ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಅರುಣ್ ಜೇಟ್ಲಿ ಹೆಸರು

ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಅರುಣ್ ಜೇಟ್ಲಿ ಹೆಸರು | Oneindia Kannada
Feroz Shah Kotla renamed as Arun Jaitley Stadium; stand to be named after Virat Kohli

ನವದೆಹಲಿ, ಆಗಸ್ಟ್ 27: ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದ ಹೆಸರು ಬದಲಾಯಿಸಲು ದೆಹಲಿ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ನಿರ್ಧರಿಸಿದೆ. ಕೇಂದ್ರದ ಮಾಜಿ ಸಚಿವ, ಡಿಡಿಸಿಎ ಮಾಜಿ ಅಧ್ಯಕ್ಷ, ಬಿಸಿಸಿಐ ಮಾಜಿ ಉಪಾಧ್ಯಕ್ಷ ಅರುಣ್ ಜೇಟ್ಲಿ ಸ್ಮರಣಾರ್ಥ, ಕೋಟ್ಲಾ ಮೈದಾನಕ್ಕೆ ಅರುಣ್ ಜೇಟ್ಲಿ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.

ಕ್ರಿಕೆಟ್‌ ಪ್ರೇಮಿ, ಕ್ರಿಕೆಟ್ ಆಡಳಿತಗಾರರಾಗಿದ್ದ ಅರುಣ್‌ ಜೇಟ್ಲಿ, ದೆಹಲಿ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕ್ರಿಕೆಟ್ ಮೈದಾನ, ಯುವಕರಲ್ಲಿ ಕ್ರಿಕೆಟ್ ಆಸಕ್ತಿ ಬೆಳವಣಿಗೆ, ದೆಹಲಿಯ ಪ್ರತಿಭಾವಂತರಿಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಕೊಡಿಸುವಲ್ಲಿ ಹೆಚ್ಚಿನ ಶ್ರಮವಹಿಸಿದ್ದರು.

"ಟೀಂ ಇಂಡಿಯಾಕ್ಕೆ ಸ್ಟಾರ್ ಆಟಗಾರರು ಸೇರಲು ಜೇಟ್ಲಿ ನೆರವು": ಸೆಹ್ವಾಗ್

" ಶೀಘ್ರದಲ್ಲೇ ಫಿರೋಜ್‌ ಶಾ ಕೋಟ್ಲಾ ಮೈದಾನಕ್ಕೆ ಅರುಣ್‌ ಜೇಟ್ಲಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಲಾಗುತ್ತದೆ" ಎಂದು ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ, ಮಾಜಿ ಪತ್ರಕರ್ತ ರಜತ್ ಶರ್ಮಾ ಹೇಳಿದ್ದಾರೆ.

ಇದಲ್ಲದೆ, ಟೀಂ ಇಂಡಿಯಾದ ಯಶಸ್ವಿ ನಾಯಕ,ದೆಹಲಿ ಮೂಲದ ವಿರಾಟ್ ಕೊಹ್ಲಿ ಸಾಧನೆ ಪರಿಗಣಿಸಿ, ಕೋಟ್ಲಾ ಮೈದಾನದಲ್ಲಿ ಕೊಹ್ಲಿ ಹೆಸರಿನಲ್ಲಿ ಸ್ಟ್ಯಾಂಡ್ ಕಾಣಿಸಿಕೊಳ್ಳಲಿದೆ.

ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಆಶೀಶ್ ನೆಹ್ರಾ ಸೇರಿದಂತೆ ಪ್ರಮುಖ ಆಟಗಾರರ ಭವಿಷ್ಯ ರೂಪಿಸುವಲ್ಲಿ ಅರುಣ್ ಜೇಟ್ಲಿ ಅವರು ನೆರವಾಗಿದ್ದರು. ಫಿರೋಜ್ ಶಾ ಮೈದಾನವನ್ನು ಆಧುನೀಕರಿಸಿ, ವಿಶ್ವದರ್ಜೆ ಡ್ರೆಸಿಂಗ್ ರೂಮ್ ಮುಂತಾದ ಸುಲಭ್ಯ ಒದಗಿಸಿದ್ದರು.

2004ರಲ್ಲಿ ವಿರೇಂದ್ರ ಸೆಹ್ವಾಗ್ ಅವರ ಮದುವೆಯನ್ನು ಜೇಟ್ಲಿ ತಮ್ಮ ನಿವಾಸದಲ್ಲೇ ನಡೆಸಿದ್ದರು. ಜೇಟ್ಲಿ ಅಧಿಕೃತ ಬಂಗಲೆಯಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಟ್ಟಿದ್ದ ಜೇಟ್ಲಿ ಬಗ್ಗೆ ಸೆಹ್ವಾಗ್ ಟ್ವೀಟ್ ಮಾಡಿ"ವೈಯಕ್ತಿಕವಾಗಿ ಜೇಟ್ಲಿ ಅವರೊಂದಿಗೆ ನನ್ನದು ಬಹಳ ಸುಂದರವಾದ ಸಂಬಂಧ. ನನ್ನ ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಅವರ ಪ್ರೀತಿಪಾತ್ರರ ಜೊತೆ ಇವೆ. ಓಂ ಶಾಂತಿ "ಎಂದಿದ್ದರು.

Story first published: Tuesday, August 27, 2019, 17:30 [IST]
Other articles published on Aug 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X