗಿ ಕಿ.ಮೀಗೆ 80 ರಿಂದ 90ರ ಆಸುಪಾಸಿನಲ್ಲಿ ಬೌಲ್ ಮಾಡುವ ಸ್ಪಿನ್ನರ್‌ಗಳು ನೂರಕ್ಕಿಂತ ಹೆಚ್ಚು ವೇಗದಲ್ಲಿ ಬಾಲ್ ಎಸೆದಿರುವುದು ವರದಿಯಾಗಿದೆ.

ಐಪಿಎಲ್: ಅತಿ ಹೆಚ್ಚು ರನ್ ಗಳಿಕೆಯಲ್ಲಿ ರೋಹಿತ್ ಹಿಂದಿಕ್ಕಿದ ಧವನ್ ಐಪಿಎಲ್: ಅತಿ ಹೆಚ್ಚು ರನ್ ಗಳಿಕೆಯಲ್ಲಿ ರೋಹಿತ್ ಹಿಂದಿಕ್ಕಿದ ಧವನ್

ಹಾಗಾದ್ರೆ, ವಿಶ್ವ ಕ್ರಿಕೆಟ್‌ನಲ್ಲಿ ಅತಿ ವೇಗದ ಬೌಲಿಂಗ್ ಮಾಡಿರುವ ಸ್ಪಿನ್ನರ್ ಯಾರು? ಯಾವ ದೇಶದ ಸ್ಪಿನ್ನರ್‌ಗಳು ಈ ದಾಖಲೆಯನ್ನು ಬರೆದಿದ್ದಾರೆ? ಮುಂದೆ ಓದಿ....

ಪಾಕಿಸ್ತಾನದ ಶಾದಾಬ್ ಖಾನ್

ಪಾಕಿಸ್ತಾನದ ಶಾದಾಬ್ ಖಾನ್

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದ ಶಾದಾಬ್ ಖಾನ್ ಅತಿ ವೇಗವಾಗಿ ಬೌಲಿಂಗ್ ಮಾಡಿರುವ ವಿಶ್ವದ ಐದನೇ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ವಿರುದ್ಧ 111 ಕಿ.ಮೀ (111 KMPH) ವೇಗದಲ್ಲಿ ಬೌಲ್ ಮಾಡಿದ್ದಾರೆ. ಇದು ಐದನೇ ವೇಗದ ಸ್ಪಿನ್ ಬಾಲ್.

ಮುಂಬೈ ಇಂಡಿಯನ್ಸ್ ಕ್ರುನಾಲ್ ಪಾಂಡ್ಯ

ಮುಂಬೈ ಇಂಡಿಯನ್ಸ್ ಕ್ರುನಾಲ್ ಪಾಂಡ್ಯ

ಮುಂಬೈ ಇಂಡಿಯನ್ಸ್ ತಂಡದ ಸ್ಪಿನ್ ಬೌಲರ್ ಕ್ರುನಾಲ್ ಪಾಂಡ್ಯ ಡೆಲ್ಲಿ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 112.5 ಕಿ.ಮೀ (112.5 KMPH) ವೇಗದಲ್ಲಿ ಬೌಲ್ ಮಾಡಿದ್ದಾರೆ. ಆಸ್ಟ್ರೇಲಿಯಾ ಮಾರ್ಕಸ್ ಸ್ಟೈನಿಸ್‌ಗೆ ಈ ಎಸೆತ ಹಾಕಿದ್ದರು. ಇದು ನಾಲ್ಕನೇ ವೇಗದ ಸ್ಪಿನ್ ಬಾಲ್.

ಮಾಜಿ ಕ್ರಿಕೆಟರ್ ಟಾಮ್ ಮೂಡಿ ಆಯ್ಕೆಯ ಐಪಿಎಲ್ ತಂಡ ಹೀಗಿದೆ

ಐಪಿಎಲ್‌ನಲ್ಲಿ ಪಿಯೂಷ್ ಚಾವ್ಲಾ

ಐಪಿಎಲ್‌ನಲ್ಲಿ ಪಿಯೂಷ್ ಚಾವ್ಲಾ

ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದ ಸಂದರ್ಭದಲ್ಲಿ ಭಾರತೀಯ ಬೌಲರ್ ಪಿಯೂಷ್ ಚಾವ್ಲಾ 117 ಕಿ.ಮೀ (117 KMPH) ವೇಗದಲ್ಲಿ ಬೌಲ್ ಮಾಡಿದ್ದರು. ಅದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯ. ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಬ್ಯಾಟಿಂಗ್ ಮಾಡಿದ್ದರು. ಇದು ಮೂರನೇ ವೇಗದ ಸ್ಪಿನ್ ಬಾಲ್.

ಭಾರತೀಯ ಬೌಲರ್ ಅನಿಲ್ ಕುಂಬ್ಳೆ

ಭಾರತೀಯ ಬೌಲರ್ ಅನಿಲ್ ಕುಂಬ್ಳೆ

ಅದು ಇಂಗ್ಲೆಂಡ್ ವಿರುದ್ಧ ಪಂದ್ಯ. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಮಾರ್ಕಸ್ ಟ್ರೆಸ್ಕೊಥಿಕ್ ವಿರುದ್ಧ ಭಾರತೀಯ ದಿಗ್ಗಜ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ 118 ಕಿ.ಮೀ (118 KMPH) ವೇಗದಲ್ಲಿ ಬೌಲ್ ಮಾಡಿದ್ದರು. ಇದು ಅನಿಲ್ ಕುಂಬ್ಳೆಯ ವೇಗದ ಬೌಲ್.

ಪಾಕಿಸ್ತಾನದ ಅಫ್ರಿದಿ

ಪಾಕಿಸ್ತಾನದ ಅಫ್ರಿದಿ

ವಿಶ್ವ ಕ್ರಿಕೆಟ್‌ನಲ್ಲಿ ವೇಗದ ಸ್ಪಿನ್ ಬೌಲಿಂಗ್ ಮಾಡಿರುವುದು ಪಾಕಿಸ್ತಾನದ ದಿಗ್ಗಜ ಆಟಗಾರ ಶಾಹೀದ್ ಅಫ್ರಿದಿ. ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕಿವಿಸ್ ಆಟಗಾರ ಥಿಮ್ ಸೌಥಿಗೆ 134 ಕಿ.ಮೀ (134 KMPH) ವೇಗದಲ್ಲಿ ಸ್ಪಿನ್ ಬೌಲ್ ಮಾಡಿದ್ದರು. ಇದು ಜಗತ್ತಿನ ಅತಿ ವೇಗದ ಸ್ಪಿನ್ ಬೌಲ್ ಆಗಿದೆ.

Story first published: Monday, November 9, 2020, 14:49 [IST]
Other articles published on Nov 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X