ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡಿಯಾ ಪಾಕಿಸ್ತಾನ ಪಂದ್ಯದಂತಿತ್ತು ಆದರೆ.. ವಿಪರ್ಯಾಸದ ಸಂದರ್ಭವನ್ನು ನೆನಪಿಸಿದ ಭಜ್ಜಿ

Felt Strange Wearing The Csk Jersey At First: Harbhajan Singh

ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಐಪಿಎಲ್ ಆರಂಭದಿಂದಲೂ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಿದ್ದವರು. ಸುಮಾರು ಐಪಿಎಲ್‌ನಲ್ಲಿ ಹತ್ತು ವರ್ಷಗಳ ಸುದೀರ್ಘ ಕಾಲ ಒಂದು ಫ್ರಾಂಚೈಸಿ ಪರವಾಗಿ ಆಡಿದ್ದ ಬೆರಳೆಣಿಕೆಯ ಆಟಗಾರರಲ್ಲಿ ಹರ್ಭಜನ್ ಕೂಡ ಒಬ್ಬರು. ಇಂತಾ ಭಜ್ಜಿ 2018ರಲ್ಲಿ ವಿಚಿತ್ರ ಸನ್ನಿವೇಶದಲ್ಲಿ ಸಿಲುಕಿಕೊಂಡಿದ್ದದ್ದನ್ನು ನೆನಪಿಸಿಕೊಂಡಿದ್ದಾರೆ.

ಲೀಗ್ ಟೂರ್ನಿಗಳಂದರೆ ಹಾಗೇ. ಒಂದು ವರ್ಷ ಒಂದು ತಂಡದ ಪರವಾಗಿ ಆಡಿದರೆ ಮುಂದಿನ ವರ್ಷ ಇನ್ನೊಂದು ತಂಡದ ಪರವಾಗಿ ಆಡಬೇಕಾಗಬಹುದು. ಇದಕ್ಕೆ ಆಟಗಾರರೂ ಮಾನಸಿಕವಾಗಿ ಸಿದ್ದರಿರುತ್ತಾರೆ. ಆದರೆ ಭಜ್ಜಿ ವಿಚಾರದಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿತ್ತು. ಒಂದು ದಶಕದ ಕಾಲ ಭಾರತ ಪಾಕಿಸ್ತಾನ ಮುಖಾಮುಖಿಯ ರೀತಿ ಕಾದಾಡಿದ ತಂಡಕ್ಕೆ ಭಜ್ಜಿ ಸೇರ್ಪಡೆಗೊಂಡಿದ್ದರು.

ಈ ವಿಚಾರದ ಬಗ್ಗೆ ಸ್ವತಃ ಹರ್ಭಜನ್ ಸಿಂಗ್ ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಜರ್ಸಿ ತೊಟ್ಟಾಗ ಆದ ಆನುಭವವನ್ನು ಅವರು ಹಂಚಿಕೊಂಡಿದ್ದಾರೆ.

ಮುಂಬೈ ಮತ್ತು ಚೆನ್ನೈ ಪಂದ್ಯ ಅಂದ್ರೆ ಇಂಡೋ- ಪಾಕ್ ಮ್ಯಾಚ್ ಇದ್ದಂತೆ

ಮುಂಬೈ ಮತ್ತು ಚೆನ್ನೈ ಪಂದ್ಯ ಅಂದ್ರೆ ಇಂಡೋ- ಪಾಕ್ ಮ್ಯಾಚ್ ಇದ್ದಂತೆ

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಲೈವ್ ಸಂವಾದದಲ್ಲಿ ಹರ್ಭಜನ್ ಸಿಂಗ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಮಧ್ಯೆ ಸಾಕಷ್ಟು ಪೈಪೋಟಿ ಇತ್ತು. ಚೆನ್ನೈ ಮುಂಬೈ ಪಂದ್ಯವೆಂದರೆ ಇಂಡೋ-ಪಾಕ್ ಪಂದ್ಯದಂತಿತ್ತು ಎಂದು ಹರ್ಭಜನ್ ಸಿಂಗ್ ಹೇಳಿಕೊಂಡಿದ್ದಾರೆ.

ವಿಪರ್ಯಾಸ ಅನ್ನಿಸಿಬಿಟ್ಟಿತ್ತು

ವಿಪರ್ಯಾಸ ಅನ್ನಿಸಿಬಿಟ್ಟಿತ್ತು

"ನಾನು ಮುಂಬೈ ಬಿಟ್ಟು ಚೆನ್ನೈ ತಂಡದ ಪಾಲಾಗಿದ್ದೆ. ಮೊದಲ ಸಲ ಎಂತಾ ವಿಪರ್ಯಾಸವಿದು ಎನಿಸಿಬಿಟ್ಟಿತ್ತು. ನನಗೆ ಆಗ ಎನಿದೆಲ್ಲಾ? ಇದೇನು ಕನಸಾ? ಪ್ರತೀ ಬಾರಿ ಸಿಎಸ್‌ಕೆ ವಿರುದ್ಧ ಆಡುವಾಗ ಭಾರತ ಪಾಕಿಸ್ತಾನದ ಪಂದ್ಯದಂತೆ ಭಾಸವಾಗುತ್ತಿತ್ತು. ಒಮ್ಮಿಂದೊಮ್ಮೆಲೆ ನೀಲಿ ಜರ್ಸಿ ಬಿಟ್ಟು ಹಳದಿ ಜರ್ಸಿ ತೊಡಲು ನನಗೆ ತುಂಬಾ ಕಠಿಣವಾಗಿತ್ತು" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಮೊದಲ ಪಂದ್ಯದಲ್ಲಲೇ ಮುಂಬೈ ಎದುರಾಳಿ

ಮೊದಲ ಪಂದ್ಯದಲ್ಲಲೇ ಮುಂಬೈ ಎದುರಾಳಿ

ಅದೃಷ್ಠವಶಾತ್ ಆ ಆವೃತ್ತಿಯ ಮೊದಲ ಪಂದ್ಯವನ್ನು ನಾವು ಮುಂಬೈ ವಿರುದ್ಧವೇ ಆಡಿದ್ದೆವು. ಬೇಗೇ ಮುಂಬೈ ತಂಡವನ್ನು ಎದುರಿಸಿದ್ದು ನನಗೆ ಸಹಕಾರಿಯಾಗಿತ್ತು. ಮೊದಲ ಸೀಸನ್ ಸ್ವಲ್ಪ ಕಠಿಣವಾಗಿತ್ತು ಆದರೆ ಬಳಿಕ ನಾವು ಆ ಟೂರ್ನಿಯನ್ನು ಗೆದ್ದುಕೊಂಡೆವು ಎಂದು 2018ರ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ ಹರ್ಭಜನ್ ಸಿಂಗ್.

ಮತ್ತೆ ಧೋನಿ ನಾಯಕತ್ವದಲ್ಲಿ ಆಡಿದ ಭಜ್ಜಿ

ಮತ್ತೆ ಧೋನಿ ನಾಯಕತ್ವದಲ್ಲಿ ಆಡಿದ ಭಜ್ಜಿ

ಹರ್ಭಜನ್ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗೆದ್ದ ಎರಡು ಮಹತ್ವದ ಐಸಿಸಿ ಟೂರ್ನಿಯ ಭಾಗವಾಗಿದ್ದರು. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಹರ್ಭಜನ್ ಮತ್ತು ಧೋನಿ ಜೊತೆಯಾಗಿದ್ದರು. ಈಗ ಸಿಎಸ್‌ಕೆ ತಂಡದಲ್ಲಿ ಜೊತೆಯಾಗಿ ಕಾಣಿಸಿಕೊಂಡರು.

ಧೋನಿ ನಾಚಿಕೆ ಸ್ವಾಭಾವದವನೆಂದ ಭಜ್ಜಿ

ಧೋನಿ ನಾಚಿಕೆ ಸ್ವಾಭಾವದವನೆಂದ ಭಜ್ಜಿ

ಈ ಸಂದರ್ಭದಲ್ಲಿ ಧೋನಿ ಬಗ್ಗೆಯೂ ಹರ್ಭಜನ್ ಸಿಂಗ್ ಮಾತನಾಡಿದ್ದಾರೆ. ಧೋನಿ ಮೊದಲಿನಿಂದಲೂ ನಾಚಿಕೆ ಸ್ವಭಾವ ಮತ್ತು ಕಡಿಮೆ ಮಾತನಾಡುವ ವ್ಯಕ್ತಿಯಾಗಿದ್ದರು. ಆರಂಭದ ದಿನಗಳಲ್ಲಿ ನಾವೆಲ್ಲಾ ಒಂದೇ ರೂಮಿನಲ್ಲಿ ಕುಳಿತು ಹರಟುತ್ತಿದ್ದರೆ ಧೋನಿ ಅವರ ರೂಮ್ ಬಿಟ್ಟು ಆಚೆ ಬರುತ್ತಿರಲಿಲ್ಲ ಎಂದು ಹರ್ಭಜನ್ ಹೇಳಿಕೊಂಡಿದ್ದಾರೆ.

2008ರ ಆಸಿಸ್ ಸರಣಿ ಬಳಿಕ ಬದಲಾದ ಧೋನಿ

2008ರ ಆಸಿಸ್ ಸರಣಿ ಬಳಿಕ ಬದಲಾದ ಧೋನಿ

ಆಸ್ಟ್ರೇಲಿಯಾ ವಿರುದ್ಧ 2008ರಲ್ಲಿ ಸರಣಿ ನಡೆದಿತ್ತು. ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯ ಎಲ್ಲರನ್ನೂ ಒಂದಾಗಿಸಿತ್ತು. ಆ ಕ್ಷಣಗಳು ತಂಡದಲ್ಲಿ ನಾವೆಲ್ಲಾ ಒಂದೇ ಎಂಬಂತೆ ಮಾಡಿತ್ತು. ಅದಾದ ಬಳಿಕ ಧೋನಿ ಸ್ವಲ್ಪ ಬೆರೆಯಲು ಆರಂಭಿಸಿದರು. ನಮ್ಮೆಲ್ಲರ ಜೊತೆ ಕುಳಿತು ಮಾತನಾಡಲು ಆರಂಭಿಸಿದರು. ಖಂಡಿತಾ ವಾಗಿಯೂ ಆಗ ಅವರ ಕಿರಿಯ ಆಟಗಾರನಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಸಿಡ್ನಿ ಟೆಸ್ಟ್‌ನಲ್ಲಿನ ಮಂಕಿ ಗೇಟ್ ಪ್ರಕರಣದ ಸಂದರ್ಭವನ್ನು ಪ್ರಸ್ತಾಪಿಸದೆಯೇ ಹೇಳಿದ್ದರು.

Story first published: Thursday, May 7, 2020, 19:18 [IST]
Other articles published on May 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X