ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫೀಫಾ ಪ್ಲೇಯರ್ ರೇಟಿಂಗ್‌ನಲ್ಲಿರುವ ಭಾರತದ ಟಾಪ್ 5 ಕ್ರಿಕೆಟಿಗರು ಇವರು

FIFA Player Ratings of India’s Top 5 Cricketers

ಬೆಂಗಳೂರು: ಪ್ರತೀವರ್ಷ ವೀಡಿಯೋ ಗೇಮ್ ಡೆವಲಪರ್ ಇಎ ಸ್ಪೋರ್ಟ್ಸ್ ತನ್ನ ಜನಪ್ರಿಯ ಫೀಫಾ ಫುಟ್ಬಾಲ್ ವೀಡಿಯೋ ಗೇಮ್‌ನ ಹೊಸ ಆವೃತ್ತಿ ಹೊರ ತರುತ್ತದೆ. ಪ್ರತೀಸಾರಿಯೂ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ಆಟಗಾರರು, ಕ್ಲಬ್‌ಗಳ ರೇಟಿಂಗ್ ನೋಡಲು ಕಾತರರಾಗಿರುತ್ತಾರೆ. ಯಾಕೆಂದರೆ ಈ ರೇಟಿಂಗ್ ವಿಶ್ವ ಫುಟ್ಬಾಲ್‌ನಲ್ಲಿ ಪಾರಮ್ಯ ಮೆರೆಯುವ ಆಟಗಾರರನ್ನು ಸೂಚಿಸುತ್ತದೆ. ಈಗಿನ ಫೀಫಾ ಪ್ಲೇಯರ್ಸ್ ರೇಟಿಂಗ್‌ನಲ್ಲಿ ಎಫ್‌ಸಿ ಬಾರ್ಸಿಲೋನಾದ ಲಿಯೋನೆಲ್ ಮೆಸ್ಸಿ (ಒಟ್ಟಾರೆ 94 ಅಂಕ), ಪೈಮೊಂಟೆ ಕ್ಯಾಲ್ಸಿಯೊ ತಂಡದ ಕ್ರಿಸ್ಚಿಯಾನೋ ರೊನಾಲ್ಡೋ (93), ಪ್ಯಾರಿಸ್ ಸೇಂಟ್‌ ಜರ್ಮನ್‌ ನೇಮರ್ (92), ರಿಯಲ್ ಮ್ಯಾಡ್ರಿಡ್‌ನ ಈಡನ್ ಹಝಾರ್ಡ್ (91), ಮ್ಯಾನ್ಚೆಸ್ಟರ್ ಸಿಟಿಯ ಕೆವಿನ್ ಡಿ ಬ್ರೂಯ್ನ್ (91) ಕ್ರಮವಾಗಿ ಮೊದಲ 5 ಸ್ಥಾನ ಪಡೆದುಕೊಂಡಿದ್ದಾರೆ.

ವಿರಾಟ್, ಧೋನಿ or ರೋಹಿತ್?: ತನ್ನ ಬ್ಯಾಟಿಂಗ್ ಪಾರ್ಟ್ನರ್ ಹೆಸರಿಸಿದ ಪಂತ್ವಿರಾಟ್, ಧೋನಿ or ರೋಹಿತ್?: ತನ್ನ ಬ್ಯಾಟಿಂಗ್ ಪಾರ್ಟ್ನರ್ ಹೆಸರಿಸಿದ ಪಂತ್

ಫುಟ್ಬಾಲ್ ಆಟಗಾರರ ದಾಳಿ, ರಕ್ಷಣಾತ್ಮಕ ಆಟ, ದೈಹಿಕ ಸಾಮರ್ಥ್ಯಗಳಿಗಾನುಸಾರ (Attack, Defence, Physicality ಆಧಾರದಲ್ಲಿ) ರೇಟಿಂಗ್ ನೀಡಲಾಗುತ್ತದೆ. ಇದೇ ರೇಟಿಂಗ್ ಆಧಾರದಲ್ಲಿ ಕ್ರಿಕೆಟ್‌ ಆಟಗಾರರ ಸಾಮರ್ಥ್ಯವನ್ನೂ ಊಹಿಸಬಹುದು. ಟಾಪ್ ಆಟಗಾರರನ್ನು ಗುರುತಿಸಬಹುದು.

ಮನೋಜ್ ತಿವಾರಿ-ರಮೇಶ್ ಪೊವಾರ್ ಮಧ್ಯೆ ಟ್ವಿಟರ್ ವಾರ್ ಜೋರು!ಮನೋಜ್ ತಿವಾರಿ-ರಮೇಶ್ ಪೊವಾರ್ ಮಧ್ಯೆ ಟ್ವಿಟರ್ ವಾರ್ ಜೋರು!

ಸ್ಬೋಟಾಪ್‌ ಡಾಟ್ ನೆಟ್ (sbotop.net) ಫೀಫಾ ಪ್ಲೇಯರ್ ರೇಟಿಂಗ್‌ನಲ್ಲಿರುವ ಭಾರತದ ಟಾಪ್ 5 ಆಟಗಾರರನ್ನು ಹೆಸರಿಸಿದೆ. ಆ ಕುತೂಹಲಕಾರಿ ಪಟ್ಟಿಯಲ್ಲಿರುವ ಆಟಗಾರರ ಮಾಹಿತಿ ಕೆಳಗಿದೆ ನೋಡಿ.

1. ವಿರಾಟ್ ಕೊಹ್ಲಿ

1. ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿಯನ್ನು ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಬೆಸ್ಟ್ ಬ್ಯಾಟ್ಸ್‌ಮನ್ ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದು. ಫೀಫಾ ಪ್ಲೇಯರ್ ರೇಟಿಂಗ್‌ನಲ್ಲಿ ರನ್ ಮೆಶೀನ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಎಲ್ಲಾ ಮಾದರಿಯಲ್ಲೂ ಅದ್ಭುತ ಬ್ಯಾಟಿಂಗ್‌ ಮಾಡುವ, ವಿಕೆಟ್‌ಗಳ ಮಧ್ಯೆ ಅಂತಾರಾಷ್ಟ್ರೀಯ ಓಟಗಾರನಂತೆ ಓಡುವ ಸಾಮರ್ಥ್ಯವನ್ನು ಪರಿಗಣಿಸಿ ಕೊಹ್ಲಿಗೆ ಒಟ್ಟಾರೆ 94 ರೇಟಿಂಗ್ ನೀಡಲಾಗಿದೆ. (Pace-93 | Attack-90 | Defence-96 | Physicality-94).

2. ರೋಹಿತ್ ಶರ್ಮಾ

2. ರೋಹಿತ್ ಶರ್ಮಾ

ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಬಿಟ್ಟರೆ ಹೆಚ್ಚು ಆಕರ್ಣೀಯ ಆಟಗಾರ ಹಿಟ್‌ಮ್ಯಾನ್ ರೋಹಿತ್ ಶರ್ಮಾ. 2013ರಿಂದಲೂ ಏಕದಿನದಲ್ಲಿ ರೋಹಿತ್ ವಿಶ್ವದ ಬೆಸ್ಟ್ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಮುಂಚೂಣಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಏಕದಿನದಲ್ಲಿ ಅತ್ಯಧಿಕ ವೈಯಕ್ತಿಕ ರನ್ ವಿಶ್ವದಾಖಲೆ (264 ರನ್) ರೋಹಿತ್ ಹೆಸರಿನಲ್ಲಿದೆ. ಫೀಫಾ ಪ್ಲೇಯರ್ ರೇಟಿಂಗ್‌ನಲ್ಲಿ ರೋಹಿತ್ 92 ಅಂಕಗಳನ್ನು ಪಡೆದುಕೊಂಡಿದ್ದಾರೆ (Pace-86 | Attack-94 | Defence-88 | Physicality-89).

3. ಜಸ್‌ಪ್ರೀತ್ ಬೂಮ್ರಾ

3. ಜಸ್‌ಪ್ರೀತ್ ಬೂಮ್ರಾ

ಅನಾರ್ಥಡಾಕ್ಸ್ ಬೌಲಿಂಗ್ ಎಸೆಯುವ ವೇಗಿ ಜಸ್‌ಪ್ರೀತ್ ಬೂಮ್ರಾ ವಿಶ್ವದಲ್ಲೇ ಅಪಾಯಕಾರಿ ಬೌಲರ್‌ಗಳಲ್ಲಿ ಒಬ್ಬರು. ಎಲ್ಲಾ ಮಾದರಿಗೂ ಒಗ್ಗಿಕೊಳ್ಳುವ ಬೂಮ್ರಾ ಉತ್ತಮ ಬೌಲಿಂಗ್ ಸಾಧನೆಗಾಗಿ ಗುರುತಿಸಿಕೊಂಡಿದ್ದಾರೆ. ವೇಗ, ನಿಯಂತ್ರಣ, ಸ್ವಿಂಗ್ ಕೌಶಲಗಳು ಬೂಮ್ರಾ ಅವರನ್ನು ವಿಶಿಷ್ಠ ಬೌಲರ್‌ಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ. ಜಸ್‌ಪ್ರೀತ್ ಅವರು ಫೀಫಾ ಪ್ಲೇಯರ್ಸ್ ರೇಟಿಂಗ್‌ನಲ್ಲಿ 90 ಪಾಯಿಂಟ್ ಪಡೆದುಕೊಂಡಿದ್ದಾರೆ (Pace-94 | Attack-93 | Defence-90 | Physicality-92).

4. ಎಂಎಸ್ ಧೋನಿ

4. ಎಂಎಸ್ ಧೋನಿ

ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹೆಚ್ಚು ಯಶಸ್ವಿ ನಾಯಕ ಎಂಎಸ್ ಧೋನಿ ಅನ್ನೋದರಲ್ಲಿ ಎರಡು ಮಾತಿಲ್ಲ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಬೆಸ್ಟ್ ಫಿನಿಷರ್ ಅಂತ ಗಮನ ಸೆಳೆದವರು ಕೂಲ್ ಕ್ಯಾಪ್ಟನ್ ಧೋನಿ. 2019ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಭಾರತ ಸೋತ ಬಳಿಕ ಧೋನಿ ಯಾವುದೇ ಪಂದ್ಯವನ್ನಾಡಿಲ್ಲ. ಆದರೆ ಧೋನಿ ಇವತ್ತಿಗೂ ಬೆಸ್ಟ್ ಕ್ರಿಕೆಟರ್ ಅನ್ನೋದನ್ನು ನಾವು ಒಪ್ಪಿಕೊಳ್ಳಬೇಕು. ಫೀಫಾ ಪ್ಲೇಯರ್ ರೇಟಿಂಗ್‌ನಲ್ಲಿ ಧೋನಿ 89 ಅಂಕ ಪಡೆದಿದ್ದಾರೆ (Pace-90 | Attack-94 | Defence-89 | Physicality-91).

5. ಯುಜುವೇಂದ್ರ ಚಾಹಲ್

5. ಯುಜುವೇಂದ್ರ ಚಾಹಲ್

ಟೀಮ್ ಇಂಡಿಯಾದಲ್ಲಿ ತರಲೆ ಮಾಡುತ್ತಲೇ ಗಮನ ಸೆಳೆಯುವ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅಪ್ಪಟ ಪ್ರತಿಭಾವಂತ. ಸದ್ಯ 29ರ ಹರೆಯದವರಾಗಿರುವ ಚಾಹಲ್ ತಮ್ಮ ವೃತ್ತಿ ಜೀವನದಲ್ಲಿ ಸಾಧನೆಯ ಶಿಖರ ಏರಲಿದ್ದಾರೆ. ಚಾಹಲ್ ಹಿಂದಿನ ಎಲ್ಲಾ ಪ್ರದರ್ಶನ, ಸಾಧನೆಗಳನ್ನು ಗಮನಿಸಿದಾಗ ಫೀಫಾ ಪ್ಲೇಯರ್ ರೇಟಿಂಗ್‌ನಲ್ಲಿ ಒಟ್ಟಾರೆ 86 ಅಂಕ ಪಡೆದುಕೊಂಡಿದ್ದಾರೆ (Pace-87 | Attack-91 | Defence-84 | Physicality-85).

Story first published: Friday, August 14, 2020, 16:08 [IST]
Other articles published on Aug 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X