ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ತಿರುಗಿ ಬೀಳಲಿದೆ ಭಾರತ ಎಂದ ಆಸಿಸ್ ನಾಯಕ

Finch expects Kohli & co to fight back hard in second ODI

ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಸರಣಿಯಲ್ಲಿ ಮೊದಲ ಏಕದಿನವನ್ನು ಟೀಮ್ ಇಂಡಿಯಾ ಹೀನಾಯವಾಗಿ ಸೋಲು ಕಂಡಿದೆ. ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಮತ್ತು ಡ್ಯಾಷಿಂಗ್ ಓಪನರ್ ಡೇವಿಡ್ ವಾರ್ನರ್ ಇಬ್ಬರೂ ಶತಕದ ಸಾಧನೆಯ ಜೊತೆಗೆ ಅಜೇಯವಾಗುಳಿದು ತಂಡವನ್ನು ಗೆಲ್ಲಿಸಿದರು. ಈ ಗೆಲುವಿನ ಬಳಿಕ ಆಸಿಸ್ ನಾಯಕ ಆರೋನ್ ಫಿಂಚ್ ಪ್ರತಿಕ್ರಿಯೆ ನೀಡಿದ್ದಾರೆ.

ಟೀಮ್ ಇಂಡಿಯಾ ತಂಡ ಮೊದಲ ಪಂದ್ಯವನ್ನು ಸೋತಿದ್ದರೂ ಅದು ಬಲಿಷ್ಟವಾಗಿ ತಿರುಗಿ ಬೀಳಲಿದೆ ಎಂಬ ಮಾತನ್ನು ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಹೇಳಿಕೆ ನೀಡಿದ್ದಾರೆ. ಮೊದಲ ಪಂದ್ಯದ ಗೆಲುವಿನ ಬಳಿಕ ಮಾತನಾಡಿರುವ ಫಿಂಚ್ ಈ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ದ್ವಿತೀಯ ಏಕದಿನಕ್ಕೆ ಭಾರತ ಸಂಭಾವ್ಯ ತಂಡಭಾರತ vs ಆಸ್ಟ್ರೇಲಿಯಾ: ದ್ವಿತೀಯ ಏಕದಿನಕ್ಕೆ ಭಾರತ ಸಂಭಾವ್ಯ ತಂಡ

ಎರಡನೇ ಪಂದ್ಯ ರಾಜ್‌ಕೋಟ್‌ನಲ್ಲಿ ನಾಳೆ ನಡೆಯಲಿದೆ. ಈಗಾಗಲೇ ಎರಡೂ ತಂಡಗಳು ರಾಜ್‌ಕೋಟ್‌ನತ್ತ ಧಾವಿಸಿದ್ದು ಅಭ್ಯಾಸ ಆರಂಭಿಸಿದೆ. ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಗೆದ್ದುಕೊಂಡಿರುವ ಆಸ್ಟ್ರೇಲಿಯಾ ಎರಡನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಟೀಮ್ ಇಂಡಿಯಾ ಕುರಿತಾಗಿ ಮಾತನಾಡಿದ್ದು ಟೀಮ್ ಇಂಡಿಯಾ ಬಲಿಷ್ಟವಾಗಿ ತಿರುಗಿ ಬೀಳುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ. ಟೀಮ್ ಇಂಡಿಯಾವನ್ನು ಕನಿಷ್ಠವಾಗಿ ಕಂಡರೆ ಬೆಲೆ ತೆರಬೇಕಾದೀತು, ಯಾಕೆಂದರೆ ವಿಶ್ವದರ್ಜೆಯ ಆಟಗಾರರು ಟೀಮ್ ಇಂಡಿಯಾದಲ್ಲಿ ಇದ್ದಾರೆ ಎಂದಿದ್ದಾರೆ.

ಕೊಹ್ಲಿ 'ಸ್ಪಿರಿಟ್ ಆಫ್ ಕ್ರಿಕೆಟ್‌' ಪ್ರಶಸ್ತಿ ಪಡೆದ ಬಳಿಕ ಪಾಕ್ ವೇಗಿಯ ಪ್ರತಿಕ್ರಿಯೆಕೊಹ್ಲಿ 'ಸ್ಪಿರಿಟ್ ಆಫ್ ಕ್ರಿಕೆಟ್‌' ಪ್ರಶಸ್ತಿ ಪಡೆದ ಬಳಿಕ ಪಾಕ್ ವೇಗಿಯ ಪ್ರತಿಕ್ರಿಯೆ

ಇದೇ ಸಂದರ್ಭದಲ್ಲಿ ತಮ್ಮ ಆರಂಭಿಕ ಜೋಡಿ ವಾರ್ನರ್ ಬಗ್ಗೆಯೂ ಮಾತನಾಡಿದ್ದಾರೆ. ನಂಬಲಾಗದಷ್ಟು ಅದ್ಭುತವಾಗಿ ವಾರ್ನರ್ ಆಡಿದ್ದಾರೆ. ಆತ ಒಮ್ಮೆ ಆಟಕ್ಕೆ ಒಗ್ಗಿಕೊಂಡರೆ ಆತನಿಗೆ ಬೌಲಿಂಗ್ ಮಾಡುವುದು ಅತ್ಯಂತ ಕಷ್ಟ. ಮೈದಾನದ ಎಲ್ಲಾ ಕಡೆಯೂ ಚೆಂಡನ್ನಟುವ ವಾರ್ನರ್ ನಿಯಂತ್ರಣ ಮಾಡುವುದು ತುಂಬಾ ಕಷ್ಟ ಎಂದು ಹೇಳಿಕೆ ನೀಡಿದ್ದಾರೆ.

Story first published: Thursday, January 16, 2020, 17:48 [IST]
Other articles published on Jan 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X