ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಭಾರತದಲ್ಲಿ ನಡೆಯುವ ಸಂತಸದ ಮಧ್ಯೆಯೂ ಸಣ್ಣ ವಿಷಾದವಿದೆ: ಹರ್ಭಜನ್ ಸಿಂಗ್

Feeling good that IPL is happening in India but small regrets: Harbhajan singh

ಐಪಿಎಲ್‌ 14ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು ಫ್ರಾಂಚೈಸಿಗಳ ಹಾಗೂ ಆಟಗಾರರ ಸಿದ್ಧತೆಗಳು ಭರದಿಂದ ಸಾಗಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೀಮಿತ ಓವರ್‌ಗಳ ಸರಣಿ ಅಂತ್ಯವಾದ ಬಳಿಕ ಏಪ್ರಿಲ್ 9 ರಿಂದ ಈ ವರ್ಣರಂಚಿತ ಟೂರ್ನಿಗೆ ಚಾಲನೆ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಐಪಿಎಲ್ ಭಾರತದಲ್ಲೇ ನಡೆಯಲು ಸಾಧ್ಯವಾಗಿದ್ದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಒಂದು ಕಾರಣಕ್ಕೆ ನನಗೆ ವಿಷಾದವಿದೆ ಎಂಬ ಮಾತನ್ನೂ ಹೇಳಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಬಳಿಕ ಚೆನ್ನೈನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 2 ಕೋಟಿ ಮೂಲ ಬೆಲೆಗೆ ಹರ್ಭಜನ್ ಸಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದಾರೆ. ಆದರೆ ಈ ಬಾರಿಯ ಟೂರ್ನಿಯಲ್ಲಿ ಯಾವುದೇ ತಂಡಗಳು ಕೂಡ ತವರು ಅಂಗಳದಲ್ಲಿ ಆಡುತ್ತಿಲ್ಲ. ಹೀಗಾಗಿ ಕೆಕೆಆರ್ ತಂಡ ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದೆ.

ಭಾರತ vs ಇಂಗ್ಲೆಂಡ್: ಮೊದಲ ಪಂದ್ಯದ ಸೋಲಿಗೆ ಕಾರಣ ಹೇಳಿದ ಇರ್ಫಾನ್ ಪಠಾಣ್ಭಾರತ vs ಇಂಗ್ಲೆಂಡ್: ಮೊದಲ ಪಂದ್ಯದ ಸೋಲಿಗೆ ಕಾರಣ ಹೇಳಿದ ಇರ್ಫಾನ್ ಪಠಾಣ್

ಹರ್ಭಜನ್ ವಿಷಾದಕ್ಕೆ ಕಾರಣ

ಹರ್ಭಜನ್ ವಿಷಾದಕ್ಕೆ ಕಾರಣ

ಈ ಸಂಗತಿ ಹರ್ಭಜನ್ ಸಿಂಗ್ ಬೇಸರಕ್ಕೆ ಕಾರಣವಾಗಿದೆ. ಕೆಕೆಆರ್ ತಂಡದ ಪರವಾಗಿ ಆಡುತ್ತಿದ್ದರೂ ತನ್ನ ಫೇವರೀಟ್ ಕ್ರೀಡಾಂಗಣವಾದ ಈಡನ್ ಗಾರ್ಡನ್‌ನಲ್ಲಿ ಆಡುವ ಅವಕಾಶ ಇಲ್ಲದಿರುವ ಬೇಸರವನ್ನು ಹರ್ಭಜನ್ ಸಿಂಗ್ ವ್ಯಕ್ತಪಡಿಸಿದ್ದಾರೆ. ಈಡನ್ ಗಾರ್ಡನ್‌ನಲ್ಲಿ ಆಡುವ ಅವಕಾಶವಿದ್ದರೆ ನಾನು ಮತ್ತಷ್ಟು ಸಂತಸಗೊಂಡಿರುತ್ತಿದ್ದೆ ಎಂದಿದ್ದಾರೆ ಹರ್ಭಜನ್ ಸಿಂಗ್

ಸ್ಮರಣೀಯ ನೆನಪುಗಳಿವೆ

ಸ್ಮರಣೀಯ ನೆನಪುಗಳಿವೆ

"ನಾನು ಈಡನ್ ಗಾರ್ಡನ್ ಅಂಗಳದಲ್ಲಿ ಸಾಕಷ್ಟು ಅತ್ಯುತ್ತಮ ನೆನಪುಗಳನ್ನು ಹೊಂದಿದ್ದೇನೆ. ಟೆಸ್ಟ್ ಕ್ರಿಕೆಟ್, ಏಕದಿನ ಕ್ರಿಕೆಟ್ ಸಹಿತ ಈಡನ್ ಗಾರ್ಡನ್ ಅಂಗಳದಲ್ಲಿ ಆಡಿರುವ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಸ್ಮರಣೀಯ ಕ್ಷಣಗಳಿವೆ. ಐಪಿಎಲ್‌ನಲ್ಲಿಯೂ ಮುಂಬೈ ಇಂಡಿಯನ್ಸ್ ಪರವಾಗಿ ಎರಡು ಟ್ರೋಫಿಗಳನ್ನು ಅಲ್ಲಿಯೇ ಗೆದ್ದಿದ್ದೇವೆ. ನನಗೆ ಅದು ವಿಶೇಷವಾದ ಅಂಗಳ. ಅಲ್ಲಿ ಈ ಬಾರಿ ನನಗೆ ಪಂದ್ಯಗಳು ಇಲ್ಲ ಎಂಬ ಸಣ್ಣ ವಿಷಾದ ನನ್ನನ್ನು ಕಾಡುತ್ತಿದೆ" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಭಾರತದಲ್ಲಿ ನಡೆಯುವ ಸಂಭ್ರಮ

ಭಾರತದಲ್ಲಿ ನಡೆಯುವ ಸಂಭ್ರಮ

"ಈ ಬಾರಿಯ ಪಂದ್ಯಗಳು ಅಹ್ಮದಾಬಾದ್ ಆಗಿರಲಿ, ಬೆಂಗಳೂರು, ಚೆನ್ನೈ, ಅಥವಾ ಮುಂಬೈ ಎಲ್ಲೇ ಆಗಿರಲಿ, ಭಾರತದಲ್ಲಿಯೇ ನಡೆಯುತ್ತಿದೆ ಎಂಬ ಸಂತಸ ನನ್ನಲ್ಲಿದೆ. ಈ ಬಾರಿ ನಾವು ದುಬೈ ಅಥವಾ ಬೇರೆ ಯಾವುದೇ ಸ್ಥಳಕ್ಕೆ ತೆರಳಬೇಕಿಲ್ಲ. ಅದಕ್ಕಾಗಿ ನಾನು ಕಾಯುತ್ತಿದ್ದೇನೆ. ನೀವೋರ್ವ ಪ್ರೇಕ್ಷಕನಾಗಿರಿ ಅಥವಾ ಆಟಗಾರನಾಗಿರಿ ಎಲ್ಲರೂ ಕಾಯುವಂತಾ ಟೂರ್ನಿ ಐಪಿಎಲ್. ಕೇವಲ ಐಪಿಎಲ್‌ನಲ್ಲಿ ಮಾತ್ರವೇ ಆಡುತ್ತಿರುವ ನನ್ನಂತಾ ಆಟಗಾರನಿಗೆ ಈ ಮೂಲಕ ಆಡುವ ಬಯಕೆ ಈಡೇರಲಿದೆ" ಎಂದು ಹರ್ಭಜನ್ ಸಿಂಗ್ ಸ್ಟಾರ್‌ಸ್ಪೋರ್ಟ್ಸ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

Story first published: Saturday, March 13, 2021, 17:55 [IST]
Other articles published on Mar 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X