ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಪರ ತ್ವರಿತ ಗತಿ ಶತಕ: 3ನೇ ಸ್ಥಾನದಲ್ಲಿ ಸ್ಮಿತ್

Fastest ODI Centuries For Australia List: Steven Smith scored third fastest ODI century

ಸುಮಾರು 268 ದಿನಗಳ ನಂತರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಬಂದ ಟೀಂ ಇಂಡಿಯಾಕ್ಕೆ ಆಸ್ಟ್ರೇಲಿಯಾ ತಂಡ ಭರ್ಜರಿ ಬ್ಯಾಟಿಂಗ್ ಮೂಲಕ ಸ್ವಾಗತ ಕೋರಿದೆ. ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿ ಬೃಹತ್ ಮೊತ್ತ ಕಲೆ ಹಾಕಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭಿಕ ಆಟಗಾರ ಆರೋನ್ ಫಿಂಚ್ ಅಲ್ಲದೆ ಸ್ಟೀವ್ ಸ್ಮಿತ್ ಕೂಡಾ ಭರ್ಜರಿ ಶತಕ ಸಿಡಿಸಿದರು. ಕೇವಲ 66 ಎಸೆತಗಳಲ್ಲಿ 105ರನ್ ಚೆಚ್ಚಿದ ಸ್ಮಿತ್ 10 ಬೌಂಡರಿ, 4 ಸಿಕ್ಸ್ ಸಿಡಿಸಿದರು. ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 374/6 ಕಲೆ ಹಾಕಿತು.

ಮೊದಲ ವಿಕೆಟ್ ಜೊತೆಯಾಟದಲ್ಲೇ 156ರನ್ ಬಂದಿದ್ದರಿಂದ 28ನೇ ಓವರ್ ನಲ್ಲಿ ಆಡಲು ಬಂದ ಸ್ಮಿತ್ ಅವರು 15ರನ್ ಗಳಿಸಿದ್ದ ಎಲ್ ಬಿ ಬಲೆಗೆ ಬೀಳುವುದರಲ್ಲಿ ಸ್ವಲ್ಪದರಲಿ ತಪ್ಪಿಸಿಕೊಂಡರು. ಜೀವದಾನದ ಲಾಭ ಪಡೆದ ಸ್ಮಿತ್, ನವದೀಪ್ ಸೈನಿ, ಬೂಮ್ರಾ ಎಸೆತಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದರು. 2ನೇ ವಿಕೆಟ್ ಜೊತೆಯಾಟದಲ್ಲಿ ನಾಯಕ ಫಿಂಚ್ ಜೊತೆಗೆ 108ರನ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಜೊತೆ 57ರನ್ ಕಲೆ ಹಾಕಿದರು. ಮ್ಯಾಕ್ಸ್ ವೆಲ್ 19 ಎಸೆತಗಳಲ್ಲಿ 45ರನ್ ಚೆಚ್ಚಿದ್ದನ್ನು ಮರೆಯುವಂತಿಲ್ಲ

ಸ್ಮಿತ್ ಸಾಧನೆ
ಸಿಡ್ನಿ ಮೈದಾನದಲ್ಲಿ ಸ್ಮಿತ್ ಅವರು ಶತಕ ಬಾರಿಸಿದ್ದು ,ಇದು 10ನೇ ಶತಕವಾಗಿದೆ. ಆಸ್ಟ್ರೇಲಿಯಾ ಪರ ಅತಿ ವೇಗವಾಗಿ ಶತಕ ಸಿಡಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ.

1. ಗ್ಲೆನ್ ಮ್ಯಾಕ್ಸ್ ವೆಲ್, 51 ಎಸೆತಗಳಲ್ಲಿ, ಶ್ರೀಲಂಕಾ ವಿರುದ್ಧ ಸಿಡ್ನಿ, 2015.
2. ಜೇಮ್ಸ್ ಫಾಲ್ಕ್ನರ್: 57 ಎಸೆತಗಳಲ್ಲಿ, ಭಾರತ ವಿರುದ್ಧ ಬೆಂಗಳೂರು, 2013
3. ಸ್ಟೀವ್ ಸ್ಮಿತ್: 62 ಎಸೆತಗಳಲ್ಲಿಭಾರತ ವಿರುದ್ಧ ಸಿಡ್ನಿ, 2020
4. ಮ್ಯಾಥ್ಯೂ ಹೇಡನ್: 66 ಎಸೆತಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ, ಸೈಂಟ್ ಕಿಟ್ಸ್ 2006
5. ಆಡಂ ಗಿಲ್ ಕ್ರಿಸ್ಟ್: 67 ಎಸೆತಗಳಲ್ಲಿ ಶ್ರೀಲಂಕಾ ವಿರುದ್ಧ ಗಬ್ಬಾ, 2005

Story first published: Friday, November 27, 2020, 16:58 [IST]
Other articles published on Nov 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X