ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ಯಾಚಿಂಗ್ ಅಭ್ಯಾಸಕ್ಕೆ ಅಪ್ಪ ಸಹಾಯ ಮಾಡುತ್ತಿದ್ದಾರೆ: ವೃದ್ಧಿಮಾನ್ ಸಹಾ

Father Is Helping Me With Catching Practice Amid Lockdown: Wriddhiman Saha

ಕೋಲ್ಕತ್ತಾ, ಜೂನ್ 5: ದಕ್ಷಿಣ ಕೋಲ್ಕತ್ತಾದಲ್ಲಿರುವ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರ ಮನೆಯಲ್ಲಿ ಇಬ್ಬರು ಅಪ್ಪಂದಿರಿದ್ದಾರೆ. ಒಂದು, ಇತ್ತೀಚೆಗಷ್ಟೇ ಗಂಡು ಮಗು ಅನ್ವೆಗೆ ಅಪ್ಪನಾಗಿರುವ ವೃದ್ಧಿಮಾನ್ ಸಹಾ ಮತ್ತು ಸಹಾ ತಂದೆ ಪ್ರಶಾಂತ. ಇಬ್ಬರೂ ಸದ್ಯ ಹೆತ್ತವರ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬ್ಯಾನ್ ಬಳಿಕ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಜನಪ್ರಿಯ 5 ಕ್ರಿಕೆಟಿಗರುಬ್ಯಾನ್ ಬಳಿಕ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಜನಪ್ರಿಯ 5 ಕ್ರಿಕೆಟಿಗರು

ಭಾರತದ ಕೌಶಲಭರಿತ ವಿಕೆಟ್ ಕೀಪರ್‌ಗಳಲ್ಲಿ ಗುರುತಿಸಿಕೊಂಡಿರುವ ವೃದ್ಧಿಮಾನ್ ಸಹಾ, ಕೊರೊನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ತನ್ನ ತಂದೆಯ ಸಹಾಯದೊಂದಿಗೆ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕೋಲ್ಕತ್ತಾದ ಭವ್ಯ ಅಪಾರ್ಟ್‌ಮೆಂಟ್ 'ಸೌತ್ ಸಿಟಿ'ಯಲ್ಲಿ ಸದ್ಯ ಸಹಾ ಕುಟುಂಬ ವಾಸವಿದೆ.

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯೋದು ವಿದೇಶದಲ್ಲಿ?!13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯೋದು ವಿದೇಶದಲ್ಲಿ?!

'ಈ ಅಪಾರ್ಟ್‌ಮೆಂಟ್‌ನಲ್ಲಿದ್ದುಕೊಂಡು ಯಾವೆಲ್ಲ ದೈಹಿಕ ಅಭ್ಯಾಸಗಳನ್ನು ಮಾಡಲಾಗುತ್ತದೋ ಅವೆಲ್ಲವನ್ನೂ ನಾನು ಮಾಡುತ್ತಿದ್ದೇನೆ. ಕೀಪರ್‌ಗಳಿಗೆ ಕೈ ಮತ್ತು ಕಣ್ಣಿನ ಚಲನೆ, ಎರಡರ ಕೋಆರ್ಡಿನೇಶನ್ ಬಹುಮುಖ್ಯವಾಗಿರುತ್ತದೆ. ಹೀಗಾಗಿ ಸಾಫ್ಟ್‌ಬಾಲನ್ನು ಗೋಡೆಗೆ ಎಸೆದು ನಾನು ಕ್ಯಾಚಿಂಗ್ ಅಭ್ಯಾಸ ನಡೆಸುತ್ತಿದ್ದೇನೆ,' ಎಂದು ಪಿಟಿಐ ಜೊತೆ ಮಾತನಾಡಿದ ವೃದ್ಧಿಮಾನ್ ಸಹಾ ಹೇಳಿಕೊಂಡಿದ್ದಾರೆ.

ಯುವರಾಜ್ ಮೇಲೆ ಜಾತಿ ನಿಂದನೆ ಆರೋಪ, ಪೊಲೀಸರಿಗೆ ದೂರುಯುವರಾಜ್ ಮೇಲೆ ಜಾತಿ ನಿಂದನೆ ಆರೋಪ, ಪೊಲೀಸರಿಗೆ ದೂರು

'ಈ ಸಮಯದಲ್ಲಿ ಫ್ಲ್ಯಾಟ್‌ನ ಒಳಗೆ ನನಗೆ ನನ್ನ ತಂದೆ ಪ್ರಶಾಂತ ಸಹಾ ಕೂಡ ಕ್ಯಾಚಿಂಗ್ ಅಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾರೆ,' ಎಂದು ಸಹಾ ಹೇಳಿದರು. 'ಫ್ಲ್ಯಾಟ್‌ನ ಒಳಗೆ ನಿಮಗೆ ಕ್ಯಾಚಿಂಗ್ ಅಭ್ಯಾಸ ನಡೆಸುವಷ್ಟು ಜಾಗವಿದೆಯೇ ಎಂದು ಕೇಳಿದಾಗ, 'ಹೌದು, ನಾನು ಎರಡೂ ಬದಿಗೂ ಜಿಗಿದು ಕ್ಯಾಚ್ ಹಿಡಿಯಬಲ್ಲೆ. ಅಷ್ಟು ಜಾಗವಿದೆ,' ಎಂದು ಸಹಾ ಉತ್ತರಿಸಿದ್ದಾರೆ.

Story first published: Friday, June 5, 2020, 16:43 [IST]
Other articles published on Jun 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X