ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡದಲ್ಲಿ ಕ್ರಿಕೆಟ್ ಕಾನೂನು: ಇಂಗ್ಲೀಷ್ ನಂತರ ಕನ್ನಡ ಭಾಷೆಗೆ ಮೊದಲ ಸ್ಥಾನದ ಗೌರವ

First After English: Cricket laws in Kannada: Vinayak N Kulkarni Person behind this achievement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್‌ಗೆ ತನ್ನದೇ ಆದ ಕಾನೂನುಗಳು ಇವೆ. ಆಟ ಸುಗಮವಾಗಿ ಸಾಗಲು ಈ ನಿಯಮಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅಂತಾರಾಷ್ಟ್ರೀಯ ಕ್ರೀಡೆಯಾಗಿರುವ ಕಾರಣ ಇದು ಸಹಜವಾಗಿಯೇ ಇಂಗ್ಲೀಷ್ ಭಾಷೆಯಲ್ಲಿ ರಚನೆಯಾಗಿರುತ್ತದೆ. ಆದರೆ ಕ್ರಿಕೆಟ್ ಕಾನೂನಿನ ವಿಚಾರದಲ್ಲಿ ಕನ್ನಡಿಗರು ಹೆಮ್ಮೆಪಡುವಂತಾ ಸಂಗತಿಯೊಂದಿದೆ.

ಕ್ರಿಕೆಟ್‌ನಲ್ಲಿ ರಚನೆಯಾಗಿರುವ ಕಾನೂನು ಇಂಗ್ಲೀಷ್ ಹೊರತುಪಡಿಸಿದರೆ ಇತರೆ ಕೇವಲ 3 ಭಾಷೆಯಲ್ಲಿ ಮಾತ್ರವೇ ರಚನೆಯಾಗಿದೆ. ಅದರಲ್ಲಿ ಮೊದಲನೆಯ ಸ್ಥಾನವೇ ಕನ್ನಡಕ್ಕಿದೆ. ಉಳಿದಂತೆ ಹಿಂದಿ ಹಾಗೂ ಫ್ರೆಂಚ್ ಭಾಷೆಯಲ್ಲಿ ಕ್ರಿಕೆಟ್ ಕಾನೂನು ರಚನೆಯಾಗಿದ್ದು ಕನ್ನಡದ ಬಳಿಕ ಈ ಎರಡು ಭಾಷೆಗಳು ಸ್ಥಾನವನ್ನು ಪಡೆದುಕೊಂಡಿದೆ.

ವಿಶ್ವಕ್ರಿಕೆಟ್‌ನಲ್ಲಿ ಮತ್ತೊಂದು ಬೃಹತ್ ಚೇಸಿಂಗ್: ಇಂಗ್ಲೆಂಡ್ ವಿರುದ್ಧ 329 ರನ್ ಬೆನ್ನಟ್ಟಿ ಗೆದ್ದ ಐರ್ಲೆಂಡ್!ವಿಶ್ವಕ್ರಿಕೆಟ್‌ನಲ್ಲಿ ಮತ್ತೊಂದು ಬೃಹತ್ ಚೇಸಿಂಗ್: ಇಂಗ್ಲೆಂಡ್ ವಿರುದ್ಧ 329 ರನ್ ಬೆನ್ನಟ್ಟಿ ಗೆದ್ದ ಐರ್ಲೆಂಡ್!

ಕನ್ನಡ ಭಾಷೆಗೆ ಈ ಗೌರವ ಪ್ರಾಪ್ತಿಯಾಗಲು ಕಾರಣ ಬೆಂಗಳೂರಿನ ವಿನಾಯಕ್ ಎನ್ ಕುಲ್ಕರ್ಣಿ. ಮಾಜಿ ಅಂತಾರಾಷ್ಟ್ರೀಯ ಅಂಪೈರ್ ಆಗಿರುವ ವಿನಾಯಕ್ ಎನ್ ಕುಲ್ಕರ್ಣಿ ಕ್ರಿಕೆಟ್ ಕಾನೂನನ್ನು ಕನ್ನಡದಲ್ಲಿ ರಚನೆ ಮಾಡಿ ಈ ಸಾಧನೆಗೆ ಕಾರಣರಾಗಿದ್ದಾರೆ. ಈ ಮೂಲಕ ಕನ್ನಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಪಡೆದುಕೊಂಡಿದೆ.

2017ರಲ್ಲಿ ಕ್ರಿಕೆಟ್ ನಿಯಮಗಳ 7ನೇ ಕಾನೂನು ಸಂಹಿತೆ ಬಿಡುಗಡೆಯಾದಾಗ ವಿನಾಯಕ್ ಎನ್ ಕುಲ್ಕರ್ಣಿ ಕನ್ನಡದ ಮೊದಲ ಅಧಿಕೃತ ಆವೃತ್ತಿಯನ್ನು ಹೊರತರುವಲ್ಲಿ ಯಶಸ್ವಿಯಾದರು. 2019ರಲ್ಲಿ ಇದರಲ್ಲಿ ತಿದ್ದುಪಡಿ ಆದ ನಂತರ ಎರಡನೇ ಆವೃತ್ತಿಯನ್ನು ವಿನಾಯಕ್ ಕುಲ್ಕರ್ಣಿ ಬಿಡುಗಡೆಗೊಳಿಸಿದರು. ಇದು ಫ್ರೆಂಚ್ ಹಾಗೂ ಹಿಂದಿ ಭಾಷೆಗಿಂತ ಬಹಳ ಮುಂಚಿತವಾಗಿ ರಚನೆಯಾಯಿತು.

ಕಮ್‌ಬ್ಯಾಕ್‌ ಬಳಿಕ ಧೋನಿ, ಕೊಹ್ಲಿ ಬೆಂಬಲ ಹೇಗಿತ್ತು: ವಿವರವಾಗಿ ಬಿಚ್ಚಿಟ್ಟ ಯುವರಾಜ್ ಸಿಂಗ್ಕಮ್‌ಬ್ಯಾಕ್‌ ಬಳಿಕ ಧೋನಿ, ಕೊಹ್ಲಿ ಬೆಂಬಲ ಹೇಗಿತ್ತು: ವಿವರವಾಗಿ ಬಿಚ್ಚಿಟ್ಟ ಯುವರಾಜ್ ಸಿಂಗ್

ಈ ವಿಚಾರವಾಗಿ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯಿಸಿದ ವಿನಾಯಕ್ ಕುಲ್ಕರ್ಣಿ "ಕ್ರಿಕೆಟ್ ನನಗೆ ಸಾಕಷ್ಟು ನೀಡಿದೆ. ಹಾಗಾಗಿ ಅದಕ್ಕಾಗಿ ಏನಾದರೂ ವಾಪಾಸ್ ನಿಡುವುದು ನನ್ನ ಕರ್ತವ್ಯವಾಗಿತ್ತು. ಬಿಸಿಸಿಐನ ಸಿಬ್ಬಂದಿಯಾಗಿ ಕರ್ನಾಟಕದ ಸ್ಥಳೀಯ ಅಂಪೈರ್‌ಗಳಿಗೆ ಕ್ರಿಕೆಟ್ ಕಾನೂನಿನ ಬಗ್ಗೆ ಮಾಹಿತಿ ನೀಡುವಾಗ ಸ್ಥಳೀಯ ಭಾಷೆಯಲ್ಲಿಯೇ ಈ ಕಾನೂನು ರಚನೆಯಾದರೆ ಅರ್ಥ ಮಾಡಿಕೊಳ್ಳು ಸುಲಭವಾಗಿರುತ್ತದ ಎಂದು ನನ್ನ ಅರಿವಿಗೆ ಬಂತು. ಹಾಗಾಗಿ ಭಾಷಾಂತರ ಮಾಡಲು ತೀರ್ಮಾನಿಸಿದೆ" ಎಂದು ಹೇಳಿದ್ದಾರೆ.

Story first published: Wednesday, August 5, 2020, 13:50 [IST]
Other articles published on Aug 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X