ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐತಿಹಾಸಿಕ ದಾಖಲೆ ನಿರ್ಮಿಸಿದ ಪಾಕಿಸ್ತಾನ ಕ್ರಿಕೆಟರ್ ಫವಾದ್ ಆಲಂ!

Fawad Alam is the only player in test cricket to score 2nd century after 11 years

ಮೌಂಟ್‌ಮೌಂಗನ್ಯುಯಿ: ಪಾಕಿಸ್ತಾನ ಕ್ರಿಕೆಟ್ ತಂಡದ ಫವಾದ್ ಆಲಂ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿ ಮತ್ತೆ 11 ವರ್ಷಗಳ ಬಳಿಕ ದ್ವಿತೀಯ ಶತಕ ಬಾರಿಸಿದ ಏಕಮಾತ್ರ ಪಾಕ್‌ ಕ್ರಿಕೆಟರ್ ಆಗಿ ಆಲಂ ಗುರುತಿಸಿಕೊಂಡಿದ್ದಾರೆ. ಅಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿ ಸುದೀರ್ಘ ಕಾಲದ ಬಳಿಕ ಟೆಸ್ಟ್ ಶತಕ ಬಾರಿಸಿದ ಟಾಪ್ ಮೂರನೇ ಬ್ಯಾಟ್ಸ್‌ಮನ್‌ ಆಗಿ ಆಲಂ ಗಮನ ಸೆಳೆದಿದ್ದಾರೆ.

ನಿಮ್ಮನ್ನು ಬೆರಗುಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!ನಿಮ್ಮನ್ನು ಬೆರಗುಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!

ಬುಧವಾರ (ಡಿಸೆಂಬರ್ 30) ನ್ಯೂಜಿಲೆಂಡ್‌ನ ಮೌಂಟ್ ಮೌಂಗನ್ಯುಯಿಯಲ್ಲಿ ಮುಕ್ತಾಯಗೊಂಡ ಪಾಕಿಸ್ತಾನ-ನ್ಯೂಜಿಲೆಂಡ್ ಮೊದಲನೇ ಟೆಸ್ಟ್‌ನಲ್ಲಿ ಆಲಂ ಈ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಮೊದಲನೇ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಲಂ 102 ರನ್ ಬಾರಿಸಿದ್ದರು.

ಯುವರಾಜ್ ಸಿಂಗ್ ಕಮ್‌ಬ್ಯಾಕ್‌ ಆಲೋಚನೆಗೆ ತಣ್ಣೀರೆರಚಿದ ಬಿಸಿಸಿಐ!ಯುವರಾಜ್ ಸಿಂಗ್ ಕಮ್‌ಬ್ಯಾಕ್‌ ಆಲೋಚನೆಗೆ ತಣ್ಣೀರೆರಚಿದ ಬಿಸಿಸಿಐ!

35ರ ಹರೆಯದ ಆಲಂ 6 ಟೆಸ್ಟ್ ಪಂದ್ಯಗಳಲ್ಲಿ 382 ರನ್, 38 ಏಕದಿನ ಪಂದ್ಯಗಳಲ್ಲಿ 966 ರನ್, 24 ಟಿ20ಐ ಪಂದ್ಯಗಳಲ್ಲಿ 194 ರನ್ ಬಾರಿಸಿದ್ದಾರೆ.

ಕಡೇಯ ಶತಕ ಬಾರಿಸಿದ್ದು

ಆಲಂ ಅವರು 2009ರಲ್ಲಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದರು. ಆವತ್ತು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಫವಾದ್, 168 ರನ್ ಬಾರಿಸಿದ್ದರು. ಅದಾಗಿ ದ್ವಿತೀಯ ಟೆಸ್ಟ್ ಶತಕ ಬಾರಿಸಿದ್ದು ನ್ಯೂಜಿಲೆಂಡ್ ವಿರುದ್ಧವೆ. ಅಂದರೆ ಬರೋಬ್ಬರಿ 11 ವರ್ಷಗಳ ಬಳಿಕ ಆಲಂ ಟೆಸ್ಟ್ ಶತಕ ಬಾರಿಸಿದ್ದಾರೆ.

ದೀರ್ಘ ಕಾಲದ ಬಳಿಕ ಶತಕ ಬಾರಿಸಿದವರು

ದೀರ್ಘ ಕಾಲದ ಬಳಿಕ ಶತಕ ಬಾರಿಸಿದವರು

ದೀರ್ಘಕಾಲದ ಬಳಿಕ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ವಾರೆನ್ ಬಾರ್ಡ್ಸ್ಲೆ (5093 ದಿನಗಳು) ಇದ್ದಾರೆ. ಅನಂತರದ ಸ್ಥಾನಗಳಲ್ಲಿ ಭಾರತದ ಮುಷ್ತಾಕ್ ಅಲಿ (4544), ಫವಾದ್ ಆಲಂ (4218), ಇಂಗ್ಲೆಂಡ್‌ನ ಫ್ರ್ಯಾಂಕ್‌ ವೂಲ್ಲಿ (3999), ಉಪುಲ್ ತರಂಗಾ (3888) ಇದ್ದಾರೆ.

ವ್ಯರ್ಥವಾದ ವಿಶೇಷ ಶತಕ

ವ್ಯರ್ಥವಾದ ವಿಶೇಷ ಶತಕ

ಆಲಂ ವಿಶೇಷ ಶತಕದ ಹೊರತಾಗಿಯೂ ಪಾಕ್ ತಂಡ 101 ರನ್ ಸೋಲನುಭವಿಸಿದೆ. ನಾಯಕ ಕೇನ್ ವಿಲಿಯಮ್ಸನ್ 129+21, ಟಾಮ್ ಲ್ಯಾಥಮ್ 53+4, ರಾಸ್ ಟೇಲರ್ 70+12, ಹೆನ್ರಿ ನಿಕೋಲ್ಸ್ 56+11, ಬಿಜೆ ವೇಟಿಂಗ್ 5+73 ರನ್‌ ಕೊಡುಗೆಯಿಂದ ಕಿವೀಸ್ ಪಂದ್ಯ ಗೆದ್ದು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ.

Story first published: Wednesday, December 30, 2020, 19:13 [IST]
Other articles published on Dec 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X